Crime News

ಬೈಕ್ ಕಳ್ಳತನ, ಆರೋಪಿಗಳ ಬಂಧನ

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಮೊಬೈಲ್ ಕಳವು ಮಾಡುತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ: 20-10-2019 ರಂದು ಸೋಮವಾರಪೇಟೆ ಪಟ್ಟಣದ ಸರಕಾರಿ ಆಸ್ಪತ್ರೆಯ ಬಳಿ ನಿಲ್ಲಿಸಿದ್ದ ಕೆಎ-12-ಹೆಚ್-7535 ರ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ  ಬಗ್ಗೆ ಡ್ಯಾನಿಯಲ್ ಡಿಸೋಜ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

                ದಿನಾಂಕ: 29-10-2019 ರಂದು ಸೋಮವಾರಪೇಟೆ ಠಾಣೆಯ ಪೊಲೀಸ್ ಹೆಚ್.ಸಿ ಮಧು ರವರು ಕರ್ತವ್ಯದಲ್ಲಿರುವಾಗ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ಕಂಡುಬಂದ ಆರೋಪಿ ರಿಯಾಜ್ ಎಂಬುವವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತನ ಬಳಿ ಕಳವು ಮಾಡಲಾಗಿದ್ದ 6 ಮೊಬೈಲ್ ಪೋನ್ ಗಳು ಕಂಡು ಬಂದಿದ್ದು  ಈತನಿಂದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳ ಮಾಹಿತಿ ಪಡೆದು ಸೋಮವಾರಪೇಟೆ ಪೊಲೀಸ್ ಠಾಣಾ ಪಿ.ಎಸ್.ಐ., ಶ್ರೀ ಶಿವಶಂಕರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಬಂಧಿತರಿಂದ 6 ಮೊಬೈಲ್ ಫೋನ್ ಹಾಗೂ 2 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ:

1. ರಿಯಾಜ್ @ ಸಾಬು ತಂದೆ  ರೆಹಮತ್ ಪ್ರಾಯ 20 ವರ್ಷ ಎಂ.ಡಿ. ಬ್ಲಾಕ್ ಸೋಮವಾರಪೇಟೆ.

2. ಪುನೀತ್ ತಂದೆ ಸಿದ್ದೇಗೌಡ, ಪ್ರಾಯ: 21 ವರ್ಷ, ರೇಂಜರ್ ಬ್ಲಾಕ್, ಸೋಮವಾರಪೇಟೆ.

3. ಯಶವಂತ್ ತಂದೆ ಸುಬ್ರಮಣಿ, 22 ವರ್ಷ, ರೇಂಜರ್ ಬ್ಲಾಕ್, ಸೋಮವಾರಪೇಟೆ.

5. ಮಂಜುನಾಥ ಕೆ.ಕೆ ತಂದೆ ಕೇಶವ, 34 ವರ್ಷ, ವೆಂಕಟೇಶ್ವರ ಬ್ಲಾಕ್, ಸೋಮವಾರಪೇಟೆ.

       ಈ ಪ್ರಕರಣವನ್ನು ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ.ಸುಮನ್ ಡಿ.ಪಿ,  ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷರವರ ನೇತೃತ್ವದಲ್ಲಿ, ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಶ್ರೀ ನಂಜುಂಡೇಗೌಡ,  ಸೋಮವಾರಪೇಟೆ ಪೊಲೀಸ್ ಠಾಣಾ ಪಿ.ಎಸ್.ಐ., ಶ್ರೀ ಶಿವಶಂಕರ್, ಪ್ರೊಬೇಷನರಿ ಪಿ.ಎಸ್.ಐ ಮಂಜುನಾಥ್ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿರುತ್ತಾರೆ.  ಇವರ ಕಾರ್ಯವೈಖರಿಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 28-10-2019 ರಂದು ವಿರಾಜಪೇಟೆ ತಾಲ್ಲೂಕು ಕೊಟ್ಟೋಳಿ ಗ್ರಾಮದ ನಿವಾಸಿ ಸುರೇಶ್ ಎಂಬುವವರು ಮದ್ಯಪಾನ ಮಾಡಲು ಹಣವಿಲ್ಲದೇ ಜಿವನದಲ್ಲಿ ಜುಗುಪ್ಸೆಗೊಂಡು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ಪತ್ನಿ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 29-10-2019 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ಎಂ.ಸಿ.ಎಂ ಪೆಟ್ರೋಲ್ ಪಂಪ್ ಬಳಿ ಕೆಎ-12-ಕ್ಯೂ-1625 ರ ಬೈಕನ್ನು ಅದರ ಸವಾರ ರಂಗರಾಜು ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-12-ಕ್ಯೂ-6916 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಬೈಕ್ ಗಳಲ್ಲಿದ್ದ ಸವಾರರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ದೀಕ್ಷಿತ್ ಎಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಲಾಟರಿ ಮಾರಾಟ ಪ್ರಕರಣ

            ದಿನಾಂಕ: 29-10-2019 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಯನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಗೋಣಿಕೊಪ್ಪ ಠಾಣೆ ಪಿ.ಎಸ್.ಐ, ಕೆ.ಎನ್ ಬೋಪಣ್ಣ ರವರು ಪತ್ತೆ ಮಾಡಿ ಗೋಣಿಕೊಪ್ಪ 4ನೇ ವಿಭಾಗದ ನಿವಾಸಿ ಪಿ.ಜಿ ವಿಜಯನ್ ಎಂಬುವವರ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

ಕಾರು ಡಿಕ್ಕಿ ಪಾದಚಾರಿಗೆ ಗಾಯ

            ದಿನಾಂಕ: 28-10-2019 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಪಟ್ಟಣದ ಬಿ.ಎಂ ರಸ್ತೆಯ ಮಾರಿಯಮ್ಮ ದೇವಾಲಯದ ಕೆಎ-12-ಪಿ6222 ರ ಕಾರು ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ದಾಟುತ್ತಿದ್ದ ಹಿತೈಶ್ ಎಂಬುವವರಿಗೆ ಡಿಕ್ಕಿಪಡಿಸಿದ್ದರಿಂದ ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ತಂದೆ ಪದ್ಮನಾಭ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 29-10-2019 ರಂದು ವಿರಾಜಪೇಟೆ ಪಟ್ಟಣದ ತೆಲುಗರ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಬೆಂಗಳೂರು ನಗರ ಬ್ಯಾಟರಾಯನ ಪುರ ನಿವಾಸಿ ರಾಮಕೃಷ್ಣ ರೆಡ್ಡಿ ಎಂಬುವವರು ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹಚ್ಚಿನಾಡು ಗ್ರಾಮದ ಚೆಂಗಪ್ಪ ಎಂಬುವವರ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 29-10-2019 ರಂದು ವಿರಾಜಪೇಟೆ ತಾಲ್ಲೂಕು ಕರಡ ಗ್ರಾಮದ ನಿವಾಸಿ ಗಣೇಶ್ ಎಂಬುವವರಿಗೆ ಅವರ ಸಂಬಂದಿಕರಾದ ವಿರಾಜಪೇಟೆ ಅಯ್ಯಪ್ಪ ಬೆಟ್ಟ ನಿವಾಸಿ ಜಯರಾಮ ಎಂಬುವವರು ವೈಯಕ್ತಿಕ ವೈಷಮ್ಯದಿಂದ ಏಕಾಏಕಿ ತಲೆ ಹಾಗೂ ಕುತ್ತಿಗೆಗೆ ಹಲ್ಲೆ ಮಾಡಿ ಗಾಯಗೊಳಿಸಿ ಅವರ ಮಗಳ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಈ ಜಗಳದ ಸಂದರ್ಭದಲ್ಲಿ ಜಯರಾಮ್ ರವರಿಗೆ ಗಣೇಶ್ ರವರು ಹಲ್ಲೆ ಮಾಡಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.