Crime News

ಸಾಧು ವೇಷಧಾರಿ ವಂಚಕರ ಬಂಧನ

ದಿನಾಂಕ: 26-11-2019 ರಂದು ಕುಶಾಲನಗರದ ಶ್ರೀ ನಾಗೇಗೌಡ ರವರ ಫೈನಾನ್ಸ್ಗೆ ಬಂದ
ನಾಲ್ಕು ಸಾದು ವೇಷದಾರಿಗಳು, ನಾಗೇಗೌಡರವರಿಗೆ ಮಂಕು ಕವಿದಂತೆ ಮಾಡಿ ಅವರಿಂದ ನಗದು ಹಣ
ಹಾಗೂ ಮೊಬೈಲನ್ನು ಲಪಟಾಯಿಸಿದ ತಂಡವನ್ನು ದಸ್ತಗಿರಿ ಮಾಡುವಲ್ಲಿ ಕುಶಾಲನಗರ ಪೊಲೀಸರು
ಯಶಸ್ವಿಯಾಗಿದ್ದಾರೆ.
ದಿನಾಂಕ: 26-11-2019 ರಂದು ಶ್ರೀ. ನಾಗೇಗೌಡ ರವರು ನೀಡಿದ ದೂರಿನ ಅನ್ವಯ
ಕುಶಾಲನಗರ ಟೌನ್ ಪೊಲೀಸ್ ಠಾಣಾ ಮೊ.ಸಂ. 96/2019 ಕಲಂ. 420 ರೆ/ವಿ 34 ಐಪಿಸಿ ರೀತ್ಯ
ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡುವ ಹಾಗೂ ಮುಂದೆ ಆಗುವ ಅಪರಾಧಗಳನ್ನು
ತಡೆಗಟ್ಟುವ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಹಾಗೂ ಸೋಮವಾರಪೇಟೆ
ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ತಂಡಗಳನ್ನು ರಚಿಸಲಾಗಿತ್ತು.
ಪಿಎಸ್ಐ ಕುಶಾಲನಗರ ಟೌನ್ ರವರ ನೇತೃತ್ವದ ತಂಡ ದಿನಾಂಕ: 02-12-2019 ರಂದು
ಬೆಳಗ್ಗೆ 4.30 ಗಂಟೆಗೆ ಕೊಪ್ಪ ಗೇಟ್ ಬಳಿ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಕುಶಾಲನಗರದಿಂದ
ಮೈಸೂರು ಕಡೆಗೆ ಹೋಗುತ್ತಿದ್ದ ಮೆರೂನ್ ಬಣ್ಣದ KWID RENAULT ಕಾರು ಸಂಖ್ಯೆ: RJ-38 CB-
2346 ರನ್ನು ಪರಿಶೀಲಿಸಲಾಗಿ ಸದರಿ ವಾಹನದಲ್ಲಿ ನಾಲ್ಕು ಜನ ಸಾದು ವೇಷದಾರಿಗಳಿದ್ದು, ಅವರುಗಳನ್ನು
ವಿಚಾರಿಸಲಾಗಿ ಸರಿಯಾದ ಉತ್ತರವನ್ನು ನೀಡದ ಕಾರಣ ಅವರನ್ನು ಠಾಣೆಗೆ ಕರೆತಂದು ತೀವ್ರ
ವಿಚಾರಣೆಗೊಳಪಡಿಸಲಾಗಿ ಅವರು ಕುಶಾಲನಗರದ ಪೈನಾನ್ಸ್ನಲ್ಲಿ ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದು,
ನಾಗೇಗೌಡ ರವರು ಸಹ ಆರೋಪಿಗಳನ್ನು ಗುತರ್ಿಸಿರುತ್ತಾರೆ. ನಾಲ್ಕು ಜನ ಆರೋಪಿಗಳನ್ನು ದಸ್ತಗಿರಿ
ಮಾಡಲಾಗಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ದಸ್ತಗಿರಿ ಮಾಡಲಾದ ಆರೋಪಿ ವಿವರ :

 1. ನಾಗನಾಥ ತಂದೆ ಕಾಲೂನಾಥ್, 40 ವರ್ಷ, ಸರಗುಂದ ಗ್ರಾಮ, ಇಂದಿರಾ ಕಾಲೋನಿ, ಪಂಡವಾಳ್
  ತಾಲ್ಲೂಕು, ಶೆರೋಯಿ ಜಿಲ್ಲೆ, ರಾಜಸ್ಥಾನ ರಾಜ್ಯ.
 2. ಜಜೂರ್ ನಾಥ್ ತಂದೆ ಶೆರ್ನಾಥ್, 25 ವರ್ಷ, ನಾಥ್ನಗರ, ಪಂಡವಾಳ್ ತಾಲ್ಲೂಕು, ಶೆರೋಯಿ
  ಜಿಲ್ಲೆ, ರಾಜಸ್ಥಾನ ರಾಜ್ಯ.
 3. ಸುರಂನಾಥ್ ತಂದೆ ವಿತ್ರಮ್ನಾಥ್, 45 ವರ್ಷ, ಪಂತ್ಬಾರಿ ಗ್ರಾಮ, ಪಂಡವಾಳ್ ತಾಲ್ಲೂಕು,
  ಶೆರೋಯಿ ಜಿಲ್ಲೆ, ರಾಜಸ್ಥಾನ ರಾಜ್ಯ.
 4. ಉಮೇದ್ನಾಥ್ ತಂದೆ ಸುರ್ನಾಥ್, 21 ವರ್ಷ, , ಪಂತ್ಬಾರಿ ಗ್ರಾಮ, ಪಂಡವಾಳ್ ತಾಲ್ಲೂಕು,
  ಶೆರೋಯಿ ಜಿಲ್ಲೆ, ರಾಜಸ್ಥಾನ ರಾಜ್ಯ.
  ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತುಗಳ ವಿವರ :
  1) ಹಿತ್ತಾಳೆ ಹಿಡಿ ಇರುವ ಲಕ್ಷ್ಮಿ ವಿಗ್ರಹ ಇರುವ 21 ಇಂಚು ಉದ್ದದ ಕಬ್ಬಿಣದ ಪಟ್ಟಿ .
  2) 2625 ರೂ ನಗದು ಹಣ.
  3) ಒಂದು ಪೇಪರ್ ನಲ್ಲಿ ಸುತ್ತಿದ್ದ ರುದ್ರಾಕ್ಷಿ ಮತ್ತು ಕೇಸರಿ ಬಣ್ಣದ ಕುಂಕುಮ ಪುಡಿ.
  4) ಒಂದು ಸ್ಟೀಲ್ ಟಿಫನ್ ಬಾಕ್ಸ್ ನಲ್ಲಿದ್ದ ನೀರಿನಲ್ಲಿ ಕಲಸಿದ ವಿಭೂತಿ.
  5) ಕೇಸರಿ ಬಣ್ಣದ ಕುಂಕುಮ ಇದ್ದ ಒಂದು ಪ್ಲಾಸ್ಟಿಕ್ ಕವರ್.
  6) ಒಂದು ಸ್ಟೀಲ್ ಬಾಕ್ಸ್ ನಲ್ಲಿ ಕೇಸರಿ ಬೂದು ಬಣ್ಣದ ಚಿಕ್ಕ ಉಂಡೆಗಳು.
  7) ಎರಡು ಚಿಕ್ಕ ತೈಲ ಡಬ್ಬಿಗಳು.
  8) KWID RENAULT ಕಾರು ಸಂಖ್ಯೆ:RJ-38 CB-2346
  ಸದರಿ ಪ್ರಕರಣವನ್ನು ಡಾ. ಸುಮನ್ ಡಿ. ಪೆನ್ನೇಕರ್ ಐಪಿಎಸ್, ಪೊಲೀಸ್ ಅಧೀಕ್ಷಕರು
  ಕೊಡಗು ಜಿಲ್ಲೆ ಹಾಗೂ ಶ್ರೀ. ಮುರಳೀಧರ್.ಪಿ.ಕೆ ಪೊಲೀಸ್ ಉಪಾಧೀಕ್ಷಕರು, ಸೋಮವಾರಪೇಟೆ ಉಪ- ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ. ಕುಮಾರ್ ಆರಾಧ್ಯ, ಸಿಪಿಐ ಕುಶಾಲನಗರ ವೃತ್ತ ರವರ
  ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಪಿಎಸ್ಐ ಶ್ರೀ. ಹೆಚ್.ವೈ ವೆಂಕಟರಮಣ ಹಾಗೂ ಸಿಬ್ಬಂದಿವರಾದ ಶ್ರೀ. ಗೋಪಾಲ.ಎಂ.ಎ, ಶ್ರೀ. ಟಿ.ಎಸ್. ಸಜಿ, ಶ್ರೀ. ಸುರೇಶ್, ಶ್ರೀ. ಸುಧೀಶ್
  ಕುಮಾರ್.ಕೆ.ಎಸ್ ರವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.
  ಪ್ರತಿ ವರ್ಷ ಡಿಸೆಂಬರ್ ತಿಂಗಳನ್ನು ಅಪರಾಧ ತಡೆ ಮಾಸ ಎಂದು ಆಚರಿಸುತ್ತಿದ್ದು, ಸಾರ್ವಜನಿಕರು
  ಯಾವುದೇ ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೆ ಅಂತಹ ವ್ಯಕ್ತಿಗಳ ಬಗ್ಗೆ ಹತ್ತಿರದ ಪೊಲೀಸ್
  ಠಾಣೆಗೆ ಮಾಹಿತಿ ನೀಡಿ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಸಾರ್ವಜನಿಕರಲ್ಲಿ ಕೋರಿರುತ್ತಾರೆ

ತೊರೆಗೆ ಬಿದ್ದು ವ್ಯಕ್ತಿ ಸಾವು

ಮಡಿಕೇರಿ ನಗರದ ವಿದ್ಯಾನಗರದ ನಿವಾಸಿ ವಿ.ಅಬ್ದುಲ್ ರಹೀಂ ಎಂಬವರು ದಿನಾಂಕ 21/11/2019ರಿಂದ ಕಾಣೆಯಾಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ದಿನಾಂಕ 02/12/2019ರಂದು ಅಬ್ದುಲ್ ರಹೀಂರವರ ಮೃತದೇಹವು ವಿದ್ಯಾನಗರದ ತೊರೆಯೊಂದರಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಚೇರಂಬಾಣೆ ಬಳಿಯ ಕೊಟ್ಟೂರು ನಿವಾಸಿ ಎ.ಎಸ್.ಪಾರ್ವತಿ ಎಂಬವರಿಗೆ ಮಾರ್ವಿನ್‌ ಫ್ರಾನ್ಸಿಸ್ ಎಂಬಾತನು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದು ನಂತರ ಪಾರ್ವತಿರವರಿಗೆ ಉಡುಗೊರೆಯಾಗಿ ಐಫೋನ್, ಲ್ಯಾಪ್‌ಟಾಪ್, ವ್ಯಾನಿಟಿ ಬ್ಯಾಗ್‌ ಮುಂತಾದ ವಸ್ತುಗಳನ್ನು ಪಾರ್ಸೆಲ್‌ ಮಾಡಿರುವುದಾಗಿ ಹೇಳಿದ್ದು ನಂತರ ದೆಹಲಿಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಎಂಬುದಾಗಿ ಹೇಳಿಕೊಂಡು ಪಾರ್ವತಿರವರಿಗೆ ಕರೆ ಮಾಡಿ ಅವರಿಗೆ ಉಡುಗೊರೆಗಳು ಬಂದಿದ್ದು ಅದನ್ನು ಪಡೆದುಕೊಳ್ಳಲು ಸಾರಿಗೆ ವೆಚ್ಚ, ದಂಡ ವೆಚ್ಚ ಮತ್ತು ಇನ್ನಿತರ ವೆಚ್ಚಗಳಾಗಿ ಸುಮಾರು ರೂ.2,75,000/- ದಷ್ಟು ಹಣವನ್ನು ಹಣವನ್ನು ಮಾರ್ವಿನ್‌ ಫ್ರಾನ್ಸಿಸ್‌ರವರ ಖಾತೆ ಜಮಾ ಮಾಡಿಸಿಕೊಂಡು ಯಾವುದೇ ವಸ್ತುಗಳನ್ನು ನೀಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 01/12/2019ರ ರಾತ್ರಿ ವೇಳೆ ವಿರಾಜಪೇಟೆ ಬಳಿಯ ಬಿಟ್ಟಂಗಾಲದ ಪೆಗ್ಗರೆಕಾಡು ನಿವಾಸಿ ಹೆಚ್‌.ಎಸ್.ಶಂಕರ ಎಂಬವರು ಅವರ ತಮ್ಮ ಶಿವ ಎಂಬವರೊಡನೆ ವಿರಾಜಪೇಟೆನಗರದ ಮಟನ್ ಮಾರ್ಕೆಟ್‌ ಬಳಿ ಪಾನಿಪೂರಿ ಖರೀದಿಸಿ ಬೈಕಿನಲ್ಲಿ ಹೋಗಲನುವಾದಾಗ ಅಲ್ಲೇ ಇದ್ದ ಸುಣ್ಣದ ಬೀದಿಯ ಕಿಶಾನ್, ವಿವೇಕ್‌, ಮನು ಮತ್ತು ಸೂರ್ಯ ಎಂಬವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ, ಕೊಲೆ ಬೆದರಿಕೆ

ದಿನಾಂಕ 20/11/2019ರಂದು ವಿರಾಜಪೇಟೆ ಬಳಿಯ ಬಿಟ್ಟಂಗಾಲ ಗ್ರಾಮದ ಅಂಬಟ್ಟಿ ನಿವಾಸಿ ಯು.ಕೆ.ಗಂಗಾಧರ ಎಂಬವರು ಅವರ ನೆರೆ ಮನೆಯ ಅಪ್ಪಯ್ಯ ಎಂಬವರಿಗೆ ಮನೆಯ ಮಿಲನ ನೀರನ್ನು ಬೇರೆ ಕಡೆಗೆ ಹರಿಸುವಂತೆ ಹೇಳಿದ ಕಾರಣಕ್ಕೆ ಅಪ್ಪಯ್ಯನವರು ಟೈಲ್ಸ್ ಕತ್ತರಿಸುವ ಯಂತ್ರವನ್ನು ಹಿಡಿದುಖೋಡು ಗಂಗಾಧರರವರ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಗಳವಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 01/12/2019ರಂದು ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಜಯಪ್ರಕಾಶ್‌ ಎಂಬವರು ಅವರ ಕಾರಿನಲ್ಲಿ ಪುತ್ತೂರಿನಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಮದೆನಾಡಿನ ಬಳಿ ಕಾರನ್ನು ಚಾಲಿಸುತ್ತಿದ್ದ ಜಯಪ್ರಕಾಶ್‌ರವರ ಅಣ್ಣ ಜಗದೀಶ್‌ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಪಕ್ಕದ ಚರಂಡಿಗೆ ಬಿದ್ದು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ಕಳ್ಳತನ

ಮಡಿಕೇರಿ ಬಳಿಯ ಹೆರವನಾಡು ನಿವಾಸಿ ಕೇಟೋಳಿ ಮೋಹನ್‌ರಾಜ್‌ ಎಂಬವರು ದಿನಾಂಕ 30/11/2019ರಂದು ನಾಪೋಕ್ಲಿನಲ್ಲಿ ಸಂಬಂಧಿಕರ ಮದುವೆಗೆಂದು ಹೋಗಿ ಮರಳಿ ಮನೆಗೆ ಬಂದಿದ್ದು ಮಾರನೇ ದಿನ ಬೆಳಿಗ್ಗೆ ಪುನಃ ಮದುವೆ ಕಾರ್ಯಕ್ರಮಕ್ಕೆ ಹೋಗಲು ಹೊರಡುವ ಸಲುವಾಗಿ ಮನೆಯ ಹಿಂದಿನ ಕೋಣೆಗೆ ಹೋದಾಗ ಯಾರೋ ಕಳ್ಳರು ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಬೀರುವಿನಿಂದ ಸುಮಾರು ರೂ.1,42,000/- ರೂ ಬೆಲೆಯ ಚಿನ್ನಾಭರಣಗಳು ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.