Crime News

ಮರ ಕಳವು ಪ್ರಕರಣ

            ಮಡಿಕೇರಿ ತಾಲ್ಲೂಕು ಐವತ್ತೊಕ್ಲು ಗ್ರಾಮದಲ್ಲಿ ಎನ್.ಎ ಸೋಮಯ್ಯ ಎಂಬುವವರ ಕಾಫಿ ತೋಟದಲ್ಲಿ ಒಣಗಿ ಬಿದ್ದಿದ್ದ 5 ಲಕ್ಷ ರೂ. ಬೆಲೆ ಬಾಳುವ ಬೀಟೆ ಮರವನ್ನು ಅಶ್ರಫ್, ರೇನೀಶ್, ಯಶವಂತ್ ಎಂಬುವವರು ದಿನಾಂಕ: 01-08-2019 ರಿಂದ 31-10-2019 ರ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಗುಮಾನಿ ಇರುವುದಾಗಿ ಸೋಮಯ್ಯ ರವರು ನೀಡಿದ ಪುಕಾರಿನ ಮೇರೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮ ಹತ್ಯೆ

            ದಿನಾಂಕ: 31-10-2019 ರಂದು ಸೋಮವಾರಪೇಟೆ ತಾಲ್ಲೂಕು ನೆಲ್ಯಹುದಿಕೇರಿ ಗ್ರಾಮದ ಕುಂಬಾರಗುಡಿ ನಿವಾಸಿ ರವಿ ಎಂಬುವವರಿಗೆ ಅನಾರೋಗ್ಯವಿದ್ದು ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಮಗ ಕಿಶೋರ್ ಎಂಬುವವರು ನೀಡಿದ ದೂರಿನ ಮೇರ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ

ದಿನಾಂಕ:  29-10-2019 ರಂದು ಸೋಮವಾರಪೇಟೆ ತಾಲ್ಲೂಕು ಚಿಕ್ಕಕೊಳತ್ತೂರು ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಾಗೇಶ್ ಗೌಡ ಎಂಬುವವರು ಅವರ ಅಣ್ಣ ನಾಗರಾಜ ಗೌಡ ಎಂಬುವವರೊಂದಿಗೆ ಬೈಕ್ ನಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ಸಕಲೇಶಪುರ ತಾಲ್ಲೂಕು ನಂದಿಪುರ ನಿವಾಸಿ ಗುರುಪ್ರಸಾದ್ ಎಂಬುವವರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನಾಗೇಶ್ ಗೌಡ ರವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅರಣ್ಯ ರಕ್ಷಕರ ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು

ದಿನಾಂಕ: 30-10-2019 ರಂದು ಸೋಮವಾರಪೇಟೆ ತಾಲ್ಲೂಕು ಭುವಂಗಾಲ ಅರಣ್ಯ ತನಿಖಾ ಠಾಣೆಯಲ್ಲಿ ಅರಣ್ಯ ರಕ್ಷಕ ಟಿ.ಎಂ ವರುಣ್ ರಾಜ್ ರವರು ಕರ್ತವ್ಯದಲ್ಲಿರುವಾಗ ಟಿಪ್ಪರ್ ಲಾರಿಯಲ್ಲಿ ಅಕ್ರಮ ಮರ ಸಾಗಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮಾಹಿತಿಯ ಮೇರೆ ಚೆಕ್ ಪೋಸ್ಟ್ ಬಳಿ ಲಾರಿ ಬರುತ್ತಿರುವುದನ್ನು ಗಮನಿಸಿ ನಿಲ್ಲಿಸುವಂತೆ ಸೂಚಿಸಿದಾಗ ಚಾಲಕ ಲಾರಿಯನ್ನು ನಿಲ್ಲಿಸದೇ ಹೋಗಿರುತ್ತಾನೆ. ಕೂಡಲೇ ಜೊತೆಯಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕರಾದ ಚಿಟ್ಟಿಯಪ್ಪ ರವರೊಂದಿಗೆ ಬೈಕ್ ನಲ್ಲಿ ಲಾರಿಯನ್ನು ಹಿಂಬಾಲಿಸಿಕೊಂಡು ಹೋಗುತ್ತಿರುವಾಗ ಅಕ್ರಮ ಮರ ಸಾಗಾಟಕ್ಕೆ ಕೆಎ-05-ಎಂಸಿ-7967 ರ ಕಾರಿನಲ್ಲಿ ಬೆಂಗಾವಲಾಗಿ ಹೋಗುತ್ತಿದ್ದ ಸೋಮವಾರಪೇಟೆ ತಾಲ್ಲೂಕು ಕೂತಿ ಗ್ರಾಮದ ನಿವಾಸಿ ದೀಕ್ಷಿತ್ ಎಂಬುವವರು ಬೈಕನ್ನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಪದಗಳಿಂದ ಬೈದು ಲಾರಿ ತಪ್ಪಿಸಿಕೊಂಡು ಹೋಗುವವರೆಗೂ ತಡೆದು ನಿಲ್ಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಈ ಬಗ್ಗೆ ವರುಣ್ ರಾಜ್ ರವರು  ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬ್ಯಾಟರಿ ಕಳವು ಪ್ರಕರಣ

            ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದಲ್ಲಿರುವ ಏರ್ ಟೆಲ್ ಸಂಸ್ಥೆಗೆ ಸೇರಿದ ಟವರ್ ಬಳಿ ಕೊಠಡಿಯಲ್ಲಿ ಇಡಲಾಗಿದ್ದ 60 ಸಾವಿರ ರೂ ಬೆಲೆಯ 24 ಶೆಲ್ ಬ್ಯಾಟರಿ ಮತ್ತು ಕಬ್ಬಿಣದ ಸ್ಟ್ಯಾಂಡ್  ನ್ನು ಅದೇ ಸಂಸ್ಥೆಯ ಗೋಣಿಕೊಪ್ಪ ಟವರ್ ಟೆಕ್ನಿಷಿಯನ್ ಎನ್.ರಂಜಿತ್ ಹಾಗೂ ಕುಟ್ಟ ಟವರ್ ಟೆಕ್ನಿಷಿಯನ್ ಶ್ರೀಮಂಗಲ ಗ್ರಾಮದ ನಿವಾಸಿ ಟಿ.ಆರ್ ದರ್ಶನ್ ಎಂಬುವವರು ಕಳವು ಮಾಡಿ ಮಾರಾಟ ಮಾಡಿದ್ದು ಈ ಬಗ್ಗೆ ಫೀಲ್ಡ್ ಆಫೀಸರ್ ವಿಜಯ ಪ್ರಕಾಶ್ ಎಂಬುವವರು ದಿನಾಂಕ: 31-10-2019 ರಂದು ನೀಡಿದ ಪುಕಾರಿನ ಮೇರೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.