Crime News

ಮಗು ಹತ್ಯೆ ಪ್ರಕರಣದ ಅಪರಾಧಿಗೆ ಶಿಕ್ಷೆ

            ದಿನಾಂಕ: 02-12-2018 ರಂದು ವಿರಾಜಪೇಟೆ ತಾಲ್ಲೂಕು ಬಾಡಗ ಗ್ರಾಮದ ಚೂರಿಕಾಡು ನಿವಾಸಿ ಪಣಿಎರವರ ರವಿ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಪತ್ನಿ ಶ್ರೀಮತಿ ಭಾಗು ರವರ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದಾಗ ಆಕೆ ತಪ್ಪಿಸಿಕೊಂಡಿದ್ದು, ನಂತರ ಆರೋಪಿಯು ಮನೆಯಲ್ಲಿ ಮಲಗಿದ್ದ ಮಗು ಪ್ರಶಾಂತ್ ನ ಕುತ್ತಿಗೆ ಹಿಸುಕಿದ್ದು, ಭಾಗುವರು ಮಗುವನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದ್ದು ಈ ಬಗ್ಗೆ ಶ್ರೀಮತಿ ಭಾಗು ರವರು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

            ಕುಟ್ಟ ವೃತ್ತ ನಿರೀಕ್ಷಕರಾಗಿದ್ದ ಶ್ರೀ ಪಿ.ಕೆ ರಾಜು, ಸಿ.ಪಿ.ಐ ರವರು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿ ಪಣಿಎರವರ ರವಿ ತಂದೆ ಚೋಮ, ವಾಸ: ಚಟ್ಟಂಗಡ ರಮೇಶ್ ರವರ ಲೈನು ಮನೆ, ಚೂರಿಕಾಡು, ಬಾಡಗ ಗ್ರಾಮ, ವಿರಾಜಪೇಟೆ ತಾಲ್ಲೂಕು ಎಂಬುವವರನ್ನು ದಸ್ತಗಿರಿ ಮಾಡಿದ್ದರು. ಶ್ರೀ ಸಿ.ಎನ್ ದಿವಾಕರ್, ಸಿ.ಪಿ.ಐ ರವರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡು ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.            

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನಾಯಾಲಯ, ವಿರಾಜಪೇಟೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು , ಸರ್ಕಾರಿ ಅಭಿಯೋಜಕರಾದ ಶ್ರೀ ನಾರಾಯಣ ರವರು ವಾದ ಮಂಡಿಸಿದ್ದು ಸಾಕ್ಷ್ಯಾಧಾರಗಳಿಂದ ಆರೋಪಿಯ ವಿರುದ್ದ ಆರೋಪ ಸಾಬೀತಾದ್ದರಿಂದ ದಿನಾಂಕ: 10-10-2019 ರಂದು ಮಾನ್ಯ ನ್ಯಾಯಾಧೀಶರು ಅಪರಾಧಿಗೆ ಕಲಂ: 304(2) ಐ.ಪಿ.ಸಿ ಗೆ 3 ವರ್ಷ, ಕಲಂ: 323 ಐ.ಪಿ.ಸಿ ಗೆ 1 ವರ್ಷ ಸಾದಾ ಸಜೆ ಮತ್ತು ರೂ. 15,000 ದಂಡ ವಿಧಿಸಿ ಆದೇಶಿಸಿರುತ್ತಾರೆ.

ವ್ಯಕ್ತಿ ಕಾಣೆ

            ದಿನಾಂಕ: 12-10-2019 ರಂದು ಮಡಿಕೇರಿ ತಾಲ್ಲೂಕು ಕೊಳಗದಾಳು ಗ್ರಾಮದ ನಿವಾಸಿ ಯೋಗೇಶ್ ಎಂಬುವವರು ಅವರ ಸ್ವಗ್ರಾಮ ಕೆ.ಆರ್.ಪೇಟೆಗೆ ಹೋಗಿಬರುತ್ತೇನೆಂದು ಅವರ ಪತ್ನಿಗೆ ಹೇಳಿ ಹೋಗಿದ್ದು ಕೆ.ಆರ್.ಪೇಟೆಗೆ ಈ ವರೆಗೂ ಹೋಗಿರುವುದಿಲ್ಲ.  ಈ ಬಗ್ಗೆ ಸಂಬಂದಿಕರಲ್ಲಿ ವಿಚಾರಿಸಿದ್ದು ಈ ವರೆಗೂ ಪತ್ತೆಯಾಗದೇ ಕಾಣೆಯಾಗಿರುವುದಾಗಿ ಪತ್ನಿ ಶ್ರೀಮತಿ ಜಯಂತಿ ಎಂಬುವವರು ನೀಡಿದ ದೋರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

            ಸೋಮವಾರಪೇಟೆ ತಾಲ್ಲೂಕು ಮಾಲಂಬಿ ಗ್ರಾಮದ ನಿವಾಸಿ ಚಂದ್ರಪ್ಪ ಎಂಬುವವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ: 12-10-2019 ರಂದು ಮದ್ಯಪಾನ ಮಾಡಿ ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ಸುದೀಪ್ ಎಂಬುವವರು ನೀಡಿದ ದೂರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 28-09-2019 ರಂದು ಸೋಮವಾರಪೇಟೆ ತಾಲ್ಲೂಕು ಮುಳ್ಳುಸೋಗೆ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಬೈಕ್ ನಂ ಕೆಎ-12-ಹೆಚ್-0384 ರ ಸವಾರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಕೆ-9979 ರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸವಾರ ಬೋಪಯ್ಯ ಹಾಗೂ ದೀಪಕ್ ಎಂಬುವವರು ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನಿತೀಶ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 14-10-2019 ರಂದು ವಿರಾಜಪೇಟೆ ತಾಲ್ಲೂಕು ಮೈತಾಡಿ ಗ್ರಾಮದ ನಿವಾಸಿ ಭೀಮ ಎಂಬುವವರಿಗೆ ಅದೇ ಗ್ರಾಮ ನಿವಾಸಿ ಬಿದ್ದಪ್ಪ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

ದಿನಾಂಕ: 08-10-2019 ರಂದು ಸೋಮವಾರಪೇಟೆ ತಾಲ್ಲೂಕು ಯಡವನಾಡು ಗ್ರಾಮದ ನಿವಾಸಿ ಶ್ರೀಮತಿ ಪಾಪಮ್ಮ ಎಂಬುವವರನ್ನು ಆಕೆಯ ಪತಿ ರಾಮು ಎಂಬುವವರು ವೈಯಕ್ತಿಕ ಕಾರಣದಿಂದ ಹೊಡೆದು ಕೊಲೆ ಮಾಡಿ ಅರಣ್ಯದಂಚಿನ ಕಾಡುಗಿಡಗಳ ಪೊದೆಯ ಒಳಗೆ ಮಲಗಿಸಿ ಕೊಲೆಯನ್ನು ಮರೆ ಮಾಚಿದ್ದು ದಿನಾಂಕ: 14-10-2019 ರಂದು ಮೃತೆಯ ಶವ ಪತ್ತೆಯಾಗಿದ್ದು ಈ ಬಗ್ಗೆ ಶ್ರೀಮತಿ ಶಾಂತಿ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.