Crime News

ವ್ಯಕ್ತಿ ಕಾಣೆ ಪ್ರಕರಣ

          ದಿನಾಂಕ: 19-11-2019 ರಂದು ಸೋಮವಾರಪೇಟೆ ತಾಲ್ಲೂಕು ಬ್ಯಾಡಗೊಟ್ಟ ಗ್ರಾಮದ ನಿವಾಸಿ ರವಿ ಎಂಬುವವರು ಮನೆಯಿಂದ ಹೊರಗೆ ಹೋದವರು ಈ ವರೆಗೆ ವಾಪಾಸ್ಸು ಬಾರದೇ ಸ್ನೇಹಿತರು ಹಾಗೂ ನೆಂಟರಿಷ್ಟರಲ್ಲಿ ವಿಚಾರಿದ್ದು ಈ ವರೆಗೆ ಪತ್ತೆಯಾಗದೇ ಕಾಣೆಯಾಗಿದ್ದು ಈ ಬಗ್ಗೆ ಶ್ರೀಮತಿ ಬೇಬಿ ಎಂಬುವವರು ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾಲಬಾದೆಯಿಂದ ವ್ಯಕ್ತಿ ಆತ್ಮ ಹತ್ಯೆ

          ದಿನಾಂಕ: 22-11-2019 ರಂದು ಸೋಮವಾರಪೇಟೆ ತಾಲ್ಲೂಕು ಕಿರಗಂದೂರು ಗ್ರಾಮದ ನಿವಾಸಿ ವಿನೋದ್ ಎಂಬುವವರು ಬ್ಯಾಂಕ್ ಹಾಗೂ ಸ್ವಸಹಾಯ ಸಂಘಗಳಿಂದ ಸಾಲ ಪಡೆಕೊಂಡಿದ್ದು ಸಾಲ ತೀರಿಸಲು ಸಾಧ್ಯವಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.