Crime News

ವ್ಯಕ್ತಿ ಮೇಲೆ ಹಲ್ಲೆ

ಸಿದ್ದಾಪುರ ಠಾಣಾ ಸರಹದ್ದಿನ ಕರಡಿಗೋಡು ಗ್ರಾಮದ ನಿವಾಸಿ ಬಿ.ಎಸ್. ಗಿರೀಶ ಮತ್ತು ಅವರ ಪತ್ನಿ ಶ್ರೀಜಾರವರ ವಿಚ್ಛೇದನೆ ವಿಚಾರದಲ್ಲಿ ಬಿ.ಎಸ್. ಗಿರೀಶ ರವರೊಂದಿಗೆ ಶ್ರೀಜಾ ಹಾಗು ಅವರ ಅಕ್ಕನ ಗಂಡ ರಂಜಿತ್ ಹಾಗು ಮಗ ಸಂತೋಷ್‍ ರವರು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ ವಿಚಾರದಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

ದಿನಾಂಕ 16-102-109 ರಂದು ವಿರಾಜಪೇಟೆ ತಾಲೋಕು ಪಾಲಂಗಾಲ ಗ್ರಾಮದ ನಿವಾಸಿ ಪಾಲೇಂಗಡ ಸಿ. ರಾಹುಲ್ ಕಾರ್ಯಪ್ಪ ಹಾಗು ಅವರ ತಂದೆ ಪಿ. ಎನ್‍ ಚಂಗಪ್ಪ ನವರ ಮೇಲೆ ವಿರಾಜಪೇಟೆ ನಗರದ ಜಯೇಶ್ ಎಂಬವರು ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿ ಹತ್ತಿರ ಯು.ಪಿ.ಎಸ್. ರಿಪೇರಿ ಸಂಬಂಧ ಜಗಳ ಮಾಡಿ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಪಿ.ಸಿ. ರಾಹುಲ್‍ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ವಿರಾಜಪೇಟೆ ನಗರದ ಟಿ.ಜಿ. ಜಯೇಶ ಎಂಬವರು ದಿನಾಂಕ 16-10-2019 ರಂದು ವಿರಾಜಪೇಟೆ ನಗರದ ಕಡೆಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಪಾಲಂಗಾಲ ಗ್ರಾಮದ ರಾಹುಲ್ ಹಾಗು ಅವರ ತಂದೆ ಪಿ.ಎನ್. ಚಂಗಪ್ಪ ಎಂಬವರು ಟಿ.ಜಿ. ಜಯೇಶ್ ರವರನ್ನು ದಾರಿಯಲ್ಲಿ ಅಡ್ಡಗಟ್ಟಿ ಸಿ.ಸಿ. ಕ್ಯಾಮರಾ ಅಳವಡಿಸುವ ವಿಚಾರದಲ್ಲಿ ಜಗಳ ಮಾಡಿದ್ದು ಅಲ್ಲದೆ ಟಿ.ಜಿ. ಜಯೇಶ್‍ ರವರ ಮೇಲೆ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಸ್ವಸ್ಥ ವ್ಯಕ್ತಿ ಸಾವು

ಕೇರಳದ ಕ್ಯಾಲಿಕಟ್‍ ನಿಂದ ಕೊಡಗು ಜಿಲ್ಲೆಗೆ ಬಂದು ನೆಲೆಸಿದ್ದ ರಾಜು ಎಂಬವರು ಕಿಡ್ನಿ ಹಾಗು ಲಿವರ್‍ ಕಾಯಿಲೆಯಿಂದ ಬಳಲುತ್ತಿದ್ದು ಕಾಯಿಲೆ ಜಾಸ್ತಿಯಾಗಿದ್ದರಿಂದ ಅವರಿಗೆ ಪರಿಚಯವಿರುವ ವಿರಾಜಪೇಟೆ ನಗರದ ಸಿ.ಕೆ. ನೌಶಿರ್‍ ರವರು ರಾಜುರವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ರಾಜುರವರ ಮೃತಪಟ್ಟಿದ್ದು, ಈ ಸಂಬಂಧ ಸಿ.ಕೆ. ನೌಶಿರ್‍ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್‍ ಸೈಕಲ್ ಕಳವು

ಸೋಮವಾರಪೇಟೆ ನಗರದ ನಿವಾಸಿ ಮಧುಸೂದನ್‍ ರವರು ದಿನಾಂಕ 14-10-2019 ರಂದು ತಮ್ಮ ಬಾಪ್ತು ಕೆಎ-12-ಹೆಚ್-4342ರ ವಿಕ್ಟರ್ ಬೈಕನ್ನು ಸೋಮವಾರಪೇಟೆ ನಗರದ ಜೇನು ಸೊಸೈಟಿ ಕಾಂಪೌಂಡಿನ ಒಳಗೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜಾನುವಾರು ಸಾಗಾಟ:

ದಿನಾಂಕ 16/10/19 ರಂದು ಸಮಯ 16.00 ಗಂಟೆಗೆ  ಪಿರಿಯಾಪಟ್ಟಣದ ಸಂತೆ ಮಾಳದ ನಿವಾಸಿ ಮಧು ರವರು ರಫಿಕ್ ಮತ್ತು ಲೋಕೇಶ್ ಎಂಬವರ ತಿಳಿಸಿದ ಮೇರೆಗೆ ತಮ್ಮ ಬಾಪ್ತು ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 6 ಎಮ್ಮೆ-ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹಗ್ಗದಿಂದ ಕಟ್ಟಿ ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ  ಕುಶಾಲನಗರ ಗ್ರಾಮಾಂತರ ಪೊಲೀಸರು 6 ಎಮ್ಮೆಕರುಗಳ ಸಮೇತ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು  ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.