Crime News

ಹಲ್ಲೆ ಪ್ರಕರಣ

ದಿನಾಂಕ 28/11/2019ರಂದು ಕೊಡ್ಲಿಪೇಟೆ ಬಳೀಯ ಕೆರಗನಹಳ್ಳಿ ನಿವಾಸಿ ಕೆ.ಕೆ.ಶಶಿಕುಮಾರ್ ಎಂಬವರು ಅವರ ತಾಯಿ ಪಾರ್ವತಿಯವರ ಮನೆಯಲ್ಲಿರುವಾಗ ಹೊರಗಡೆ ಮಹೇಂದ್ರ, ಕಾಂತರಾಜು ಮತ್ತು ಕುಮಾರ ಎಂಬವರು ಗಲಾಟೆ ಮಾಡುತ್ತಿದ್ದುದನ್ನು ಕೇಳಿದ ಕಾರಣಕ್ಕೆ ಅವರುಗಳು ಶಶಿಕುಮಾರ್‌ರವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ನಾಪೋಕ್ಲು ಬಳೀಯ ಕುಂಜಿಲ ನಿವಾಸಿ ಎಂ.ಎಂ.ಹಫೀಲ್ ಎಂಬವರು ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರ ಲಾರಿಯನ್ನು ಚಾಲಿಸಲು ಕುಂಜಿಲ ನಿವಾಸಿ ಎಂ.ಎಂ. ಹಾಸಿಂ ಎಂಬವರನ್ನು ತಿಂಗಳಿಗೆ 15,000/- ರೂ ಸಂಬಳಕ್ಕೆ ನೇಮಿಸಿಕೊಂಡಿದ್ದು ಒಂದು ತಿಂಗಳ ನಂತರ ಹಫೀಲ್‌ರವರು ಆರೋಗ್ಯವಂತರಾದ ಬಳಿಕ ಲಾರಿಯನ್ನು ಮರಳಿ ಕೇಳಿದಾಗ ಹಾಸಿಂರವರು ಲಾರಿಯನ್ನು ಮರಳಿಸದೆ ಹಫೀಲ್‌ರವರಿಗೆ ಬೆದರಿಕೆ ಹಾಕಿದ್ದು ಮಡಿಕೇರಿ ಆರ್‌ಟಿಓ ಕಚೇರಿಯಲ್ಲಿ ಹಫೀಲ್‌ರವರ ಸಹಿಯನ್ನು ನಕಲಿ ಮಾಡಿ ಲಾರಿಯನ್ನು ಹಾಸಿಂರವರ ಹೆಸರಿಗೆ ವರ್ಗಾಯಿಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಫೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.