Crime News

ಅಕ್ರಮ ಮರಳು ಸಾಗಾಟಕ್ಕೆ ಯತ್ನ

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲುಗುಂದ ಗ್ರಾಮದ ಇಸಾಕ್ ಎಂಬವರ ಕಾಫಿ ತೋಟದ ಪಕ್ಕದಲ್ಲಿ ಹರಿಯುವ ಕಾವೇರಿ ಹೊಳೆಯಿಂದ ಆರೋಪಿಗಳಾದ ರಶೀದ್, ಅಬ್ದುಲ್ಲಾ ಮತ್ತು ಇಸಾಕ್ ಎಂಬವರುಗಳು ಮರಳನ್ನು ಕಳ್ಳತನ ಮಾಡಿ ಸಂಗ್ರಹಿಸಿ ಅಕ್ರಮ ಸಾಗಾಟ ಮಾಡಲು  ಪಿಕ್‍ಅಪ್‍ ವಾಹನದಲ್ಲಿ ತುಂಬಿಸುತ್ತಿದ್ದಾಗ ಸಿದ್ದಾಪುರ ಠಾಣಾಧಿಕಾರಿಯವರಾದ ಹೆಚ್.ಎಸ್. ಬೋಜಪ್ಪ ಹಾಗು ಸಿಬ್ಬಂದಿಗಳು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಅಕ್ರಮ ಮರಳು ಸಂಗ್ರಹ:

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಕೊಂಡಂಗೇರಿ ಗ್ರಾಮದ ಕೊಪ್ಪ ರಸ್ತೆಯಲ್ಲಿರುವ ಕಾವೇರಿ ಹೊಳೆಯ ದಡದಲ್ಲಿ ಆರೋಪಿಗಳಾದ ಕೊಂಡಂಗೇರಿ ಗ್ರಾಮದ ಸಿರಾಜ್,  ಲತೀಫ್ ರವರುಗಳು ಅಕ್ರಮವಾಗಿ ಮರಳನ್ನು ಸಂಗ್ರಹಿಸುತ್ತಿದ್ದನ್ನು ಪತ್ತೆಹಚ್ಚಿದ ಸಿದ್ದಾಪುರ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ಹಾಗು ಸಿಬ್ಬಂದಿಯವರು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಮಹಿಳೆ ಸಾವು ಪ್ರಕರಣದಾಖಲು:

ಪೊನ್ನಂಪೇಟೆ ಠಾಣಾ ಸರಹದ್ದಿನ ಬಿಳೂರು ಗ್ರಾಮದಲ್ಲಿ ವಾಸವಾಗಿರುವ ಪಣಿಎರವರ ಶಶಿ ಎಂಬವರ ತಂಗಿ ಚುಚಿ ಎಂಬವರು ದಿನಾಂಕ 10-12-2019ರ ರಾತ್ರಿ ತಮ್ಮ ಲೈನು ಮನೆಯಲ್ಲಿ ಮದ್ಯಸೇವಿಸಿ ಮಲಗಿದ್ದು ಮಾರನೆ ದಿನ ಬೆಳಗ್ಗೆ ಚುಚಿ ಬಾತ್‍ ರೂಮಿಗೆ ಹೋಗಿ ವಾಂತಿ ಮಾಡುತ್ತಿದ್ದು ಬಾಯಿಯಿಂದ ನೊರೆಬಂದು ಅಸ್ವಸ್ಥಗೊಂಡು ಆಕೆಯನ್ನು ಚಿಕಿತ್ಸೆಗೆ ಗೋಣಿಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಮೃತಪಟ್ಟಿದ್ದು, ಈ ಸಂಬಂಧ ಶಶಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಆಕಸ್ಮಿಕ ಕಟ್ಟಡದಿಂದ ಬಿದ್ದು ವ್ಯಕ್ತಿ ಸಾವು:

ಕಣ್ಣನೂರು ಜಿಲ್ಲೆಯ ಇರಿಟ್ಟಿ ಪರಿಂಗೇರಿ ಗ್ರಾಮದ ನಿವಾಸಿ ಕೆ.ಕೆ. ಭಾಸ್ಕರ ಎಂಬವರ ಅಣ್ಣ ಕೆ.ಕೆ. ಮಣಿ ಎಂಬವರು ತನ್ನ ಸಂಗಡಿಗರೊಂದಿಗೆ ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೇಗೂರು ಗ್ರಾಮದ ನಿವಾಸಿ ಮೊಯ್ದು ಎಂಬವರ ಆರ್‍.ಸಿ.ಸಿ ಮನೆಯನ್ನು ಕಟ್ಟುವ ಕೆಲಸವನ್ನು ಮಾಡುತ್ತಿದ್ದು ದಿನಾಂಕ 2-12-2019 ರಂದು ಕೆ.ಕೆ. ಮಣಿರವರು ಮನೆಯ ಮೇಲ್ಬಾಗದಲ್ಲಿ ಹೆಂಚುಗಳನ್ನು ಹಾಕುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಸದರಿ ಮಣಿ ರವರು ದಿನಾಂಕ 11-12-2019 ರಂದು ಮೃತಪಟ್ಟಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್‍ಗೆ ಕಾರು ಡಿಕ್ಕಿ ಸವಾರ ಸಾವು:

ದಿನಾಂಕ 11-12-2019 ರಂದು ಪೊನ್ನಂಪೇಟೆ ನಗರದ ಕಾಫಿ ಬೋರ್ಡ್ ಜಂಕ್ಷನ್‍ ನಲ್ಲಿ ಕಾಫಿಬೋರ್ಡ್ ನಲ್ಲಿ ಉದ್ಯೋ ಗಿ ಯಾಗಿರುವ ಸಂಜೀವ್ ರವರು ತಮ್ಮ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪದ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿಯಾದ ಪರಿಣಾಮ ಸ್ಕೂಟರ್‍ ಸವಾರ ಸಂಜೀವನವರು ರಸ್ತೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುವಾಗ ಸದರಿಯವರು ಮೃತಪಟ್ಟಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ:

ದಿನಾಂಕ 11.12.2019 ರಂದು  ಸೋಮವಾರಪೇಟೆ ಪೊಲೀಸ್ ಠಾಣಾ  ವ್ಯಾಪ್ತಿಯ  ಯಡವನಾಡು ಗ್ರಾಮದ   ಗಣಪತಿ ಎಂಬವರ ವಾಸದ ಮನೆಯಲ್ಲಿ ಗಣಪತಿ ರವರು ಅಕ್ರಮವಾಗಿ ಮದ್ಯವನ್ನು  ಸಂಗ್ರಹಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ  ದೊರೆತ ಖಚಿತ ಮಾಹಿತಿ  ಮೇರೆಗೆ ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್‍ ರವರು ತಮ್ಮ  ಸಿಬ್ಬಂದಿಯವರೊಂದಿಗೆ ದಾಳಿ  ಮಾಡಿ ಆರೋಪಿಯಿಂದ ರೂ.5800/- ಬೆಲೆಬಾಳುವ ಮದ್ಯವನ್ನು ವಶಕ್ಕೆ ಪಡೆದು  ಅರೋಪಿಯ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಆಕಸ್ಮಿಕ ಬೆಂಕಿ, ಮಹಿಳೆ ಸಾವು:

ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದ ನಿವಾಸಿ ಪಿ. ಪೆರುಮಾಳ‍್ ಎಂಬವರ ಮಗಳು 27-11-2019 ರಂದು ಮನೆಯಲ್ಲಿ ಸ್ನಾನಕ್ಕೆ ನೀರು ಕಾಯಿಸಲು ಸ್ನಾನದ ಮನೆಗೆ ಸೀಮೆಣ್ಣೆಯನ್ನು ಹಾಕಿ ಬೆಂಕಿ ಹಚ್ಚುತ್ತಿದ್ದಾಗ ಆಕಸ್ಮಿಕವಾಗಿ ಅವರು ಧರಿಸಿದ ಬಟ್ಟೆಗೆ ಬೆಂಕಿ ತಗುಲಿ  ಮೈಕೈ ಸುಟ್ಟು ಹೋಗಿದ್ದು, ನಂತರ ಆಕೆಯನ್ನು ಚಿಕಿತ್ಸೆಗೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಸದರಿಯವರು ದಿನಾಂಕ 11-12-2019 ರಂದು ಸಾವನಪ್ಪಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.