Crime News

ಬಾವನಿಂದ ನಾದಿನಿಯ ಹತ್ಯೆ

          ದಿನಾಂಕಃ 07-12-2019 ರಂದು ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಗ್ರಾಮದ ನಿವಾಸಿ ಜಲಜಾಕ್ಷಿ ಎಂಬುವವರು ಸೋಮವಾರಪೇಟೆ ತಾಲ್ಲೂಕು ರಂಗಸಮುದ್ರ ಗ್ರಾಮದಲ್ಲಿರುವ ತಮ್ಮ ಕಾಫಿ ತೋಟವನ್ನು ನೋಡಿಕೊಂಡು ಹೋಗಲು ಬಂದಿರುವಾಗ ಅವರ ಪತಿಯ ಅಣ್ಣ ಬಿಪಿನ್ ಕುಮಾರ್ ಎಂಬುವವರು ವೈಯಕ್ತಿಕ ಕಾರಣದಿಂದ ಜಲಜಾಕ್ಷಿಯವರೊಂದಿಗೆ ಜಗಳ ಮಾಡಿ ತಲೆಗೆ ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತಿ ರಂಜನ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

          ದಿನಾಂಕ: 07-12-2019 ರಂದು ಸೋಮವಾರಪೇಟೆ ತಾಲ್ಲೂಕು ಚಿಕ್ಕತ್ತೂರು ಗ್ರಾಮದ ನಿವಾಸಿ ಸುನೀಲ್ ಎಂಬುವವರು ಅವರ ತಾಯಿಯವರ ಅನಾರೋಗ್ಯದ ವಿಚಾರದಲ್ಲಿ ಬೇಸರಮಾಡಿಕೊಂಡು ವಿಪರೀತ ಮದ್ಯಪಾನ ಮಾಡುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.