Crime News

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 24-10-2019 ರಂದು ಸೋಮವಾರಪೇಟೆ ತಾಲ್ಲೂಕು ಕಾರೆಕೊಪ್ಪ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-01-ಎಂಜೆ-1705 ರ ಕಾರನ್ನು ಚಾಲಕ ಮನೋಜ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ರಸ್ತೆಬದಿಗೆ ಮಗುಚಿಕೊಂಡಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದು ಕಾರು ಜಖಂಗೊಂಡಿರುತ್ತದೆ. ಈ ಬಗ್ಗೆ ನವೀನ್ ಎಂಬುವವರು ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕ್ ಕಳವು ಪ್ರಕರಣ

            ದಿನಾಂಕ: 20-10-2019 ರಂದು ಸೋಮವಾರಪೇಟೆ ಪಟ್ಟಣದ ಸರಕಾರಿ ಆಸ್ಪತ್ರೆಯ ಬಳಿ ನಿಲ್ಲಿಸಿದ್ದ ಕೆಎ-12-ಹೆಚ್-7535 ರ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ  ಬಗ್ಗೆ ಡ್ಯಾನಿಲ್ ಡಿಸೋಜ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ          

   ದಿನಾಂಕ: 24-10-2019 ರಂದು ವಿರಾಜಪೇಟೆ ಪಟ್ಟಣದ ನಿವಾಸಿಗಳಾದ ಹನೀಫ್ , ಏಜಾಸ್ ಹಾಗೂ ಎ.ಹೆಚ್ ಸಲೀಂ, ಮೆಕ್ಯಾನಿಕ್ ಸಲೀಂ ಎಂಬುವವರು ನಡುವೆ  ಮೀನು ವ್ಯಾಪಾರದ ವಿಚಾರದ ಬಗ್ಗೆ ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದ ವಿಚಾರದಲ್ಲಿ ಪರಸ್ಪರ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ.