Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅಭ್ಯತ್‍ಮಂಗಲ ಗ್ರಾಮದ ನಿವಾಸಿ ಪೆರಿಯಸ್ವಾಮಿ ಎಂಬವರು ದಿನಾಂಕ 17-11-2019 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಅವರ ಮಗ ಮಣಿಕಂಠ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಕಾರು ಅಪಘಾತ:

ದಿನಾಂಕ 17-11-2019 ರಂದು ಕಾಸರಗೋಡಿನ ನಿವಾಸಿಯಾದ ಗೋಪಾಲ ಎಂಬವರು ತನ್ನ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಮಾರುತಿ ಇಕೋ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಕಾಸರುಗೋಡಿಗೆ ಮಡಿಕೇರಿ ಮಾರ್ಗವಾಗಿ ಹೋಗುತ್ತಿದ್ದಾದ ಚಾಲಕ ಸತೀಶ್‍ರವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಮದೆನಾಡು ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಮಂದಿಗೆ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಕ್ಷಾಕ್ಕೆ ಬಸ್‍ ಡಿಕ್ಕಿ

ದಿನಾಂಕ 17-11-2019 ರಂದು ಮಡಿಕೇರಿ ತಾಲೋಕು ಕುಂಜಿಲ ಗ್ರಾಮದ ನಿವಾಸಿ ಕಂಬೇಯಂಡ ಅಪ್ಪಚ್ಚ ಎಂಬವರು ತಮ್ಮ ಬಾಪ್ತು ಆಟೋ ರಿಕ್ಷಾದಲ್ಲಿ ಕಕ್ಕಬ್ಬೆ ಕಡೆಗೆ ಹೋಗುತ್ತಿದ್ದಾಗ  ಕಕ್ಕಬ್ಬೆ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿದ್ದ ಗಣೇಶ್‍ ಖಾಸಗಿ ಬಸ್ಸ್ ಕಂಬೇಯಂಡ ಅಪ್ಪಚ್ಚನವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಆಟೋ ರಿಕ್ಷಾ ಜಖಂಗೊಂಡು ಚಾಲಕ ಗಾಯಗೊಂಡಿದ್ದು, ಈ ಸಂಬಂದ ನಾಪೋಕ್ಲು ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ತಾಯಿ ಮಗನ ಆತ್ಮಹತ್ಯೆ:

ದಿನಾಂಕ 17-11-2019 ರಂದು ಸೋಮವರಪೇಟೆ ಪೊಲೀಸ್ ಠಾಣಾ ಸರಹದ್ದಿನ ಚೌಡ್ಲು ಗ್ರಾಮದಲ್ಲಿ ವಾಸವಾಗಿದ್ದ ಶ್ರೀಮತಿ ತಂಗಮಣಿ ಹಾಗು ಆಕೆಯ ಮಗ ಜೀವನದಲ್ಲಿ ಜುಗುಪ್ಸೆಗೊಂಡು  ತಮ್ಮ ವಾಸದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.