Crime News

ಅಕ್ರಮ ಗಾಂಜಾ ಮಾರಾಟ ಪ್ರಕರಣ

          ದಿನಾಂಕ: 04-12-2019 ರಂದು ವಿರಾಜಪೇಟೆ ನಗರ ಠಾಣೆ ಪಿ.ಎಸ್.ಐ ಮರಿಸ್ವಾಮಿ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ವಿರಾಜಪೇಟೆ ಪಟ್ಟಣದ ಸುಣ್ಣದ ಬೀದಿ ಬಳಿ ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವಿರಾಜಪೇಟೆ ತಾಲ್ಲೂಕು ಗುಂಡಿಗೆರೆ ಬೇಟೋಳಿ ಗ್ರಾಮದ ನಿವಾಸಿ ಕೆ.ಎಂ ಶಫೀಕ್ ಎಂಬುವವರನ್ನು ದಸ್ತಗಿರಿ ಮಾಡಿ ಮಾರಾಟ ಮಾಡಲು ತಂದಿಂದ ಗಾಂಜಾ ಹಾಗೂ ಆಟೋ ರಿಕ್ಷಾ ವಶಕ್ಕೆ ಪಡೆದು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿರುತ್ತಾರೆ.

ಅಸ್ವಾಭಾವಿಕ ಸಾವು

          ದಿನಾಂಕ: 02-12-2019 ರಂದು ವಿರಾಜಪೇಟೆ ತಾಲ್ಲೂಕು ಬಿರುನಾಣಿ ಗ್ರಾಮದ ನಿವಾಸಿ ಪ್ರಭು ಎಂಬುವವರು ವಿಪರೀತ ಮದ್ಯಪಾನ ಮಾಡಿ ಬಿದ್ದು ಗಾಯಗೊಂಡು ಮನೆಯಲ್ಲಿ ಮಲಗಿದ್ದವರು ಅಸ್ವಸ್ಥಗೊಂಡಿದ್ದು ಕೂಡಲೇ ಮುತ್ತಪ್ಪ ಮತ್ತು ಕಾರ್ಯಪ್ಪ ಎಂಬುವವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ವಾಪಸ್ಸು ಮನೆಗೆ ಕರೆತಂದು ಚೋಮ ಎಂಬುವವರು ಅವರ ಆರೈಕೆ ಮಾಡುತ್ತಿರುವಾಗ ದಿನಾಂಕ: 04-12-2019 ರಂದು ಪ್ರಭು ರವರು ಮೃತಪಟ್ಟಿದ್ದು ಈ ಬಗ್ಗೆ ಮುತ್ತಪ್ಪ ಎಂಬುವವರು ನೀಡಿದ ದೂರಿನ ಮೇರೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

          ದಿನಾಂಕ: 04-12-2019 ರಂದು ಬಿಟ್ಟಂಗಾಲ ಗ್ರಾಮದ ಬಲ್ಯಬಾಣೆ ಎಸ್ಟೇಟ್ ನಿವಾಸಿ ಜಯಂತಿ ಎಂಬುವವರು ಅವರ ಪತಿಯ ಅನಾರೋಗ್ಯ ಚಿಕಿತ್ಸೆಗಾಗಿ ಮಡಿಕೇರಿಗೆ ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಗಾಡ್ರೆಜ್ ಬೀರುವನಲ್ಲಿಟ್ಟಿದ್ದ ರೂ. 20,000 ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿದ್ದಾರೆ.