Crime News

ರಸ್ತೆ ಅಪಘಾತ ಪ್ರಕರಣ

        ದಿನಾಂಕ: 14-12-2019 ರಂದು ಮಡಿಕೇರಿ ತಾಲ್ಲೂಕು ಬೆಟ್ಟಗೇರಿ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-19-ಡಿ-8229 ರ ಬಸ್ ಚಾಲಕ ಶ್ರೀನಿವಾಸ ಎಂಬುವವರು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-09-ಎಂಬಿ-0087 ರ ಕಾರಿಗ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವಿನ್ ಲೋಬೋ ಮತ್ತು ಮರಿಯಾ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

        ದಿನಾಂಕ: 14-12-2019 ರಂದು ಮಡಿಕೇರಿ ತಾಲ್ಲೂಕು ಕೋಕೇರಿ ಗ್ರಾಮದ ನಿವಾಸಿಗಳಾದ ಬಿದ್ದಂಡ ಕುಶಾಲಪ್ಪ ಮತ್ತು ರೀನಾ ಹಾಗೂ ಅದೇ ಗ್ರಾಮದ ನಿವಾಸಿಗಳಾದ  ಬಿದ್ದಂಡ ಗಿರೀಶ್, ರಮ್ಯ, ರೋಹಿಣಿ, ನೇತ್ರ, ಶಾಲಿನಿ ಎಂಬುವವರು ವೈಯಕ್ತಿಕ ಕಾರಣದಿಂದ ಪರಸ್ಪರ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿಕೊಂಡು ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

        ದಿನಾಂಕಃ 14-12-2019 ರಂದು ವಿರಾಜಪೇಟೆ ಪಟ್ಟಣದ ಸಿಲ್ ನಗರದ ನಿವಾಸಿ ಶ್ರೀಮತಿ ರುಕ್ಕು ಎಂಬುವವರ ಮನೆಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ ಗಾಡ್ರೆಜ್ ಬೀರುವಿನಲ್ಲಿಟ್ಟಿದ್ದ 12,000 ರೂ ನಗದು ಮತ್ತು 10 ರೂ ಬೆಲೆಬಾಳುವ ಚಿನ್ನದ ಚೈನ್ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್ ಕಳವು

        ದಿನಾಂಕಃ 12-12-2019 ರಂದು ಸೋಮವಾರಪೇಟೆ ತಾಲ್ಲೂಕು ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿ ಎಸ್.ಬಾಬು ಎಂಬುವವರು ಅವರ ಮನೆಯ ಮುಂದೆ ನಿಲ್ಲಿಸಿದ್ದ  ಕೆಎ-12-ಆರ್-7530 ರ ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಬಾಬು ರವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್ ಕಳವು

        ದಿನಾಂಕ: 14-12-2019 ರಂದು ಪಿರಿಯಾಪಟ್ಟಣ ತಾಲ್ಲೂಕು ಬೈಲಕುಪ್ಪೆ ನಿವಾಸಿ ಸದ್ದಾಂ ಎಂಬುವವರು ಕೆಲಸದ ನಿಮಿತ್ತ ಸೋಮವಾರಪೇಟೆ ತಾಲ್ಲೂಕು ಕೂಡಿಗೆ ಗ್ರಾಮಕ್ಕೆ ಬಂದು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಕೆಎ-45-ಡಬ್ಲ್ಯೂ-7655 ರ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.