Crime News

ಕಾರು ಕಳವು ಪ್ರಕರಣ

          ದಿನಾಂಕಃ 08-12-2019 ರಂದು ಮಡಿಕೇರಿ ನಗರದ ರಿಮ್ಯಾಂಡ್ ಹೋಂ ಬಳಿ ರಸ್ತೆ ಬದಿಯಲ್ಲಿ ಪ್ರಜ್ವಲ್ ಎಂಬುವವರು ನಿಲ್ಲಿಸಿದ್ದ ಕಾರು ಕೆಎ-51-ಎಂಎ- 7055 ರ ಮಾರುತಿ 800  ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪ್ರಜ್ವಲ್ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇವಾಲಯದ ಚಿನ್ನಾಭರಣ ಕಳವು

          ದಿನಾಂಕ: 08-12-2019 ರಂದು ರಾತ್ರಿ ವೇಳೆಯಲ್ಲಿ ಮಡಿಕೇರಿ ನಗರದ ಕರವಲೆ ಬಾಡಗದಲ್ಲಿರುವ ಶ್ರೀ ಭಗವತಿ ದೇವಾಲಯದ ಪ್ರವೇಶ ದ್ವಾರ ಹಾಗೂ ಗರ್ಭಗುಡಿಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ದೇವಾಲಯದಲ್ಲಿದ್ದ 3,31,500 ರೂ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದೇವಾಲಯ ಅಧ್ಯಕ್ಷರಾದ ಕಾರ್ಯಪ್ಪ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 09-12-2019 ರಂದು ವಿರಾಜಪೇಟೆ ತಾಲ್ಲೂಕು ಅರಪಟ್ಟು ಗ್ರಾಮದ ನಿವಾಸಿ ಅಯ್ಯಣ್ಣ ಎಂಬುವವರು ಕಡಂಗ ಗ್ರಾಮದಲ್ಲಿರುವಾಗ  ಎಡಪಾಲ ಪೈಸಾರಿ ನಿವಾಸಿ ಶರೀಫ್ ಎಂಬುವವರನ್ನು  ಈ ಹಿಂದೆ ಪಡೆದುಕೊಂಡಿದ್ದ ಸಾಲದ ಹಣವನ್ನು ಕೇಳಿದಾಗ ಅವಾಚ್ಯಪದಗಳಿಂದ ಬೈದು ಹಲ್ಲೆ ಮಾಡಿದ್ದು ಈ ಬಗ್ಗೆ ಅಯ್ಯಣ್ಣ ರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 09-12-2019 ರಂದು ಸೋಮವಾರಪೇಟೆ ತಾಲ್ಲೂಕು ತಣ್ಣೀರುಹಳ್ಳ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-12-ಬಿ- 4383 ರ ಟಿಪ್ಪರ್ ಲಾರಿಯನ್ನು ಅದರ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಎಂಎ-4925 ರ ಮಾರುತಿ ಓಮ್ನಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಕಂಗೊಂಡು ಕಾರಿನ ಚಾಲಕ ಬಸವರಾಜು ಎಂಬುವವರ ಕೈಗೆ ಗಾಯವಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅರಣ್ಯ ಇಲಾಖೆ ನೌಕರರ ಮೇಲೆ ಹಲ್ಲೆ

          ದಿನಾಂಕ: 09-12-2019 ರಂದು ಸೋಮವಾರಪೇಟೆ ತಾಲ್ಲೂಕು ದುಬಾರೆ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆಯ ತಾತ್ಕಾಲಿಕ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ರವಿ ತಮ್ಮಯ್ಯ ಮತ್ತು ರಮೇಶ ಎಂಬುವವರಿಗೆ ದುಬಾರೆಗೆ ಪ್ರವಾಸಕ್ಕೆ ಬಂದಿದ್ದ ಮಂಗಳೂರಿನ ಧನುಷ್, ರಾಹುಲ್, ಆಶಿಷ್ ಮತ್ತು ಪ್ರಣಾಮ್ ಎಂಬ ಯುವಕರು ನಿಗದಿತ ಸಮಯ ಮುಗಿದ ನಂತರವೂ ಬೋಟಿನಲ್ಲಿ ಸಾಕಾನೆ ಶಿಬಿರಕ್ಕೆ ಕರೆದುಕೊಂಡು ಹೋಗಲು ಜಗಳ ಮಾಡಿ ಹಲ್ಲೆ ನಡೆಸಿ ಗಾಯಗೊಳಿಸಿದ್ದು ಈ ಬಗ್ಗೆ ರವಿ ತಮ್ಮಯ್ಯ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.