Crime News

ಅಕ್ರಮ ಗಾಂಜಾ ಮಾರಾಟ ಪ್ರಕರಣ

                ದಿನಾಂಕ: 28-10-2019 ರಂದುವಿರಾಜಪೇಟ ಪಟ್ಟಣ ಪೊಲೀಸ್‌ ಠಾಣೆ ಪಿ.ಎಸ್‌.ಐ ಮರಿಸ್ವಾಮಿ ಹೆಚ್‌.ಎಂ ಮತ್ತು ಸಿಬ್ಬಂದಿಯವರು ವಿರಾಜಪೇಟೆಪಟ್ಟಣದ ಮೀನುಪೇಟೆಯ ಮುತ್ತಪ್ಪ ದೇವಸ್ಥಾನದ ಬಳಿ ಸಾರ್ವಜನಿಕರಿಗೆ  ಅಕ್ರಮವಾಗಿಮಾರಾಟಮಾಡಲು  ಗಾಂಜಾ ಇಟ್ಟುಕೊಂಡಿದ್ದ ಐಮಂಗಲ ಗ್ರಾಮದ ನಿವಾಸಿ ಬಿ.ಎಂ ಬೆಳ್ಳಿಯಪ್ಪ ಎಂಬುವವರನ್ನುವಶಕ್ಕೆತೆಗೆದುಕೊಂಡುವಿರಾಜಪೇಟೆ ಪಟ್ಟಣ ಠಾಣೆಯಲ್ಲಿಬೆಳ್ಳಿಯಪ್ಪ ಹಾಗೂ ಈತನಿಗೆ ಗಾಂಜಾ ಪೂರೈಕೆ ಮಾಡಿದ ಮೀನುಪೇಟೆ ನಿವಾಸಿ ಸಂಶುದ್ದೀನ್ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿಕೊಂಡು  ತನಿಖೆಕೈಗೊಂಡಿರುತ್ತಾರೆ.

ಹೊಡೆದಾಟ ಪ್ರಕರಣ

            ದಿನಾಂಕ: 28-10-2019 ರಂದು ಮಡಿಕೇರಿ ನಗರದ ಕೋಟೆ ಆರವಣದಲ್ಲಿರುವ ನ್ಯಾಯಾಲಯ ಸಂಕೀರ್ಣದ ಬಳಿ ಮಡಿಕೇರಿ ನಗರದ ಶಾಸ್ತ್ರಿನಗರದ ನಿವಾಸಿಗಳಾದ ಎಂ.ಯು ಇಲಿಯಾಸ್‌ ಮತ್ತು ಎಂ.ಹೆಚ್‌ ಸನಾವುಲ್ಲಾ ಎಂಬುವವರು ಪರಸ್ಪರ ಜೋರಾಗಿ ಕೂಗಾಡಿ ಹೊಡೆದಾಡಿಕೊಂಡು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡಿದ್ದು ಈ ಬಗ್ಗೆ  ಕರ್ತವ್ಯದಲ್ಲಿದ್ದ ಪೊಲೀಸ್‌ ಹೆಡ್‌ ಕಾನ್ಸ್ ಟೇಬಲ್‌ ಮುತ್ತಣ್ಣ ಎಂಬುವವರು ನೀಡಿದ ವರದಿಯ ಮೇರೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.