Crime News

ಪತಿಯಿಂದ ಪತ್ನಿ ಮೇಲೆ ಹಲ್ಲೆ

ಮಡಿಕೇರಿ ತಾಲೋಕು ತಣ್ಣಿಮಾನಿ ಗ್ರಾಮದಲ್ಲಿ  ಶ್ರೀಮತಿ ಲಕ್ಷ್ಮಿಎಂಬವರು ತನ್ನ ತಂದ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ 19-10-2019 ರಂದು ಆಕೆಯ ಗಂಡ ಬೆಳ್ಳಿಯಪ್ಪ ರವರು ತನ್ನ ಪತ್ನಿ ಶ್ರೀಮತಿ ಲಕ್ಷ್ಮಿರವರ ಶೀಲವನ್ನು ಶಂಕಿಸಿ ಕತ್ತಿಯಿಂದ ಹಲ್ಲೆ ಮಾಡಿ ಎರಡೂ ಕೈಗಳಿಗೆ ಗಾಯವನ್ನುಂಟು ಮಾಡಿದ್ದು ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ

ದಿನಾಂಕ 1-10-2019 ರಂದು ಅಭ್ಯತ್ ಮಂಗಲ ಗ್ರಾಮದ ನಿವಾಸಿ ದೇವಪ್ಪ ಎಂಬವರು ತನ್ನ ಮಗನೊಂದಿಗೆ ನೆಲ್ಲಿಹುದಿಕೇರಿಯ ಸೂಪರ್ ಮಾರ್ಕೆಟ್‍ನಿಂದ ಮುಖ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ ಅತ್ತಿಮಂಗಲದ ಕಡೆಯಿಂದ ಜಬ್ಬರ್ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದೇವಪ್ಪನವರಿಗೆ ಡಿಕ್ಕಿಪಡಿಸಿದ ಪರಿಣಾಮ ದೇವಪ್ಪನವರು ಗಾಯಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಅವರನ್ನು ಚಿಕಿತ್ಸೆ ಸಂಬಂಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ದುರ್ಮರಣ

ಕುಶಾಲನಗರದ ನಿವಾಸಿ ಪ್ರಭಾಕರ ಕಾಮತ್ ಹಾಗು ಅವರ ಪತ್ನಿ ಪ್ರತಿಭಾ ಕಾಮತ್ ರವರು ದಿನಾಂಕ 11-10-2019 ರಂದು ಎಂದಿನಂತೆ ಬೆಳಗ್ಗೆ ವಾಕಿಂಗ್‍ ಹೋದ ಸಂದರ್ಭದಲ್ಲಿ ಕುಶಾಲನಗರದ ಹಿಂದೂ ರುದ್ರಭೂಮಿ ಬಳಿ ರಸ್ತೆಯಲ್ಲಿ ಲಾರಿಯೊಂದು ಪ್ರಭಾಕರ ಕಾಮತ್ ರವರಿಗೆ ಡಿಕ್ಕಿಯಾದ ಪರಿಣಾಮ ಪ್ರಭಾಕರ ಕಾಮತ್‍ ರವರು ಗಂಭೀರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಿಸದೇ ಸದರಿಯವರು ದಿನಾಂಕ 19-10-2019 ರಂದು ಮೃತಪಟ್ಟಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಾವು ಕಚ್ಚಿ ಮಹಿಳೆ ಸಾವು

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೊಡ್ಲಿಪೇಟೆ, ಅವರೆದಾಳು ಗ್ರಾಮದ ನಿವಾಸಿ ಎಂ.ಆರ್. ಅಣ್ಣೇಗೌಡ ಎಂಬವರ ಪತ್ನಿ ಶ್ರೀಮತಿ ಗೌರಮ್ಮ ಎಂಬವರು ದಿನಾಂಕ 19-10-2019 ರಂದು ಕಾಫಿತೋಟದಲ್ಲಿ ಕೆಲಸಕ್ಕೆ ಹೋಗಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವೊಂದು ಅವರಿಗೆ ಕಚ್ಚಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಆಕೆ ಮೃತಪಟ್ಟಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ