Crime News

ಗಂಡಸು ಕಾಣೆ ಪ್ರಕರಣ

ಗೋಣಿಕೊಪ್ಪ ನಗರದ ನಿವಾಸಿ ಎಸ್‌.ಕೆ.ಗೇವಾರಾಂ ಎಂಬವರು ದಿನಾಂಕ 13/11/2019ರಂದು ತನ್ನ ತಾಯಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ರಾಜಸ್ಥಾನಕ್ಕೆ ಹೋದವರು ಯಾವುದೇ ಫೋನ್‌ ಕರೆಗೂ ಸಿಗದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 16/11/2019ರಂದು ಬಾಳೆಲೆ ನಿವಾಸಿ ಎಂ.ಆರ್.ನಿಖಿಲ್ ಎಂಬವರು ಅವರ ಸ್ನೇಹಿತ ಕಿರಣ್‌ ಎಂಬವರೊಂದಿಗೆ ಮೋಟಾರು ಸೈಕಲಿನಲ್ಲಿ ಗೋಣಿಕೊಪ್ಪದಿಂದ ಬಾಳೆಲೆಗೆ ಹೋಗುತ್ತಿರುವಾಗ ಚೆನ್ನಂಗೊಲ್ಲಿ ಬಳಿ ತಿತಿಮತಿ ಕಡೆಯಿಂದ 8575ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿಖಿಲ್‌ರವರ ಸ್ನೇಹಿತ ಕಿರಣ್‌ ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ನಿಖಿಲ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಬೆದರಿಕೆ ಪ್ರಕರಣ

ದಿನಾಂಕ 15/11/2019ರಂದು ಕುಶಾಲನಗರದ ಗೋಪಾಲ ಸರ್ಕಲ್‌ ನಿವಾಸಿ ಕೆ.ವಿ.ರಾಜೀವ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಕಾರೊಂದರಲ್ಲಿ ಬಂದ ಇಂದಿರಾ ಬಡಾವಣೆಯ ನಿವಾಸಿಗಳಾದ ಗಿರಿ, ರಾಜೇಶ್‌ ಮತ್ತು ಇತರರು ಕೈಯಲ್ಲಿ ಕತ್ತಿ ಮಚ್ಚುಗಳನ್ನು  ಹಿಡಿದುಕೊಂಡು ರಾಜೀವರವರ ಮನೆಯ ಗೇಟಿನೊಳಗೆ ಅಕ್ರಮವಾಗಿ ಪ್ರವೇಶಿಸಿ ರಾಜೀವರವರನ್ನು ಕೊಲ್ಲುವ ಉದ್ದೇಶದಿಂದ ಹಲ್ಲೆ ಮಾಡಲು ಯತ್ನಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 13/11/2019ರಂದು ಪಿರಿಯಾಪಟ್ನ ಬಳಿಯ ಅಂಬ್ಲಾರೆ ಗ್ರಾಮದ ನಿವಾಸಿ ರಾಮೇಗೌಡ ಎಂಬ 82 ವರ್ಷದ ವೃದ್ದ ವ್ಯಕ್ತಿಯು ಚಿಕಿತ್ಸೆಗಾಗಿ ಕೂಡುಮಂಗಳೂರಿನ ಅವರ ಮಗಳ ಮನೆಗೆ ಬಂದಿದ್ದು ನಂತರ ಮನೆಗೆ ಹೋಗದೆ ಕಾಣೆಯಾಗಿದ್ದು, ದಿನಾಂಕ 16/11/2019ರಂದು ಅವರ ಶವವು ಹೆಬ್ಬಾಲೆ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 16/11/2019ರಂದು ಸೋಮವಾರಪೇಟೆ ಬಳಿಯ ಕಲ್ಕಂದೂರು ನಿವಾಸಿ ಬಿ.ಎಸ್.ಸುರೇಶ್‌ ಎಂಬವರು ಮನೆಯ ಬಚ್ಚಲು ಮನೆಯ ಮಾಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಸುರೇಶ್‌ರವರು ಅನಾರೋಗ್ಯದಿಂದ ನರಳುತ್ತಿದ್ದು ಗುಣಮುಖನಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 16/11/2019ರಂದು ಮಡಿಕೇರಿ ನಗರದ ಜಯನಗರ ನಿವಾಸಿ ಹೆಚ್‌.ಎಸ್.ರಾಮಯ್ಯ ಎಂಬವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮಗ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟ ವಿಚಾರವಾಗಿ ಕೊರಗುತ್ತಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.