Crime News

ಗ್ಯಾಸ್ ಸಿಲಿಂಡರ್ ಕಳವು

            ದಿನಾಂಕ: 11-10-2019 ರಂದು ಸೋಮವಾರಪೇಟೆ ತಾಲ್ಲೂಕು ತಣ್ಣೀರುಹಳ್ಳ ಗ್ರಾಮದ  ಅಂಗನವಾಡಿ ಕೇಂದ್ರದ ಬಾಗಲಿನ ಬೀಗವನ್ನು ಯಾರೋ ಕಳ್ಳರು ಮುರಿದು 4,000 ರೂ ಬೆಲೆಯ ಗ್ಯಾಸ್ ಸಿಲಿಂಡರ್ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಕುಸುಮಾವತಿ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಯುವಕ ಆತ್ಮಹತ್ಯೆ

            ದಿನಾಂಕ: 11-10-2019 ರಂದು ಸೋಮವಾರಪೇಟೆ ತಾಲ್ಲೂಕು ಚೌಡ್ಲು ಗ್ರಾಮದ ನಿವಾಸಿ ಸುಮಂತ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಮನಸ್ಸಿಗೆ ಬೇಸರ ಮಾಡಿಕೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ತಾಯಿ ಶ್ರೀಮತಿ ಪ್ರೇಮ ಎಂಬುವವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ

            ಸೋಮವಾರಪೇಟೆ ತಾಲ್ಲೂಕು ಅಭ್ಯತ್ ಮಂಗಲ ಗ್ರಾಮದ ಅಭ್ಯತ್ ಮಂಗಲ ಗ್ರಾಮದ ನಿವಾಸಿ ಬಾಬು ರಾಜ್ ಎಂಬುವವರು ದಿನಾಂಕ: 28-09-2019 ರಂದು ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಕೇರಳ ರಾಜ್ಯದ ಇರಿಟ್ಟಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು  ಈ ವರೆಗೂ ವಾಪಾಸ್ಸು ಬಾರದೇ ಇದ್ದು ಅಕ್ಕಪಕ್ಕದವರಲ್ಲಿ ಹಾಗೂ ನೆಂಟರಿಷ್ಟರಲ್ಲಿ ವಿಚಾರಿಸಿದರೂ ಸಹ ಪತ್ತೆಯಾಗದೇ ಇದ್ದು ಈ ಬಗ್ಗೆ ಅವರ ಪತ್ನಿ ಶ್ರೀಮತಿ ಫಿಲೋಮಿನಾ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸುಲಿಗೆ ಪ್ರಕರಣ

            ದಿನಾಂಕ : 10-10-2019 ರಂದು ವಿರಾಜಪೇಟೆ ತಾಲ್ಲೂಕು ಹಳ್ಳಿಗಟ್ಟು ಗ್ರಾಮದ ನಿವಾಸಿ ಶ್ರೀಮತಿ ಸೀತಮ್ಮ ಎಂಬುವವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ತೆಂಗಿನಕಾಯಿ ಕುಯ್ಯುವ ಕೆಲಸದ ಬಗ್ಗೆ ಕೇಳಿಕೊಂಡು ಬಂದು ಕೆಲಸವಿಲ್ಲವೆಂದು ಹೇಳಿದ್ದರಿಂದ ವಾಪಾಸ್ಸು ಹೋಗಿರುತ್ತಾನೆ. ಮರುದಿನ ದಿನಾಂಕ: 11-10-2019 ರಂದು ಸೀತಮ್ಮ ರವರು ಒಬ್ಬರೆ ಮನೆಯಲ್ಲಿರುವಾಗ ಅದೇ ಅಪರಿಚಿತ ವ್ಯಕ್ತಿ ಮನೆಯ ಬಳಿ ಹೋಗಿ ಕುಡಿಯಲು ನೀರು ಕೇಳಿದ್ದು, ನೀರು ತರಲು ಮನೆಯೊಳಗೆ ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಯು ಸೀತಮ್ಮ ರವರ  ಕುತ್ತಿಗೆಯಲ್ಲಿದ್ದ 70,000 ರೂ ಬೆಲೆಬಾಳುವ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿರುತ್ತಾನೆ. ಅಪರಿಚಿತ ವ್ಯಕ್ತಿಯು ದೃಡಕಾಯನಾಗಿದ್ದು ಅಂದಾಜು 25 ರಿಂದ 30 ವರ್ಷ ಪ್ರಾಯದವನಾಗಿದ್ದು ಈ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಲಾಟರಿ ಮಾರಾಟ ಪ್ರಕರಣ           

  ದಿನಾಂಕ: 12-10-2019 ರಂದು ವಿರಾಜಪೇಟೆ ಪಟ್ಟಣದ ದೊಟ್ಟಟ್ಟಿ ಚೌಕಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಯನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ಪತ್ತೆ ಮಾಡಿ ಕೈಕೇರಿ ಗ್ರಾಮದ ನಿವಾಸಿ ಬಾಲಕೃಷ್ಣ ಎಂಬುವವರು ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.