Crime News

ವಿದ್ಯುತ್‌ ತಂತಿ  ಸ್ಪರ್ಶಿಸಿ ವ್ಯಕ್ತಿ ಸಾವು

          ದಿನಾಂಕ: 20-11-2019 ಸೋಮವಾರಪೇಟೆ ತಾಲ್ಲೂಕು ಬರಡಿ ಗ್ರಾಮದ ನಿವಾಸಿ ರಾಜನ್ ಎಂಬುವವರು ನೆಲ್ಯಹುದಿಕೇರಿ ಗ್ರಾಮದ ಕೆ.ಪ್ರಕಾಶ್ ಎಂಬುವವರ ಅತ್ತಿಮಂಗಲ ಎಸ್ಟೇಟ್ ನಲ್ಲಿ ಮರದ ರೆಂಬೆಗಳನ್ನು ಕಡಿಯಲು ಕಬ್ಬಿಣದ ಏಣಿಯನ್ನು ತೆಗೆದುಕೊಂಡು ಹೋಗುತ್ತಿರುವಾಗ ತೋಟದ ಮೇಲ್ಬಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಏಣಿ ತಾಗಿ ರಾಜನ್ ರವರಿಗೆ ವಿದ್ಯುತ್ ಸ್ಪರ್ಶಗೊಂಡು ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರಿಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಈ ಬಗ್ಗೆ ವಿಜು ಜೋಸೆಫ್ ಎಂಬುವವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

          ದಿನಾಂಕ: 17-10-2019 ರಂದು ಮಡಿಕೇರಿ ನಗರದ ಪೆನ್ಷನ್ ಲೇನ್ ನಿವಾಸಿ ಜಯಂತಿ ಎಂಬುವವರು ಚಿನ್ನಾಭರಣಗಳನ್ನು ಮನೆಯ ಬೀರುವಿನ ಲಾಕರ್ ನಲ್ಲಿ ಇಟ್ಟು ಬೆಂಗಳೂರಿನಲ್ಲಿರುವ ಅವರ ತಂಗಿಯ ಮನೆಗೆ ಹೋಗಿದ್ದರು. ಬೆಂಗಳೂರಿನಿಂದ ವಾಪಾಸ್ಸು ಬಂದ ನಂತರ ದಿನಾಂಕ: 17-11-2019 ರಂದು ದೇವಸ್ಥಾನಕ್ಕೆಹೋಗಲು ಚಿನ್ನದ ಆಭರಣಗಳನ್ನು ಹಾಕಿಕೊಳ್ಳಲು ಬೀರುವಿನ ಲಾಕರ್ ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ 1,50,000 ರೂ ಮೌಲ್ಯದ ಚಿನ್ನಾಭಾರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಜಯಂತಿ ರವರು ದಿನಾಂಕ: 19-11-2019 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್ ಡಿಕ್ಕಿ ವೃದ್ದೆ ಸಾವು

          ದಿನಾಂಕ: 20-11-2019 ರಂದು ಮಡಿಕೇರಿ ತಾಲ್ಲೂಕು ಬಲ್ಲಮಾವಟಿ ಗ್ರಾಮದ ನಿವಾಸಿ ದೇಚವ್ವ ಎಂಬುವವರು ಮಡಿಕೇರಿಗೆ ಹೋಗುವ ಸಲವಾಗಿ ಬಲ್ಲಮಾವಟಿ ಗ್ರಾಮದ ಬಸ್ ತಂಗುದಾಣದ ಬಳಿ ಬಸ್ ಹತ್ತಲು ರಸ್ತೆ ದಾಟುತ್ತಿರುವಾಗ ಕೆಎ-09-ಎಫ್-5180 ರ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಬ್ದುಲ್ ಸಲಾಂ ಎಂಬುವವರು ಬಸ್ಸನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ಕೆಳಗೆ ಬಿದ್ದು ಬಸ್ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮರತಪಟ್ಟಿದ್ದು ಈ ಬಗ್ಗೆ ಮೃತರ ಮಗ ಶಂಭು ಎಂಬುವವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು

          ದಿನಾಂಕ: 20-11-2019 ರಂದು ರೇಶ್ಮ ಬಿ, ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಡಿಕೇರಿ ರವರು ತಮ್ಮಇಲಾಖೆಯ ಭೂವಿಜ್ಞಾನಿಗಳೊಂದಿಗೆ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದ ಸ್ಥಳ ಪರಿಶೀಲನೆ ಮಾಡಿ ಇಲಾಖಾ ವಾಹನ ಸಂಖ್ಯೆ ಕೆಎ-12-ಜಿ-674 ರಲ್ಲಿ ಹಿಂದಿರುಗುತ್ತಿದ್ದಾಗ ಮಡಿಕೇರಿ ತಾಲ್ಲೂಕು ಕೊಟ್ಟಮುಡಿ ಗ್ರಾಮದ ರಸ್ತೆ ಜಂಕ್ಷನ್ ಬಳಿ ನಾಪೋಕ್ಲು ನಿವಾಸಿಗಳಾದ ದೀಪು, ರನ್ನಮತ್ತು ಪ್ರಶಾಂತ ಎಂಬುವವರು ವಾಹನವನ್ನು ತಡೆದು ನಿಲ್ಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಈ ಬಗ್ಗೆ ರೇಶ್ಮ ಬಿ, ಹಿರಿಯ ಭೂ ವಿಜ್ಞಾನಿ ಯವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ: 19-11-2019 ರಂದು ಸೋಮವಾರಪೇಟೆ ತಾಲ್ಲೂಕು ಗುಡುಗಳಲೆ ಗ್ರಾಮದಲ್ಲಿರುವ ನವನೀತ್ ಹೋಂಡಾ ಬೈಕ್ ಶೋರೂಂ ನಲ್ಲಿ ಕೆಲಸ ಮಾಡುತ್ತಿರುವ ಜಗದೀಶ್ ಎಂಬುವವರು ಅವರ ಸ್ನೇಹಿತರೊಂದಿಗೆ ಮಾತಾನಾಡಿಕೊಂಡಿರುವಾಗ ಅದೇ ಶೋರೂಂನಲ್ಲಿ ಕೆಲಸ ಮಾಡಿಕೊಂಡಿರುವ ಸುನಿಲ್ ಎಂಬುವವರು ವಿನಾ ಕಾರಣ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಜಗದೀಶ್ ರವರು ನೀಡಿದ ಪುಕಾರಿನ ಮೇರ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

          ದಿನಾಂಕ: 19-11-2019 ರಂದು ಸೋಮವಾರಪೇಟೆ ತಾಲ್ಲೂಕು ಅತ್ತೂರು ನಲ್ಲೂರು ಗ್ರಾಮದ ಡಿ ಎಸ್ಟೇಟ್ ಲೈನ್ ಮನೆಯ ನಿವಾಸಿ ಎಂ ಬಾಬು ಎಂಬುವವರ ಮನೆಯಲ್ಲಿ ಬೀರುವಿನಲ್ಲಿ ಇಟ್ಟಿದ್ದ 24,500 ರೂ ಬೆಲೆ ಬಾಳುವ ಚಿನ್ನಾಭರಣಗಳನ್ನು ಪಕ್ಕದ ಲೈನ್ ಮನೆಯಲ್ಲಿದ್ದ ಮಹಿಳೆ ಕಳವು ಮಾಡಿರಬಹುದಾಗಿ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ          

ದಿನಾಂಕ: 20-11-2019 ರಂದು ಸೋಮವಾರಪೇಟೆ ತಾಲ್ಲೂಕು ಬಸವನಹಳ್ಳಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಪ್ರಶಾಂತ್ ಎಂಬುವವರು ತಮ್ಮ ಕಾರಿನಲ್ಲಿ ಹೋಗುತ್ತಿರುವಾಗ ಕೆಎ-45-ವಿ-5993 ಮತ್ತು ಕೆಎ-12-ಜಡ್- 8636 ರ ರಡು ಬೈಕ್ ಗಳ ಸವಾರರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಹಿಂದಿನಿಂದ ಕಾರಿಗ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಗಳಲ್ಲಿದ್ದ ಮೂವರು ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.