Crime News

ನಡತೆ ಶಂಕಿಸಿ ಚೂರಿಯಿಂದ ಇರಿದು ಪತ್ನಿಯ ಕೊಲೆ:

ನಡತೆ ಸರಿಯಿಲ್ಲವೆಂದು ಶಂಕಿಸಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಮಡಿಕೇರಿ ನಗರದ ಹೊಸ ಬಡಾವಣೆಯಲ್ಲಿ ಮೊಹಮ್ಮದ್ ಶರೀಫ್ ಎಂಬವರು ತನ್ನ ಸಂಸಾರದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು. ದಿನಾಂಕ 2-11-2019 ರಂದು ರಾತ್ರಿ 10 ಗಂಟೆ ಸುಮಾರಿಗೆ ಮೊಹಮ್ಮದ್ ಶರೀಫ್ ತನ್ನ ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದು,  ಈ ಸಂಬಂಧ ಮೊಹಮ್ಮದ್ ಶರೀಫ್ ರವರು ವಾಸವಾಗಿರುವ ಮನೆಯ ಮಾಲಿಕರಾದ ಕಲಿಯಂಡ ಸುಮನ್‍ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಭಾಗಮಂಡಲದ ಬಾಳೆಬೈಲು ನಿವಾಸಿ ಜೆ.ಎಸ್. ದಿವಾಕರ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 2-11-2019 ರಂದು ತಮ್ಮ ವಾಸದ ಮೆನಯ ಹತ್ತಿರ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದು, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಜೀಪುಗಳ ಡಿಕ್ಕಿ

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ದೇವಸ್ತೂರು ಹೆಬ್ಬೆಟ್ಟಗೇರಿ ಗ್ರಾಮದ ನಿವಾಸಿ ಸಿ.ಪಿ. ಸಂಪತ್ ಎಂಬವರು ತಮ್ಮ ಜೀಪಿನಲ್ಲಿ ಮಡಿಕೇರಿ ನಗರದ ಕಡೆಗೆ ಹೋಗುತ್ತಿದ್ದಾಗ ಎದುಗಡೆಯಿಂದ ಕವನ್‍ ಕರುಂಬಯ್ಯ ಎಂಬವರು ತನ್ನ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಿ.ಪಿ. ಸಂಪತ್‍ರವರು ಚಲಾಯಿಸುತ್ತಿದ್ದ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡು ಜೀಪುಗಳು ಜಖಂಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ

ದಿನಾಂಕ 2-11-2019 ರಂದು ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸು ಸ್ಯಾಂಡಲ್ ಕಾಡ್ ಎಸ್ಟೆಟ್ ಬಳಿ ಚಾಲಕನ ನಿಯಂತ್ರಣ ಕಳೆದುದುಕೊಂಡು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿಯಾಗಿ ನಂತರ  ಅಂಕೋಲ ದಿಂದ  ಬೀರಣ್ಣ ವೆಂಕಟರಮಣ ಎಂಬವರು ಚವರ್ಲೆಟ್ ಟವೆರಾ ಟ್ಯಾಕ್ಸಿ ವಾಹನದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಮಡಿಕೇರಿ ಕಡೆಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿ ಮತ್ತೆ ರಸ್ತೆಯ ಬಲಬದಿಯ ಇಳಿಜಾರಿರುವ ಕಾಫೀ ತೋಟದ ಒಳಗೆ ಹೋಗಿ ಮರಕ್ಕೆ ಡಿಕ್ಕಿಯಾಗಿ ನಿಂತಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಗಾಯ ನೋವು ಆಗದೆ ಪಾರಾಗಿದ್ದು, ಬಸ್ಸಿನಲ್ಲಿದ್ದ ಪ್ರಾಯಾಣಿಕರೊಬ್ಬರಿಗೆ  ಮಾತ್ರ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲಕ ಕಾರಣಕ್ಕೆ ಹಲ್ಲೆ

ಮಡಿಕೇರಿ ತಾಲೋಕು ಎಂ.ಬಾಡಗ ಗ್ರಾಮದ ನಿವಾಸಿ ಅಚ್ಚಕಾಳೀರ ಕಿರಣ ಎಂಬವರು  ದಿನಾಂಕ 02-11-2019 ರಂದು ಬೇತ್ರಿ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಹೋಗಿ ವಾಪಾಸ್ಸು ಸಮಯ 3-30 ಪಿ.ಎಂ.ಗೆ ಮನೆಯ ಕಡೆಗೆ ನಡೆದುಕೊಂಡು ಬರುತ್ತಿರುವಾಗ್ಗೆ ಮುಕ್ಕಾಟೀರ ಬೋಪುಣಿ @ ಬೋಪಯ್ಯರವರ ಮನೆಯ ಹತ್ತಿರ ತಲುಪುವಾಗ್ಗೆ ಕೈಪೆಟೀರ ಹರೀಶ್ ರವರ ಕಾಫಿ ತೋಟದಲ್ಲಿ ಕೆಲಸ ಮಾಡುವ ಅಸ್ಸಾಂ ರಾಜ್ಯದ ಕೆಲಸದವರು ನಡೆದುಕೊಂಡು ಬರುತ್ತಿದ್ದರು ಅಚ್ಚಕಾಳೀರ ಕಿರಣರವರ  ಕೈಯಲ್ಲಿದ್ದ ಕಚ್ಚಡ ಮಿಷನ್ ಅವರ ಪೈಕಿ ಒಬ್ಬನಿಗೆ ತಾಗಿದ್ದು ಇದರಿಂದ ಸಿಟ್ಟುಕೊಂಡ ಅವರೆಲ್ಲರೂ ಸೇರಿ ಅಚ್ಚಕಾಳೀರ ಕಿರಣರವರ ಮೇಲೆ ದೊಣ್ಣೆಯಿಂದ ಹಲ್ಲೆನಡೆಸಿ ನೋವನ್ನುಂಟು ಮಾಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮರಳು ಕಳ್ಳತನ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮುಕ್ಕಾಟಿಕೊಪ್ಪ ಕಾರ್ಮಾಡು ಗ್ರಾಮದಲ್ಲಿ ಸಿರಾಜ್ ಎಂಬವರ ವಾಸದ ಮನೆಯ ಹತ್ತಿರದ ಬಾವಿಯ ಬಳಿ ಅಕ್ರಮವಾಗಿ ಮರಳನ್ನು 2 ಟಿಪ್ಪರ್‍ ವಾಹನಗಳಲ್ಲಿ ತುಂಬಿಸುತ್ತಿದ್ದುದನ್ನು ಪತ್ತೆ ಹೆಚ್ಚಿದ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವೀಣಾನಾಯಕ್  ಮತ್ತು ಸಿಬ್ಬಂದಿಗಳು ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಕ್ರಿಮಿನಾಶಕ ಔಷಧಿಯನ್ನು ಕುಡಿದು ವ್ಯಕ್ತಿ ಸಾವು:

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಸೀಗೆಹೊಸೂರು ಗ್ರಾಮದ ನಿವಾಸಿ ಶ್ರೀಮತಿ ಮುತ್ತಕ್ಕ ಎಂಬವರ ಗಂಡ ಶಿವ ಎಂಬವರು ಕೆಲ ಸಮಯದ ಹಿಂದೆ ಮರದಿಂದ ಬಿದ್ದು ಎರಡು ಕೈಗಳ ಸ್ವಾದೀನ ಕಳೆದುಕೊಂಡಿದ್ದು ಇದೇ ವಿಚಾರವಾಗಿ ವಿಪರೀತ ಮದ್ಯ ಸೇವಿಸುತ್ತಿದ್ದು ದಿನಾಂಕ 1-11-2019 ರಂದು ವಿಪರೀತ ಮದ್ಯಪಾನ ಮಾಡಿ ಶುಂಠಿ ಹೊಲದ ಶೆಡ್ಡಿಗೆ ಹೋಗಿ ಅಲ್ಲಿ ಇಟ್ಟಿದ್ದ ಕಿಮಿನಾಶಕವನ್ನು ತಿಳಿಯದೇ ಸೇವಿಸಿ ಅಸ್ವಸ್ಥಗೊಂಡಿದ್ದು, ಸದರಿಯವರನ್ನು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ಸಾವನಪ್ಪಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ

ದಿನಾಂಕ 1-11-2019 ರಂದು ಕೂಡುಮಂಗಳೂರು ಗ್ರಾಮದ ನಿವಾಸಿ ಅಜಯ್ ಎಂಬವರು ಹುದುಗೂರು ಗ್ರಾಮದಲ್ಲಿದ್ದಾಗ ಕಾರ್ತಿಕ್, ರಾಜೇಶ್, ರವಿತೇಜ ಮತ್ತು ಇತರರು ಸೇರಿ ಅಜಯ್‍ರವರನ್ನು ತಡೆದು ನಿಲ್ಲಿಸಿ ಹಳೆ ದ್ವೇಷದಿಂದ ಜಗಳ ಮಾಡಿದ್ದು ಅಲ್ಲದೆ  ಆಟೋ ರಿಕ್ಷಾದಲ್ಲಿ ಕಣಿವೆ ಕಡೆಗೆ ಕರೆದುಕೊಂಡು ಹೋಗಿ ಕೈ ಮತ್ತು ಸ್ಪ್ಯಾನರ್‍ ನಿಂದ ಹಲ್ಲೆ ನಡೆಸಿದ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.