Crime News

ಹಲ್ಲೆ ಪ್ರಕರಣ

          ದಿನಾಂಕ: 13-11-2019 ರಂದು ಸೋಮವಾರಪೇಟೆ ತಾಲ್ಲೂಕು ಯಡವನಾಡು ಗ್ರಾಮದ ಬಳಿ ಆಶ್ವತ್ಥಾಮ ಎಂಬುವವರು ಕೆಎ-02-ಇಎಸ್-6581 ರ ಬಸ್ಸನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಯಡವನಾಡು ಗ್ರಾಮದ ನಿವಾಸಿ ದೊರೆಮಣಿ ಎಂಬುವವರು ಬೈಕ್ ನಲ್ಲಿ ಬಂದು ಬಸ್ಸನ್ನು ತಡೆದು ನಿಲ್ಲಸಿ ರಸ್ತೆಯಲ್ಲಿ ವಾಹನಕ್ಕೆ ದಾರಿ ಕೊಡುವ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ಮಾಡಿದ್ದು ಈ ಬಗ್ಗೆ ಅಶ್ವತ್ಥಾಮ ರವರು  ನೀಡಿದ ಪುಕಾರಿನ ಮೇರ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಅನುಮಾನಸ್ಪದ ಸಾವು

          ದಿನಾಂಕ: 12-11-2019 ರಂದು ಬೆಂಗಳೂರು ನಗರದ ನಿವಾಸಿ ರವೀಂದ್ರ ಎಂಬುವವರು ವಿರಾಜಪೇಟೆ ತಾಲ್ಲೂಕು ತಿತಿಮತಿ ಅಬ್ಬೂರು ತಾರಿಕಟ್ಟೆ ಗ್ರಾಮಕ್ಕೆ ಅವರ ಸಂಭಂದಿಕರ ವಿವಾಹ ಮಾತುಕತೆ ನಿಮಿತ್ತ ಬಂದಿದ್ದರು. ದಿನಾಂಕ: 13-11-2019 ರಂದು ರಾತ್ರಿ ಮನೆಯಿಂದ ಹೊರೆಗ ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು ಮನೆಯ ಪಕ್ಕದ ತೋಟದಲ್ಲಿರುವ ಬಾವಿಯಲ್ಲಿ ರವೀಂದ್ರ ರವರ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ಮೃತರ ಪತ್ನಿ ಮರಣದ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಪ್ರಕರಣ

          ದಿನಾಂಕ: 11-11-2019 ರಂದು ವಿರಾಜಪೇಟೆ ತಾಲ್ಲೂಕು ತಿತಿಮತಿ ಗ್ರಾಮದ ಬಳಿ  ಸಾರ್ವಜನಿಕ ರಸ್ತೆಯಲ್ಲಿ ಕೆಎ-09-ಹೆಚ್ಎಂ-7289 ರ ಬೈಕನ್ನು ಸವಾರ ಚೇತನ್ ಎಂಬುವವರು ಅತವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದುದರಿಂದ ಹಿಂಬದಿ ಸವಾರ ಶಿವಕುಮಾರ್ ಎಂಬುವವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು ಈ ಬಗ್ಗೆ ಲೋಕೇಶ್ ಎಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಿನಾಂಕ: 13-11-2019 ರಂದು ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಮೃತ ಶಿವಕುಮಾರ್ ರವರು ಮೈಸೂರು ಜಿಲ್ಲೆ ರಾಮನಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಅದೇ ಜಿಲ್ಲೆಯ ಕಲ್ಲೂಕು ಎಡಳ್ಳಿ ಗ್ರಾಮದ ಕಟ್ಟಡ ಸೆಂಟ್ರಿಂಗ್ ಗುತ್ತಿಗೆದಾರ ಕೃಷ್ಣ ಎಂಬುವವರೊಂದಿಗೆ ದಿನಾಂಕ: 09-11-2019 ರಂದು ಮಡಿಕೇರಿ ತಾಲ್ಲೂಕು ನೆಲಜಿ ಗ್ರಾಮಕ್ಕೆ ಸೆಂಟ್ರಿಂಗ್ ಕೆಲಸಕ್ಕೆ ಬಂದು ಕೆಲಸ ಮುಗಿಸಿ ದಿನಾಂಕ: 11-11-2019 ರಂದು ವಾಪಾಸ್ಸು ಸ್ವಗ್ರಾಮಕ್ಕೆ ಹೋಗುತ್ತಿರುವಾಗ ವಿರಾಜಪೇಟೆ ತಾಲ್ಲೂಕು ತಿತಿಮತಿ ಗ್ರಾಮದ ಬಳಿ ಗುತ್ತಿಗೆದಾರ ಕೃಷ್ಣ ರವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಹಣಕಾಸಿನ ವಿಚಾರದಲ್ಲಿ ಜಗಳವಾಗಿದ್ದ ವೈಷಮ್ಯದಿಂದ ಚೇತನ್ ಎಂಬುವವರು ಸಹಾಯದೊಂದಿಗೆ ಶಿವಕುಮಾರ್ ರವರುನ್ನು ಕೊಲೆ ಮಾಡಿರುವುದಾಗಿ ಮೃತನ ಪತ್ನಿ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಪೊಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.