Crime News

ಹಲ್ಲೆ ಪ್ರಕರಣ

          ದಿನಾಂಕ: 30-11-2019 ರಂದು ಸೋಮವಾರಪೇಟೆ ತಾಲ್ಲೂಕು 7ನೇ ಹೊಸಕೋಟೆ ತೊಂಡೂರು ಗ್ರಾಮದ ನಿವಾಸಿ ಶ್ರೀಮತಿ ಮೋಹಿನಿ ಎಂಬುವವರ ಮನೆಯ ಹೊರಗೆ ಲೋಹಿತ್ ಎಂಬುವವರು ಗಲಾಟೆ ಮಾಡುತ್ತಿದ್ದ ವಿಚಾರವನ್ನು ಕೇಳಲು ಹೋದಾಗ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ಮೋಹಿನಿ ರವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 01-12-2019 ರಂದು ಬೆಂಗಳೂರು ಒಬೆರಾಯ್ ಹೊಟೇಲ್ ನಲ್ಲಿ ಹೊಟೇಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿ ಸಂಚಾನ್ ಸಿಂಗ್ ಮತ್ತು ತನ ಸ್ನೇಹಿತರು ಕೆಎ-51-ಎಬಿ-7036 ರ ಕಾರಿನಲ್ಲಿ  ಮಡಿಕೇರಿಗೆ ಪ್ರವಾಸಕ್ಕೆ ಬರುತ್ತಿರುವಾಗ ಕಾರಿನ ಚಾಲಕ ಪಾರ್ಥ್ ಶರ್ಮ ಎಂಬುವವರು ಸುಂಟಿಕೊಪ್ಪ ಬಳಿ ಶಾಂತಿಗಿರಿ ಎಸ್ಟೇಟ್ ಬಳಿ ಹೆದ್ದಾರಿ ರಸ್ತೆಯಲ್ಲಿ ಅತವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡಿದ್ದು ಈ ಬಗ್ಗೆ ಸಂಚಾನ್ ಸಿಂಗ್ ರವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆಗೆ ಪ್ರಚೋದನೆ, ವ್ಯಕ್ತಿ ಸಾವು

          ದಿನಾಂಕ: 30-09-2019 ರಂದು ಕಿರಿಕೊಡ್ಲಿ ಗ್ರಾಮದ ನಿವಾಸಿ ರೂಪೇಶ್ ಎಂಬುವವರಿಗೆ ಆಸ್ತಿ ವಿಚಾರದಲ್ಲಿ ಆತನ ತಂದೆ, ತಾಯಿ, ತಂಗಿ ಹಾಗೂ ಬಾವರವರು ಮಾನಸಿಕ ಕಿರುಕುಳ ನೀಡಿದ್ದರಿಂದ ಮನನೊಂದು ವಿಷ ಸೇವೆನೆ ಮಾಡಿದ್ದವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಾರಿಯಾಗದೇ ರೂಪೇಶ್ ಮೃತಪಟ್ಟಿದ್ದು  ಬಗ್ಗೆ ಮೃತನ ಪತ್ನಿ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ: 01-12-2019 ರಂದು ಸೋಮವಾರಪೇಟೆ ತಾಲ್ಲೂಕು ಕಾನ್ ಬೈಲ್ ಗ್ರಾಮದ ಸತೀಶ್ ಕುಮಾರ್ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಹೊನ್ನಪ್ಪ ಎಂಬುವವರು ಕ್ಷುಲ್ಲಕ ಕಾರಣಕ್ಕೆ ತಲೆಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಸತೀಶ್ ಕುಮಾರ್ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ ಪ್ರಕರಣ

          ದಿನಾಂಕ: 01-12-2019 ರಂದು ವಿರಾಜಪೇಟೆ ಠಾಣಾ ಪಿ.ಎಸ್.ಐ ವೀಣಾ ನಾಯಕ್ ರವರಿ ಗೆ ಬಂದ ಖಚಿತ ವರ್ತಮಾನದ ಮೇರೆ ಕಡಂಗ ಗ್ರಾಮದ ಬಳಿ ಸಿಬ್ಬಂದಿಯವರೊಂದಿಗೆ ತೆರಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಕೆಎಲ್-35-8275 ರ ಪಿಕ್ ಅಪ್ ಜೀಪು ಮತ್ತು ಮರಳನ್ನು ವಶಕ್ಕೆ ಪಡೆದು  ಪಿಕ್ ಅಪ್ ಮಾಲೀಕ, ಚಾಲಕ ಮತ್ತು ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.