Crime News

ಹಲ್ಲೆ, ಕೊಲೆ ಯತ್ನ

ದಿನಾಂಕ 11/11/2019ರಂದು ಶನಿವಾರಸಂತೆ ನಗರದ ತ್ಯಾಗರಾಜ ಕಾಲೋನಿ ನಿವಾಸಿ ದಕ್ಷಿಣಾ ಮೂರ್ತಿ ಎಂಬವರು ಮನೆಯಲ್ಲಿರುವಾಗ ಅದೇ ಕಾಲೋನಿ ನಿವಾಸಿ ಬಸಪ್ಪ ಎಂಬವರು ಬಂದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ರೀಪರ್ ಪಟ್ಟಿಯಿಂದ ದಕ್ಷಿಣಾಮೂರ್ತಿರವರ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

 ದಿನಾಂಕ 14/11/2019ರಂದು ವಿರಾಜಪೇಟೆ ನಗರದ ಗಾಂಧಿನಗರ ನಿವಾಸಿ ಅಬೂಬಕರ್ ಎಂಬವರು ಯಾವುದೋ ಕಾರಣಕ್ಕೆ ವಿಷಸೇವಿಸಿ ಅಸ್ವಸ್ಥರಾಗಿದ್ದು ದಿನಾಂಕ 15/11/2019ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ

ದಿನಾಂಕ 14/11/2019ರಂದು ಕುಶಾಲನಗರದ ಸುಂದರನಗರ ನಿವಾಸಿ ಅನೀಸ್ ಎಂಬವರು ಕುಶಾಲನಗರದ ಕಾರ್ಯಪ್ಪ ವೃತ್ತದ ಬಳಿ ರಿಕ್ಷಾ ನಿಲ್ಲಿಸಿಕೊಂಡಿರುವಾಗ ಕೆಎ-09-ಹೆಚ್‌ಎಫ್‌-1880ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಅನುದೀಪ್‌ ಎಂಬವರಿಗೆ ಡಿಕ್ಕಿಪಡಿಸಿದ ಪರಿಣಾಮ ಅನುದೀಪ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದುರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಮರಗೋಡು ಬಳಿಯ ಐಕೊಳ ನಿವಾಸಿ ಜನಾರ್ಧನ ಎಂಬವರು ದಿನಾಂಕ 13/11/2019 ರಿಂದ 15/11/2019ರ ವರೆಗೆ ಮಡಿಕೇರಿಗೆ ತೆರಳಿ ಮರಳಿ ಬರುವಾಗ ಯಾರೋ ಕಳ್ಳರು ಮನೆಯ ಮುಂಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಮನೆಯೊಳಗಿದ್ದ ಸುಮಾರು ರೂ.23,000/- ಮೌಲ್ಯದ 80 ಕೆಜಿ ಕರಿಮೆಣಸು ಹಾಗೂ ಇಸ್ತ್ರಿ ಪೆಟ್ಟಿಗೆ ಮುಂತಾದವುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಬೆಂಗಳೂರಿನಲ್ಲಿ ವಾಸವಿರುವ ಕೆ.ಎಸ್.ದೇವಯ್ಯ ಎಂಬವರಿಗೆ ಸೇರಿದ ತಿತಿಮತಿ ನೊಕ್ಯ ಗ್ರಾಮದಲ್ಲಿರುವ ಸುಮಾರು 10 ಏಕರೆ ಕಾಫಿ ತೋಟವನ್ನು ಅವರ ತಮ್ಮ ಲವ ಎಂಬವರು ನೋಡಿಕೊಳ್ಳುತ್ತಿದ್ದು ಈ ಆಸ್ತಿಯನ್ನು ತಮ್ಮ ಲವ ಮತ್ತು ತಂಗಿ ಸರಸ್ವತಿ ಎಂಬವರುಗಳು ಸೇರಿಕೊಂಡು ದೇವಯ್ಯನವರ ಸಹಿಯನ್ನು ನಕಲಿ ಮಾಡಿ ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಅವರ ಹೆಸರಿಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.