Crime News

ಅಕ್ರಮ ಗಾಂಜಾ  ಮಾರಾಟ ಮಾಡುತ್ತಿದ್ದವರ ಬಂಧನ

ದಿನಾಂಕ 08-11-2019 ರಂದು ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪಅಧೀಕ್ಷಕರಾದ ಶ್ರೀ. ಜಯಕುಮಾರ್ ರವರಿಗೆ ಅಮ್ಮತ್ತಿ ಕಡೆಯಿಂದ ವಿರಾಜಪೇಟೆ ಕಡೆಗೆ ಮಾರಾಟ ಮಾಡಲೆಂದು ಸ್ಕೂಟರ್ ಗಾಂಜಾವನ್ನು ತರುತ್ತಿದ್ದಾರೆಂದು ದೊರೆತ ಖಚಿತ ವರ್ತಮಾನದ ವರದಿಯನ್ನುವಿರಾಜಪೇಟೆ  ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ಮರಿಸ್ವಾಮಿ ರವರಿಗೆ ತಿಳಿಸಿದ್ದು, ಪಿ.ಎಸ್.ಐ ರವರು ವಿರಾಜಪೇಟೆ ವೃತ್ತನಿರೀಕ್ಷಕರಾದ ಶ್ರೀ. ಕ್ಯಾತೇಗೌಡರವರೊಂದಿಗೆ ಹಾಗೂ ಸಿಬ್ಬಂದಿಗಳೊಂದಿಗೆ ಮದ್ಯಾಹ್ನ 01-00 ಗಂಟೆ ಸಮಯದಲ್ಲಿ ಮಗ್ಗುಲ ಗ್ರಾಮದ ಬಳಿ ಆರೋಪಿಗಳಿಗಾಗಿ ತಪಾಷಣೆ ಮಾಡುತ್ತಿದ್ದಾಗ ಹೋಂಡಾ ಆಕ್ಟೀವಾ ಸ್ಕೂಟರ್  ನಂ KA-03-EP-3760 ರಲ್ಲಿ ಇಬ್ಬರು ಆರೋಪಿಗಳು ಅಮ್ಮತ್ತಿ ಕಡೆಯಿಂದ ಬರುತ್ತಿದ್ದು, ಅವರನ್ನು ತಡೆಯಲು ಪ್ರಯತ್ನಿಸಿದಾಗ ಅವರು ಸ್ಕೂಟರನ್ನು ಅಡ್ಡಾ ದಿಡ್ಡಿಯಾಗಿ ಚಲಿಸಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದಾಗ ಸದರಿಯವರನ್ನು ವಿಚಾರ ಮಾಡಲಾಗಿ ತಮ್ಮ ಹೆಸರುಗಳನ್ನು 1) ಜಿ.ಆರ್ ವಿಜಯ್,  ತಂದೆ ಜಿ. ರಾಜು ಪ್ರಾಯ 30 ವರ್ಷ, ಹೊಸೂರು ಬೆಟ್ಟಗೇರಿಯ ಮೊಳ್ಳೇರ ಸುಭಾಶ್ ರವರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸ, ವಿರಾಜಪೇಟೆ ತಾಲ್ಲೂಕು  2)  ಹೆಚ್.ಜಿ ಬಿದ್ದಪ್ಪ @ ಬಿದ್ದ ತಂದೆ ಪೌತಿ ಗಣೇಶ, ಪ್ರಾಯ 23 ವರ್ಷ, ಹೊಸೂರು ಬೆಟ್ಟಗೇರಿ ಗ್ರಾಮದ ಮೊಳ್ಳೇರ ಸುಜು ಜೋಯಪ್ಪ ರವರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸ, ವಿರಾಜಪೇಟೆ ತಾಲ್ಲುಕು ಎಂಬುದಾಗಿ ತಿಳಿಸಿದ್ದು, ಸದರಿಯವರನ್ನು ಕೂಲಂಕಷವಾಗಿ ವಿಚಾರಣೆ ಗೊಳಪಡಿಸಿದಾಗ ತಾವುಗಳು ಸ್ಕೂಟರ್ ನ ಸೀಟಿನ ಕೆಳಭಾಗದ ಬಾಕ್ಸ್ ನಲ್ಲಿ ಗಾಂಜಾ ಇಟ್ಟಿದ್ದು ಇದನ್ನು ವಿರಾಜಪೇಟೆ ನಗರದಲ್ಲಿ ಮಾರಾಟ ಮಾಡಲು ತರುತ್ತಿದ್ದುದ್ದಾಗಿ ತಿಳಿಸಿದ್ದರ ಮೇರೆಗೆ ಸದರಿಯವರಿಂದ 1 ಕೆ.ಜಿ 149 ಗ್ರಾಂ ಗಾಂಜವನ್ನು ಹಾಗೂ ಹೋಂಡಾ ಆಕ್ಟೀವಾ ಸ್ಕೂಟರ್ ನೊಂದಿಗೆ ಅಮಾನತ್ತು ಪಡಿಸಿಕೊಂಡು ವಿರಾಜಪೇಟೆ  ನಗರ ಪೊಲೀಸ್ ಠಾಣಾ ಮೊ.ಸಂ. 91/2019 ಕಲಂ: ಕಲಂ 20(B)II ಎನ್.ಡಿ.ಪಿ.ಎಸ್. ಆಕ್ಟ್ 1985. ರೀತ್ಯಾ ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಹಲ್ಲೆ ಪ್ರಕರಣ

            ದಿನಾಂಕ:08-11-2019 ರಂದು ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಕೂಡ್ಲೂರು ಗ್ರಾಮದ ನಿವಾಸಿ ವಸಂತ ಹಾಗೂ ಅದೇ ಗ್ರಾಮದ ನಿವಾಸಿ ಸ್ವಾಮಿ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.