Crime News

ಅಕ್ರಮ ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ, ಆರೋಪಿಗಳ ಬಂಧನ

ಕೊಡಗು ಜಿಲ್ಲೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದ ವಿವೇಕ್ ರವರಿಗೆ ಸೇರಿದ ವೈಲ್ಡ್ ಹೆವೆನ್ ಹೋಂಸ್ಟೇಯಲ್ಲಿ ದಿನಾಂಕ: 02-11-2019 ರ ತಡ ರಾತ್ರಿ ಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ವಿರಾಜಪೇಟೆ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ 02-11-2019 ಹಾಗೂ 03-11-2019 ರಂದು ನಲ್ಲೂರು ಗ್ರಾಮದ ಪುಲ್ಲಂಗಡ ಮುತ್ತಪ್ಪ @ ವಿವೇಕ್, ಎಲ್. ನಿತೀಶ್ ಹಾಗೂ ಬಿ. ಭರತ್ ಚಂದ್ರ ರವರುಗಳು ರೇವ್ ಪಾರ್ಟಿಯನ್ನು ಆಯೋಜಿಸಿ ಸದರಿ ಪಾರ್ಟಿಗೆ ಸಂಬಂಧಿಸಿದಂತೆ ಪ್ಲೈಯರ್ ಗಳನ್ನು ತಯಾರಿಸಿ ಇಂಟರ್ನೆಟ್ ಹಾಗೂ ವಾಟ್ಸಾಪ್ ಮುಖಾಂತರ ಸದರಿ ರೇವ್ ಪಾರ್ಟಿ ವಿಷಯವನ್ನು ತಮ್ಮ ಆಪ್ತವಲಯದಲ್ಲಿ ಹರಿಯಬಿಟ್ಟಿದ್ದು, ಈ ಪಾರ್ಟಿಯಲ್ಲಿ ಭಾಗವಹಿಸಲು ಚಂಡಿಗಢ, ಚೆನೈ, ಹೈದರಾಬಾದ್, ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯರು ದಿನಾಂಕ:02-11-2019 ರಂದು ಕೊಡಗಿಗೆ ಬಂದ ಬಗ್ಗೆ ಮಾಹಿತಿ ಕಲೆಹಾಕಿದ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು, ಸದರಿ ವಿಷಯದ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು ರವರ ಹಾಗೂ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ರವರ ಮಾರ್ಗದರ್ಶನದಲ್ಲಿ ಹಾಗೂ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕರು ರವರ ನೇತೃತ್ವದಲ್ಲಿ ಸದರಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ಅವರ ವಶದಿಂದ ಸುಮಾರು 65 ಗ್ರಾಂ ಗಾಂಜ, 21 ಬಾಟಲ್ ಬಿಯರ್ ಹಾಗೂ ರೇವ್ ಪಾರ್ಟಿಯ ಪ್ರವೇಶ ಶುಲ್ಕ ಹಾಗೂ ಗಾಂಜಾ ಮತ್ತು ಮದ್ಯ ಮಾರಾಟ ಮಾಡಿದ 84 ಸಾವಿರ ನಗದನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 124/2019 ಕಲಂ 20(ಬಿ) ಎನ್.ಡಿ.ಪಿ.ಎಸ್ ಕಾಯ್ದೆ, 34 ಅಬಕಾರಿ ಕಾಯ್ದೆ, ಹಾಗೂ 188 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

ದಸ್ತಗಿರಿ ಮಾಡಲಾದ ಆರೋಪಿಗಳ ವಿವರ :

1) ಪುಲ್ಲಂಗಡ .ಕೆ. ಮುತ್ತಪ್ಪ @ ವಿವೇಕ್ ತಂದೆ ಪೌತಿ ಕುಶಾಲಪ್ಪ, 45 ವರ್ಷ, ವ್ಯವಸಾಯ

ವೃತ್ತಿ, ವಾಸ: ವೈಲ್ಡ್ ಹೆವೆನ್ ಹೋಂ ಸ್ಟೇ, ನಲ್ಲೂರು ಗ್ರಾಮ, ಪೊನ್ನಂಪೇಟೆ ಹೋಬಳಿ,

ಕೊಡಗು ಜಿಲ್ಲೆ.

2) ಎಲ್. ನಿತೀಶ್ ತಂದೆ ಎನ್.ವಿ. ರಾಮಣ್ಣ ರೆಡ್ಡಿ, 23 ವರ್ಷ, ವಿಜ್ಞಾನ ಭಾರತಿ

ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಎಂ.ಎಸ್ ವಿಧ್ಯಾಥರ್ಿ, ವಾಸ: ಹೈದರಾಬಾದ್.

3) ಬಿ. ಭರತ್ ಚಂದ್ರ ತಂದೆ ವಿಘ್ನೇಶ್ವರ ರಾವ್, 22 ವರ್ಷ, ಬಿಟೆಕ್ ವಿಧ್ಯಾರ್ಥಿ, ವಾಸ:

ಲೇಮನೆ ಪಾಡು ಗ್ರಾಮ, ಗುಂಟೂರು ತಾಲ್ಲೂಕು, ಹೈದರಾಬಾದ್.

ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳ ವಿವರ :

1) 65 ಗ್ರಾಂ ಒಣಗಿದ ಗಾಂಜ ಸೊಪ್ಪು

2) ರೇವ್ ಪಾರ್ಟಿ ಪ್ರವೇಶ ಶುಲ್ಕ ಹಾಗೂ ಗಾಂಜಾ ಮತ್ತು ಮದ್ಯ ಮಾರಾಟ ಮಾಡಿದ 84 ಸಾವಿರ ನಗದು.

3) 2 ಮೊಬೈಲ್.

4) 21 ಬಿಯರ್ ಬಾಟಲ್.

5) ಓಂಕಾರ್ ಜನರೇಟರ್ ಸೆಟ್ ವಾಹನ.

6) 6 ಡಿ,ಜೆ. ಸೌಂಡ್ ಸಿಸ್ಟಮ್.

7) ಪ್ರಚಾರಕ್ಕಾಗಿ ತಯಾರಿಸಿದ್ದ ಬ್ಯಾನರ್.

ಸದರಿ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಡಾ|| ಸುಮನ್.ಡಿ.ಪಿ, ಹಾಗೂ ವಿರಾಜಪೇಟೆ ಉಪವಿಭಾಗದ ಡಿವೈಎಸ್.ಪಿ ಶ್ರೀ ಸಿ.ಟಿ.ಜಯಕುಮಾರ್ ರವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್, ಎಎಸ್ಐ ಕೆ.ವೈ. ಹಮ್ಮೀದ್, ಸಿಬ್ಬಂದಿಯವರಾದ ಎಂ.ಎನ್. ನಿರಂಜನ್, ಬಿ.ಎಲ್. ಯೋಗೇಶ್ ಕುಮಾರ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಅನಿಲ್ ಕುಮಾರ್, ಮಹಿಳಾ ಸಿಬ್ಬಂದಿಯವರಾದ ಎಂ.ಬಿ.ಸುಮತಿ, ಮಮತ, ಚಾಲಕ ಶಶಿಕುಮಾರ್, ಇತರೆ ವಿಭಾಗದ ಸಿಬ್ಬಂದಿಯವರಾದ ರಾಜೇಶ್, ಗಿರೀಶ್, ಜೋಸೆಫ್, ಸಾಜಿ, ಜೋಸ್ ನಿಶಾಂತ್, ರಾಜ ಹಾಗೂ ಕುಟ್ಟ ವೃತ್ತ ನಿರೀಕ್ಷಕರಾದ ಶ್ರೀ. ಪರಶಿವಮೂರ್ತಿ, ಪೊನ್ನಂಪೇಟೆ ಪೊಲೀಸ್ ಉಪನಿರೀಕ್ಷಕರಾದ ಡಿ.ಕುಮಾರ್, ಪ್ರಮೋದ್ ಕುಮಾರ್, ಸಿ.ಯು. ಸಾದಾಲಿ, ಸತೀಶ್, ಎಂ.ಡಿ. ಮನು, ಹರೀಶ, ಕೆ.ಆರ್. ರಾಜೇಶ್, ರವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಇವರ ಕಾರ್ಯವನ್ನು ಕೊಡಗು ಜಿಲ್ಲಾ ಪೊಲೀಸ್ ಆಧೀಕ್ಷಕರವರು ಶ್ಲಾಘಿಸಿರುತ್ತಾರೆ.

ಪತ್ನಿ ಕೊಲೆ ಪ್ರಕರಣ , ಆರೋಪಿ ಬಂಧನ.

ಕೊಡಗು ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿನ ಹೊಸಬಡಾವಣೆಯಲ್ಲಿ ಮೊಹಮ್ಮದ್ ಶರೀಫ್ ಎಂಬುವವರು ತನ್ನ ಹೆಂಡತಿ ಮತ್ತು 02 ಮಕ್ಕಳೊಂದಿಗೆ ಬಾಡಿಗೆಗೆ ವಾಸವಿದ್ದು, ಮೊಹಮ್ಮದ್ ಶರೀಫನು ವೈಯಕ್ತಿಕ ಕಾರಣದಿಂದ ದಿ:02-11-2019 ರಂದು ರಾತ್ರಿ ವೇಳೆಯಲ್ಲಿ ಚಾಕುವಿನಿಂದ ಅನೇಕ ಬಾರಿ ತಿವಿದು ಗಾಯಪಡಿಸಿ ಕೊಲೆಮಾಡಿರುವುದಾಗಿ ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

ಕೊಡಗು ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಸದರಿ ಪ್ರಕರಣದಲ್ಲಿನ ಆರೋಪಿಯ ಪತ್ತೆ ಬಗ್ಗೆ ತಂಡವನ್ನು ರಚಿಸಿದ್ದು, ಸದರಿ ತಂಡವು ಆರೋಪಿಯನ್ನು ದಿನಾಂಕ: 03-11-2019 ರಂದು ದಸ್ತಗಿರಿ ಮಾಡಿದ್ದು, ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ ಚಾಕನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ದಸ್ತಗಿರಿ ಮಾಡಲಾದ ಆರೋಪಿಯ ವಿವರ:-

ಮೊಹಮ್ಮದ್ ಶರೀಫ್ ಹೆಚ್. ತಂದೆ ಪಿ.ಎಂ.ಹಸನ್, ಪ್ರಾಯ-28 ವರ್ಷ, ಪೆಯಿಂಟಿಂಗ್ ಕೆಲಸ, ಹಾಲಿ

ವಾಸ ಹೊಸಬಡಾವಣೆ, ಮಡಿಕೇರಿ. ಸ್ವಂತ ವಿಳಾಸ: ಚಾಮುಂಡೇಶ್ವರಿ ನಗರ, ಮಡಿಕೇರಿ.

ಸದರಿ ಪ್ರಕರಣದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ.ಪನ್ನೇಕರ್ ರವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ಬಿ.ಪಿ.ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ.ಅನೂಪ್ ಮಾದಪ್ಪ ರವರ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷರಾದ ಶ್ರೀ. ಸದಾಶಿವ ಎಂ.ಕೆ. ಸಹಾಯಕ ಉಪ ನಿರೀಕ್ಷಕರಾದ ಶ್ರೀ.ಗೋವಿಂದರಾಜು ಹೆಚ್.ಸಿ., ಮಡಿಕೇರಿ ನಗರ ವೃತ್ತ ಕಛೇರಿಯ ಶ್ರೀ.ಕಿರಣ್, ಶ್ರೀ.ಸಿ.ಯು.ಚರ್ಮಣ, ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಶ್ರೀ.ಕೆ.ಕೆ.ದಿನೇಶ್, ಶ್ರೀ.ಪ್ರವೀಣ್ ಬಿ.ಕೆ., ಶ್ರೀ. ನಾಗರಾಜ್ ಕಡಗನ್ನವರ್, ರವರುಗಳನ್ನು ಒಳಗೊಂಡ ತಂಡವು ಪಾಲ್ಗೊಂಡಿರುತ್ತದೆ