Crime News

ಹಲ್ಲೆ ಪ್ರಕರಣ

ದಿನಾಂಕ 22-05-2018 ರಂದು ಮಡಿಕೇರಿ ತಾಲೂಕಿನ ತಣ್ಣಿಮಾನಿ ಗ್ರಾಮದ ನಿವಾಸಿಯಾದ ಮೊಣ್ಣಿಯವರು ಮನೆಯಲ್ಲಿರುವಾಗ ಮಗ ರಾಜುರರವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕತ್ತಿಯಿಂದ ಕಾಲಿಗೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ಶವ ಪತ್ತೆ

ದಿನಾಂಕ 23-05-2018 ರಂದು ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದಲ್ಲಿ ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸದರಿ ಮೃತದೇಹದ ಮೇಲೆ ನೀಲಿ ಜೀನ್ಸ್ ಪ್ಯಾಂಟ್, ತುಂಬುತೋಳಿನ ಹಸಿರು ಕಪ್ಪು ಬಿಳಿ ಚೌಕಳಿಗಳಿರುವ ಶರ್ಟ್ ಮತ್ತು ಬೆಲ್ಟ್ ಇದ್ದು ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ವ್ಯಕ್ತಿಗಳ ಬಂಧನ

ದಿನಾಂಕ 22-05-2018 ರಂದು ರಾತ್ರಿ ಕುಶಾಲನಗರ ಪಟ್ಟಣ ಠಾಣೆಯ ಸಿಬ್ಬಂದಿಯವರಾದ ಸುದೀಶ್ ಕುಮಾರ್ ಮತ್ತು ಮುಸ್ತಾಫರವರು ಗಸ್ತು ಕರ್ತವ್ಯದಲ್ಲಿರುವಾಗ ಸಮಯ 12-30 ಎ.ಎಂ ಗೆ 4 ನೇ ಬ್ಲಾಕ್ ನ ಸರ್ಕಾರಿ ಜೂನಿಯರ್ ಕಾಲೇಜು ಬಳಿ ವಿರಾಜಪೇಟೆಯ ನಿವಾಸಿಗಳಾದ ನಜೀರ್ ಹಾಗೂ ನೌಶಾದ್ ಎಂಬುವವರು ನಿಂತುಕೊಂಡಿದ್ದು ವಿಚಾರಿಸಲಾಗಿ ಸಮರ್ಪಕ ಉತ್ತರ ನೀಡದೇ ಇದ್ದು ಯಾವುದೋ ಕೃತ್ಯ ಎಸಗಲು ಹೊಂಚು ಹಾಕುತ್ತಿರುವುದಾಗಿ ಅನುಮಾನ ಬಂದು ಠಾಣೆಗೆ ಹಾಜರುಪಡಿಸಿದ್ದು, ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ

ದಿನಾಂಕ 21-05-2018 ರಂದು ಕುಶಾಲನಗರದ ಕುಡ್ಲೂರು ಗ್ರಾಮದ ನಿವಾಸಿಯಾದ ಕುಸುಮರವರು ಮಗಳಾದ ಸ್ಮಿತಾಳೊಂದಿಗೆ ಅಂಗಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಕೂಡ್ಲೂರು ಸರ್ಕಾರಿ ಶಾಲೆಯ ಬಳಿ ತಲುಪುವಾಗ ವೀರಭೂಮಿ ಕಡೆಯಿಂದ ಕೂಡ್ಲೂರು ಗ್ರಾಮದ ನಿವಾಸಿಯಾದ ಶಿವಕುಮಾರ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಸ್ಮಿತಾಳಿಗೆ ಡಿಕ್ಕಿಪಡಿಸಿದ್ದು ಈ ಬಗ್ಗೆ ಕುಸುಮರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆಯಿಂದ ಗಾಯಗೊಂಡಿದ್ದ ಮಹಿಳೆಯ ಸಾವು

ದಿನಾಂಕ 21-05-2018 ರಂದು ಸೋಮವಾರಪೇಟೆ ತಾಲೂಕಿನ ಮಸಗೋಡು ಗ್ರಾಮದ ನಿವಾಸಿಯಾದ ರಾಜುರವರು ತನ್ನ ಪತ್ನಿ ಉಮಾವತಿಯವರೊಂದಿಗೆ ಮನೆಯಲ್ಲಿರುವಾಗ ಪಕ್ಕದ ಮನೆಯವರಾದ ಪುಷ್ಪರವರು ಹಳೇ ದ್ವೇಷದಿಂದ ಜಗಳ ತೆಗೆದು ಉಮಾವತಿಯರ ತಲೆಗೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳು ಉಮಾವತಿಯವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-05-2018 ರಂದು ಮೃತಪಟ್ಟಿರುತ್ತಾರೆ.

Leave a Reply

Your email address will not be published.