Crime News

ಕೊಲೆ ಪ್ರಕರಣ:

ದಿನಾಂಕ 12-10-2019 ರಂದು ಗೋಣಿಕೊಪ್ಪ ಠಾಣಾ ಸರಹದ್ದಿನ ಧನುಗಾಲ ಗ್ರಾಮದ ಮಾಯಮುಡಿ ನಿವಾಸಿ ಮಾಚಿಮಾಡ ಸಿ.ದೇವಾನಂದ ರವರ ತೋಟದ ಲೈನು ಮನೆಯಲ್ಲಿ ವಾಸವಾಗಿರುವ ಶಿವು ಎಂಬಾತ ತನ್ನ ಪತ್ನಿ ಶ್ರೀಮತಿ ರೂಪ ಎಂಬಾಕೆಯನ್ನು  ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದು, ಈ ಸಂಬಂಧ ತೋಟದ ಮಾಲೀಕ ಮಾಚಿಮಾಡ ಸಿ ದೇವಾನಂದರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆ ಕಳವು

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದ ನಿವಾಸಿ ಶ್ರೀಮತಿ ಚೋಡುಮಾಡ ಎನ್‍. ಪೋವಮ್ಮನವರ ಮನೆಗೆ ದಿನಾಂಕ 12-10-2019 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹೆಂಚುಗಳನ್ನು ತೆಗೆದು  ಮನೆಯ ಒಳಗೆ ಪ್ರವೇಶ ಮಾಡಿ   ಹಾಸಿಗೆಯ ತಲೆದಿಂಬಿನ ಕೆಳಗಡೆ ಇಟ್ಟಿದ್ದ 5000/- ರೂ ನಗದು ಹಣವನ್ನು ಕಳ್ಳನತ ಮಾಡಿಕೊಮಡು ಹೋಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ಆತ್ಮಹತ್ಯೆ:

ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ಕೆ.ಎಸ್. ಜಯಕುಮಾರ ಎಂಬವರ ತಂದೆ ಶಂಕರ್ ದಾಸನ್‍ರವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 12-10-2019 ರಂದು ತಾವು ವಾಸವಾಗಿರುವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಅಕ್ರಮ ಪ್ರವೇಶ, ಕೊಲೆ ಬೆದರಿಕೆ:

ಮಡಿಕೇರಿ ತಾಲೋಕು ಕಾಂತೂರು ಮುರ್ನಾಡು ಗ್ರಾಮದ ಶ್ರೀಮತಿ ಸರ್ಫನ್ನೀಸ ಎಂಬವರು ದಿನಾಂಕ 13-10-2019 ರಂದು ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಕಾಂತೂರು ಮುರ್ನಾಡು ಗ್ರಾಮದ ಸೈಫ್ ಆಲಿ ಮತ್ತು ನಿಶಾನ್‍ ಎಂಬವರುಗಳು ಹಳೆಯ ದ್ವೇಷವನ್ನಿಟ್ಟುಕೊಂಡು ಶ್ರೀಮತಿ ಸರ್ಫನ್ನೀಸ ರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಅಲ್ಲದೆ ಕಲ್ಲುಗಳನ್ನು ತೂರಿ ಮನೆಯ ಕಿಟಕಿ ಗ್ಲಾಸ್‍ಗಳನ್ನು ಒಡೆದುಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.