Crime News

ಸುಲಿಗೆ ಪ್ರಕರಣದ ಆರೋಪಿಗಳ ಬಂಧನ:

        ದಿನಾಂಕ 24-11-2019 ರಂದು ಮಧ್ಯಾಹ್ನ ಸಮಯ 3-15 ಗಂಟೆಗೆ ಭಾಗಮಂಡಲ ತಲಕಾವೇರಿ ರಸ್ತೆಯಲ್ಲಿರುವ ಶ್ರೀನಿವಾಸ್ ಕೂರ್ಗ್ ಔಟ್ಲೆಟ್ಸ್, ಸ್ಪೈಸಸ್ ಅಂಗಡಿಗೆ ಇಬ್ಬರು ಅಪರಿಚಿತರು ನಂಬರ್ ಪ್ಲೇಟ್ ಇಲ್ಲದ ಸ್ಕೂಟಿಯಲ್ಲಿ ವೈನ್ ಖರೀದಿಸುವ ನೆಪದಲ್ಲಿ ಬಂದು ಒಳಗಡೆ ಪ್ರವೇಶಿಸಿ ಅಂಗಡಿಯಲ್ಲಿ  ಇದ್ದ ಶ್ರೀಮತಿ ಪೂಜಾರವರ ಕುತ್ತಿಗೆಗೆ ಕೈಹಾಕಿ ರೂ. 30000=00 ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಅಲ್ಲಿದ್ದ  ಮೊಬೈಲ್ ಫೋನ್  ಸಮೇತ  ಪರಾರಿಯಾಗಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಮೊ.ಸಂ 49/2019 ಕಲಂ 392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

        ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಡಾ|| ಸುಮನ್ ಡಿ. ಪನ್ನೇಕರ್ ರವರ  ಮಾರ್ಗದರ್ಶನದಲ್ಲಿ  ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ  ಶ್ರೀ. ದಿನೇಶ್ ಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತದ ಸಿಪಿಐ, ಶ್ರೀ ದಿವಾಕರ ಇವರ ನೇತೃತ್ವದಲ್ಲಿ  ತಂಡವನ್ನು ರಚಿಸಿ ಪತ್ತೆ ಕಾರ್ಯಕ್ಕೆ  ನೇಮಿಸಲಾಗಿತ್ತು.   ಸದರಿ ಪತ್ತೆದಳದ ಅಧಿಕಾರಿ ಮತ್ತು ಸಿಬ್ಬಂದಿಯವರು ಘಟನೆ ನಡೆದು 28 ಗಂಟೆಯ ಒಳಗಾಗಿ ಅಪರಿಚಿತ ಆರೋಪಿಗಳ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳಾದ 1) ಕೆ.ಎಂ.ನವಾಜ್ ತಂದೆ ಮೊಹಿದ್ದೀನ್  ಕುಟ್ಟಿ, ಪ್ರಾಯ 28 ವರ್ಷ,  ಮೀನು ಮಾರಾಟ ವಾಸ ಗಾಂಧಿನಗರ, ಸುಳ್ಯ,  ಸ್ವಂತ ಊರು ಅಡಿಮಾಲಿ, ಇಡುಕಿ ಜಿಲ್ಲೆ, ಕೇರಳ ರಾಜ್ಯ  2) ಸಿ.ಇ.ಉಮ್ಮರ್  ತಂದೆ ಅಹಮ್ಮದ್, ಪ್ರಾಯ 30 ವರ್ಷ ಮರಕೆಲಸ ವಾಸ ಜಟ್ಟಿಪಳ್ಳ, ಸುಳ್ಯ ಸ್ವಂತ ಊರು ಕಾಂಞಗಾಡ್, ಕಾಸರಗೋಡು ಜಿಲ್ಲೆ ರವರನ್ನು ದಿನಾಂಕ 25-11-2019 ರಂದು ರಾತ್ರಿ 7-00 ಗಂಟೆಗೆ ಸುಳ್ಯ ಬಸ್ಸು ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದು ಆರೋಪಿಗಳು ಸುಲಿಗೆ ಮಾಡಿದ ಮಾಂಗಲ್ಯಸರ, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಇನ್ಟಾಕರ್ ಸ್ಕೂಟಿಯನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಘಟನೆ ನಡೆದು 28 ಗಂಟೆ ಒಳಗಾಗಿ ಅಪರಿಚಿತ ಆರೋಪಿಗಳನ್ನು ಮಾಲು ಸಮೇತ ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರವರು  ಶ್ಲಾಘಿಸಿ ಬಹುಮಾನವನ್ನು ಘೋಷಿಸಿರುತ್ತಾರೆ. ಪತ್ತೆ ಕಾರ್ಯದಲ್ಲಿ ಶ್ರೀ ಸಿ.ಎನ್.ದಿವಾಕರ್ ಸಿಪಿಐ, ಶ್ರೀ ಹೆಚ್.ಕೆ ಮಹದೇವ ಪಿಎಸ್ಐ ಭಾಗಮಂಡಲ ಪೊಲೀಸ್ ಠಾಣೆ, ಸಿಬ್ಬಂದಿಯವರಾದ ಉತ್ತಯ್ಯ ಎಎಸ್ಐ, ಮುಖ್ಯಪೇದೆ  ಇಬ್ರಾಹಿಂ, ಕಾಳಿಯಪ್ಪ, ಪ್ರೇಂಕುಮಾರ್, ಹರೀಶ್ , ಶಿವರಾಂ,  ನಾಗೇಶ್, ಪುನಿತ್,  ನಂಜುಂಡ, ಪರಮೇಶ್, ಚಾಲಕರಾದ ನಾಗರಾಜು, ಮತ್ತು ಅಯ್ಯಪ್ಪ ಇವರು  ಭಾಗಿಯಾಗಿರುತ್ತಾರೆ.

ಬೈಕ್ ಕಳವು

          ದಿನಾಂಕ: 20-11-2019 ರಂದು ವಿರಾಜಪೇಟೆ ತಾಲ್ಳೂಕು ಅರವತ್ತೊಕ್ಲು ಗ್ರಾಮದ ನಿವಾಸಿ ಜಯರಾಂ ಎಂಬುವವರು ಅವರ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಸಂಬಂಧಿಕರಾದ ಬೋಸ್ ಎಂಬುವವರ ಕೆಎ-03-ಇ-6825 ರ ಬೈಕನ್ನು ಅವರ ಲೈನ್ ಮನೆಯಲ್ಲಿ ವಾಸವಿದ್ದ ರವಿ ಎಂಬುವವರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 26-11-2019 ರಂದು ಜಯರಾಂರವರು ನೀಡಿದ ಪುಕಾರಿನ ಮೇರೆ ಗೊಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ಧಾರೆ.

ಖಾವಿದಾರಿಗಳಿಂದ ವ್ಯಕ್ತಿಯೊಬ್ಬರಿಗೆ ಮೋಸ

          ದಿನಾಂಕ: 24-11-2019 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಪಟ್ಟಣದ ಸೋಮೆಶ್ವರ ಬಡಾವಣೆ ನಿವಾಸಿ ನಾಗೇಗೌಡ ಎಂಬುವವರು ಅವರ ಜನಶ್ರೀ ಫೈನಾನ್ಸ್ ನಲ್ಲಿ ರುವಾಗ ಅಲ್ಲಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಖಾವಿಧಾರಿಗಳಾಗಿ ಸಾಧುಗಳ ವೇಷದಲ್ಲಿ ಬಂದು ರುದ್ರಾಕ್ಷಿ ಮತ್ತು ಕೇಸರಿ ಬಣ್ಣದ ಪುಡಿಯನ್ನು ನೀಡಿದಾಗ ನಾಗೇಗೌಡ ರವರಿಗೆ ಮಂಕು ಕವಿದಂತಾದಾಗ ಸಾಧು ವೇಷದಾರಿಗಳು ರೂ.3000 ನಗದು ಹಾಗೂ ಮೊಬೈಲನ್ನು ಪಡೆದುಕೊಂಡು ಹೋಗಿ ಮೋಸ ಮಾಡಿದ್ದು ಈ ಬಗ್ಗೆ ನಾಗೇಗೌಡ ರವರು ನೀಡಿದ ಪುಕಾರಿಗೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದೇಶಿ ಪ್ರಜೆ ಅಸ್ವಾಭಾವಿಕ ಸಾವು

          ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಪಟ್ಟಣದ ಸೋಮೇಶ್ವರ ಬಡಾವಣೆ ನಿವಾಸಿ ಬಸವರಾಜು ಎಂಬುವವರ ಮನೆಯಲ್ಲಿ ಸ್ಪೇನ್ ದೇಶದ ಪ್ರಜೆ ಕಾರ್ಲೋಸ್ ಸೆಪೆಡಾ ಎಂಬುವವರು ಕಳೆದ  ಒಂದು ವರ್ಷ ನಾಲ್ಕು ತಿಂಗಳಿಂದ ಬಾಡಿಗೆಗೆ ವಾಸವಿದ್ದರು. ಇವರು ಅತಿಯಾಗಿ ಮದ್ಯ ಸೇವನೆ ಮಾಡುತ್ತಿದ್ದರು. ಕಳೆದ ಮೂರು-ನಾಲ್ಕು ದಿನಗಳಿಂದ ಮನೆಯಿಂದ ಹೊರೆಗೆ ಬಾರದೇ ಇದ್ದುದನ್ನು ಗಮನಿಸಿ ದಿನಾಂಕ: 26-11-2019 ರಂದು ಬಾಗಿಲು ತೆರೆದು ನೋಡಿದಾಗ ಕಾರ್ಲೋಸ್ ರವರು ಮೃತಪಟ್ಟಿರುವುದು ಕಂಡು ಬಂದಿದ್ದು ಈ ಬಗ್ಗೆ ಬಸವರಾಜು ರವರು ನೀಡಿದ ದೂರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.