News

ಪೊಲೀಸ್ ಹುತಾತ್ಮರ ದಿನಾಚರಣೆ:    

      ದಿನಾಂಕ: 21-10-2019 ರಂದು ಬೆಳಿಗ್ಗೆ 8-30 ಗಂಟೆಗೆ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಶ್ರೀ ವೀರಪ್ಪ ವಿ. ಮಲ್ಲಾಪುರ್, ಮಾನ್ಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು, ಕೊಡಗು ಜಿಲ್ಲೆ, ಮಡಿಕೇರಿ ರವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

CRIME NEWS

ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡಿದ್ದ ವ್ಯಕ್ತಿ ಸಾವು

            ದಿನಾಂಕ: 09-10-2019 ರಂದು ಗೋಣಿಕೊಪ್ಪ ನಗರದ ನಿವಾಸಿ ಹೇಮಂತ್ ಕುಮಾರ್ ಎಂಬುವವರು ಅವರ ಸ್ನೇಹಿತರಾದ ಸಿದ್ದಾಪುರ ಗ್ರಾಮದ ನಿವಾಸಿಗಳಾದ ಸೂರಜ್, ಸ್ವಾದೀಶ್, ಗನಿಲ್ ಮತ್ತು ಸಬಾಸ್ಟಿನ್ಎಂಬುವವರೊಂದಿಗೆ ಗೋಣಿಕೊಪ್ಪ ದಸರಾ ವೀಕ್ಷಣೆಗೆ  ಹೋಗಿದ್ದಾಗ ಹೇಮಂತ್ ಕುಮಾರ್ ಮಾರಣಾಂತಿಕ ಹಲ್ಲೆಗೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಬಗ್ಗೆ ಗಾಯಾಳುವಿನ ತಂದೆ ನಾಗರಾಜ್ ಎಂಬುವವರು ಯಾವುದೋ ಕಾರಣಕ್ಕೆ  ಹೇಮಂತ್ ಕುಮಾರ್ ರವರ ಸ್ನೇಹಿತರೇ ಆತನ ಮೇಲೆ ಹಲ್ಲೆ ಮಾಡಿರುವ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

            ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಹೇಮಂತ್ ಕುಮಾರ್ ರವರು ದಿನಾಂಕ: 17-10-2019 ರಂದು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ವಿರಾಜಪೇಟೆ ತಾಲ್ಲೂಕು ಕರಡಿಗೋಡು ಗ್ರಾಮದ ನಿವಾಸಿ ಸೂರಜ್, ಗನಿಲ್, ಸ್ವಾದೀಶ್ ಮತ್ತು ಬಾಡಗ ಬಾಣಂಗಾಲ ಗ್ರಾಮದ ಘಟದಳ ನಿವಾಸಿ ಸಬಾಸ್ಟಿನ್ ಎಂಬುವವರನ್ನು ಗೋಣಿಕೊಪ್ಪ ಪೊಲೀಸರು ದಸ್ತಗಿರಿ ಮಾಡಿ ಇವರ ವಿರುದ್ದ ಕೊಲೆ ಯತ್ನದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕೊಲೆ ಆರೋಪಕ್ಕೆ ಪರಿವರ್ತಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 17-10-2019 ರಂದು ಮಡಿಕೇರಿ ತಾಲ್ಲೂಕು 2ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ಪಳಂಗಪ್ಪ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಶಕ್ತಿಪ್ರಸಾದ್, ದರ್ಶನ್ ಮತ್ತು ಸಚಿನ್ ಎಂಬುವವರು ಹಳೆ ವೈಷಮ್ಯದಿಂದ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಪಳಂಗಪ್ಪ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ       

      ದಿನಾಂಕ: 17-10-2019 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಸುಳುಗಳಲೆ ಕಾಲೋನಿ ನಿವಾಸಿ ಚಂದ್ರ ಎಂಬುವವರ ಚಿಲ್ಲರೆ ಅಂಗಡಿಯ ಮೇಲ್ಚಾವಣಿಯನ್ನು ಯಾರೋ ಕಳ್ಳರು ತೆಗೆದು ಒಳನುಗ್ಗಿ 3,500 ರೂ ಬೆಲೆಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.