Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೇರಳಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ಚೇರಳಶ್ರೀಮಂಗಲ ಗ್ರಾಮದ ನಿವಾಸಿ ಶ್ರೀಮತಿ ಫಿಲೋಮಿನ ಎಂಬವರ ಪತಿ ತಂಗಚ್ಚರವರು ಅನಾರೋಗ್ಯದಿಂದ ಬಳಲುತ್ತಿದ್ದು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16-10-2019 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿವಾಸಕ್ಕೆ ಹಾನಿ ಕೊಲೆ ಬೆದರಿಕೆ

ದಿನಾಂಕ 17-10-2019 ರಂದು ಸಮಯ 00-30ಕ್ಕೆ  ಕುಶಾಲನಗರದ ಚಿಕ್ಕಣ್ಣ ಲೇಔಟ್‍ನ 3ನೇ ಬ್ಲಾಕ್‍ನಲ್ಲಿ ವಾಸವಾಗಿರುವ ಟಿ.ಕೆ. ಮನ್ಮಥ ಎಂಬವರು ಮನೆಯಲ್ಲಿರುವಾಗ್ಗೆ ಯಾರೋ ಇಬ್ಬರು ವ್ಯಕ್ತಿಗಳು ಮೋಟಾರ್ ಸೈಕಲಿನಲ್ಲಿ ಬಂದು ಅವರ ಮನೆಯ ಮುಂದುಗಡೆ ಬೈಕನ್ನು ನಿಲ್ಲಿಸಿ ದೊಡ್ಡ ಡೊಡ್ಡ ಕಲ್ಲುಗಳನ್ನು ಎಸೆದು ಮನೆಯ ಕಿಟಕಿ ಗಾಜುಗಳನ್ನು ಮತ್ತು ಹೂವಿನ ಕುಂಡಗಳನ್ನು ಒಡೆದುಕಾಕಿದ್ದು  ಅಲ್ಲದೆ  ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಟಿ.ಕೆ. ಮನ್ಮಥ ಹಾಗು ಅವರ ಪತ್ನಿಗೆ ಕೊಲೆ ಬೆದರಿಕೆ ಹಾಕಿದ್ದು, ಈ ಕೃತ್ಯದ ಬಗ್ಗೆ ಜಿ. ಪ್ರಶಾಂತ್ ಎಂಬವರ ಮೇಲೆ ಅನುಮಾನವಿದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್‍ ಡಿಕ್ಕಿ

ದಿನಾಂಕ 17-10-2019 ರಂದು ಬೆಳಗ್ಗೆ 9-00 ಗಂಟೆಗೆ ಜವರಯ್ಯ ಎಂಬವರು ರಸ್ತೆ ದಾಟುತ್ತಿದ್ದಾದ ಕುಶಾಲನಗರದ ಕಡೆಯಿಂದ ಗಿಡ್ಡೆಗೌಡ  ಎಂಬವರು ತಮ್ಮ ಬಾಪ್ತು ಮೋಟಾರ್‍ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ರಸ್ತೆದಾಟುತ್ತಿದ್ದ ಜವರಯ್ಯನವರಿಗೆ  ಡಿಕ್ಕಿಪಡಿಸಿದ ಪರಿಣಾಮ ಅವರ ತಲೆ ಮತ್ತು ಶರೀರಕ್ಕೆ ಗಾಯಗಳಾಗಿದ್ದು, ಈ ಸಂಬಂಧ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಲ ನೀಡುವುದಾಗಿ ನಂಬಿಸಿ ವಂಚನೆ

ಮಡಿಕೇರಿನಗರ ನಿವಾಸಿ ಪಿ.ಎ. ಮೆಮ್ಮಯ್ಯ ಎಂಬವರು  ದಿನಾಂಕ 29-9-2019 ರಂದು ದಿನಪತ್ರಿಕೆಯಲ್ಲಿ ಬಂದ ಜಾಹೀರಾತನ್ನು ನೋಡಿ ಸಾಲ ಪಡೆಯುವ ಉದ್ದೇಶದಿಂದ ದೂರವಾಣಿ ಮೂಲಕ ಸಂಪರ್ಕಿಸಿ  ಸಾಲ ನೀಡುವಂತೆ ಕೇಳಿಕೊಂಡಿದ್ದು ಜಾಹೀರಾತುದಾರರು ಪಿ.ಎ. ಪೆಮ್ಮಯ್ಯನವರಿಂದ ಹಲವು ದಾಖಲಾತಿಗಳನ್ನು ಪಡೆದುಕೊಂಡು ಬ್ಯಾಂಕ್‍ ಖಾತೆ ಮೂಲಕ ಸುಮಾರು 51,000/- ರೂಗಳನ್ನು ಪಡೆದು ಸಾಲವನ್ನು ನೀಡದೆ ವಂಚಿಸಿರುವ ಬಗ್ಗೆ ಕೊಡಗು ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.