Crime News

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 15-10-2019 ರಂದು ವಿರಾಜಪೇಟೆ ತಾಲ್ಲೂಕು ಕಾಕೋಟುಪರಂಬು ನಿವಾಸಿ ಮಗೇಂದ್ರ ಎಂಬುವವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲ ಜಿಗುಪ್ಸೆಗೊಂಡು ವಿಷಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25-10-2019 ರಂದು ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ರಾಘವೇಂದ್ರ ಎಂಬುವವರು ನೀಡಿದ ದೂರಿನ ಮೇರ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 25-10-2019 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹುಣಸೂರು ಘಟಕದ ಚಾಲಕರಾದ ನಾಗರಾಜು ಎಂಬುವವರು ಬಸ್ಸನ್ನು ನಿಲ್ದಾಣದಲ್ಲಿ ನಿಲ್ಲಿಸುತ್ತಿರುವಾಗ ಅರುಣ ಹಾಗೂ ಇತರ ನಾಲ್ಕು ಜನರು ಬಸ್ ನಿಲ್ದಾಣಕ್ಕೆ ಹೋಗಿ ಏಕಾಏಕಿ ಬಸ್ ನಿಂದ ಚಾಲಕನನ್ನು ಹೊರಗೆಳೆದು ರಸ್ತೆಯಲ್ಲಿ ಹೋಗುತ್ತಿರುವಾಗ ಆಟೋ ರಿಕ್ಷಾಕ್ಕೆ ಕೆಸರು ಹಾರಿದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿದ್ದು ತಡೆಯಲು ಬಂದ ಬಸ್ ನಿರ್ವಾಹಕ ನಾಗೇಶ್ ವಿ. ನಾಯಕ್ ಎಂಬುವವರಿಗೂ ಸಹಾ ಹಲ್ಲೆ ಮಾಡಿ ಇ.ಟಿ.ಎಂ ಮಷಿನ್ ಜಖಂಗೊಳಿಸಿದ್ದು ಈ ಬಗ್ಗೆ ಬಸ್ ಚಾಲಕ ನಾಗರಾಜು ರವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.