Crime News

ಅಪರಿಚಿತ ವ್ಯಕ್ತಿ ಅಸ್ವಾಭಾವಿಕ ಸಾವು

        ದಿನಾಂಕ: 13-12-2019 ರಂದು ವಿರಾಜಪೇಟೆ ಪಟ್ಟಣದ ಬಸ್ ನಿಲ್ಧಾಣದ ಬಳಿ ಪ್ರಯಾಣಿಕರ ತಂಗುದಾಣದಲ್ಲಿ ಅಂದಾಜು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸು ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಪಿದ್ದು ಸ್ಥಳೀಯರಿಗೆ ಈತನ ಪರಿಚಯವಿರುವುದಿಲ್ಲ. ಈ ಬಗ್ಗೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸಿ ತನಿಖೆ ಕೈಗೊಂಡಿದ್ದಾರೆ.

ಅಸ್ವಾಭಾವಿಕ ಸಾವು

        ದಿನಾಂಕ: 13-09-2019 ರಂದು ಸೋಮವಾರಪೇಟೆ ತಾಲ್ಲೂಕು ಮೋರಿಕಲ್ಲು ಗ್ರಾಮದಲ್ಲಿ ಮುಸ್ತಾಕ್ ಎಂಬುವವರು ಅನಾರೋಗ್ಯವಿದ್ದುದರಿಂದ ಮನೆಯಲ್ಲಿ ಮಲಗಿದ್ದವರು ಮೃತಪಟ್ಟಿದ್ದು ಈ ಬಗ್ಗೆ ಮೆಹಬೂಬ್ ಎಂಬುವವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದಾರಿ ತಡೆದು ಹಲ್ಲೆ

        ದಿನಾಂಕ: 13-12-2019 ರಂದು ವಿರಾಜಪೇಟೆ ತಾಲ್ಲೂಕು ಪುಲಿಯೇರಿ ಗ್ರಾಮದಲ್ಲಿರುವ ಶ್ರೀ ರಾಮಕೃಷ್ಣ ಶಾರದಾಶ್ರಮಕ್ಕೆ ಸೇರಿದ ಕಾಫಿ ತೋಟದ ಕೆಲಸ ಮಾಡಿಸಲು ಆಶ್ರಮದ ಸ್ವಾಮಿ ವಿಶ್ವವಿದಾನಂದ ಎಂಬುವವರು ಕಾರಿನಲ್ಲಿ ಚಾಲಕನೊಂದಿಗೆ ತೋಟದ ರಸ್ತೆಯಲ್ಲಿ ಹೋಗುತ್ತಿರುವಾಗ ಪುಲಿಯೇರಿ ಗ್ರಾಮದ ನಿವಾಸಿ ಕುಟ್ಟಪ್ಪ ಎಂಬುವವರು ದಾರಿಯ ವಿಚಾರದ ವೈಷಮ್ಯದಿಂದ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಕಾರಿನಿಂದ ಕೆಳಗೆ ಎಳೆದುಹಾಕಿ ಅವಾಚ್ಯ ಪದಗಳಿಂದ ಬೈದು ಕೈಯಿಂದ ತಳ್ಳಿ ಕೆಳಗೆ ಬೀಳಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಸ್ವಾಮಿ ವಿಶ್ವವಿದಾನಂದ ರವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.