Crime News

ಅಕ್ರಮ ಶ್ರೀಗಂಧ ಸಾಗಾಟ ಪತ್ತೆ

ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ದಿನಾಂಕ 8.12 2019 ರಂದು ಆರೋಪಿಗಳು ಅಕ್ರಮವಾಗಿ ಶ್ರೀಗಂಧ ತುಂಡುಗಳನ್ನು ಆಂಧ್ರಪ್ರದೇಶದ ಕಡೆಗೆ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಅಪರಾಧ ಪತ್ತೆ ದಳದ ತಂಡ ಕುಶಾಲನಗರದ ಆನೆ ಕಾಡು ಬಳಿ ಆರೋಪಿಗಳನ್ನು ಮಾಲು ಸಮೇತ ಹಿಡಿದಿದ್ದು ಆರೋಪಿಗಳು ಕೇರಳ ಕಾಸರಗೋಡು ಮೂಲದವರಾಗಿದ್ದು ಶ್ರೀಗಂಧ ತುಂಡುಗಳನ್ನು ಸ್ವಲ್ಪ ಸ್ವಲ್ಪ ಕಲೆಹಾಕಿ ಆಂಧ್ರಪ್ರದೇಶದ ಶ್ರೀಗಂಧದ ಎಣ್ಣೆ ತೆಗೆಯುವ ಫ್ಯಾಕ್ಟರಿಗೆ ಮಾರಾಟ ಮಾಡುತ್ತಿದ್ದುದನ್ನು ರೂಢಿಗತ ಮಾಡಿಕೊಂಡಿದ್ದಾರೆಂದು, ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ. ಆರೋಪಿಗಳಿಂದ ಒಟ್ಟು 10 ಚೀಲದಲ್ಲಿದ್ದ 175 ಕೆಜಿ ಶ್ರೀಗಂಧ ತುಂಡುಗಳನ್ನು, ಎರಡು ಚಿಕ್ಕ ಡಿಜಿಟಲ್ ಸ್ಕೇಲ್ ಹಾಗೂ ಆಂಧ್ರ ಪ್ರದೇಶ ರಾಜ್ಯದ, ಮಹಿಂದ್ರ ವೆರಿಟೊ ವಾಹನ ಸಂಖ್ಯೆ AP02 AY0181ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾಲಿನ ಒಟ್ಟು ಮೌಲ್ಯ ಸುಮಾರು 9 ಲಕ್ಷ ರೂಗಳು ಎಂದು ಅಂದಾಜಿಸಲಾಗಿದೆ. ವಾಹನ  ಪರಿಶೀಲನೆ ವೇಳೆ ಆರೋಪಿಗಳು ಕಾರಿನ ಹಿಂಬದಿಯ ಸೀಟಿನ ಹಿಂದೆ ಯಾರಿಗೂ ಕಾಣದ ರೀತಿಯಲ್ಲಿ ಶ್ರೀಗಂಧ ತುಂಡುಗಳನ್ನು ಶೇಖರಣೆ ಮಾಡುವ ಒಂದು ಡಬ್ಬವನ್ನು ನಿರ್ಮಿಸಿದ್ದು ಕಂಡು ಬಂದಿರುತ್ತದೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ ಈ ಕೆಳಕಂಡಂತಿರುತ್ತದೆ

1) ಶರೀಫ್ ತಂದೆ ಲೇಟ್ ಮಹಮ್ಮದ್, ಚಂಗಲ ಗ್ರಾಮ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ.

2)  ಮೊಹಮ್ಮದ್ ಅಶ್ರಫ್ ತಂದೆ ಲೇಟ್ ಮಹಮ್ಮದ್ ಚಂಗಲ ಗ್ರಾಮ ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ.

ಈ ಪ್ರಕರಣದ ಕಾರ್ಯಾಚರಣೆಯನ್ನು ಡಾಕ್ಟರ್ ಸುಮನ್ ಡಿಪಿ ಐಪಿಎಸ್ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ರವರ ಹಾಗೂ ಪಿ.ಕೆ. ಮುರಳಿದರ ಪೊಲೀಸ್ ಉಪಾಧ್ಯಕ್ಷರು, ಸೋಮವಾರಪೇಟೆ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಎನ್ ಮಹೇಶ್ ಪೊಲೀಸ್ ನಿರೀಕ್ಷಕರು ಅಪರಾಧ ಪತ್ತೆ ದಳ ಮಡಿಕೇರಿ ರವರ ನೇತೃತ್ವದಲ್ಲಿ ಅಪರಾಧ ಪತ್ತೆದಳದ  ಸಿಬ್ಬಂದಿಗಳಾದ ಹಮೀದ್, ಯೋಗೇಶ್ ಕುಮಾರ್, ವೆಂಕಟೇಶ್, ಅನಿಲ್ ಕುಮಾರ್, ವಸಂತ, ಕುಶಾಲನಗರ ವೃತ್ತದ ಅಪರಾಧ ದಳದ ಸಿಬ್ಬಂದಿ ಗಳಾದ ಜೋಸೆಫ್, ಪ್ರಕಾಶ್, ಸಜಿ, ಸಂದೇಶ್ ರವರು ಭಾಗವಹಿಸಿದ್ದರು. ಇವರ ಕಾರ್ಯ ಪ್ರವೃತ್ತಿಯನ್ನು ಮೆಚ್ಚಿ ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಇವರಿಗೆ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

ಹಲ್ಲೆ ಪ್ರಕರಣ

ದಿನಾಂಕ 07/12/2019ರಂದು ಶನಿವಾರಸಂತೆ ಬಳಿಯ ಮೂದರವಳ್ಳಿ ನಿವಾಸಿ ಪುಷ್ಪ ಎಂಬವರಿಗೆ ಸೇರಿದ ಅವರೆದಾಳು ಗ್ರಾಮದ ಕಾಫಿ ತೋಟದಲ್ಲಿ ಮೂದರವಳ್ಳಿ ನಿವಾಸಿ ಕುಮಾರ್ ಹಾಗೂ ಭಾಗ್ಯ  ಎಂಬವರು ಕಾಫಿ ಕುಯ್ಯುತ್ತಿದ್ದುದನ್ನು ಕೇಳಿದ ಕಾರಣಕ್ಕೆ ಕುಮಾರ್‌ ಮತ್ತು ಪುಷ್ಪರವರು ಸೇರಿಕೊಂಡು ದೊಣ್ಣೆಯಿಂದ   ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ,