Crime News

ಕಳವು ಪ್ರಕರಣ

        ದಿನಾಂಕಃ 13-12-2019, 14-12-2019 ಮತ್ತು 15-12-2019 ರಂದು ವಿರಾಜಪೇಟೆ ತಾಲ್ಲೂಕು ನಿಟ್ಟೂರು ಗ್ರಾಮದ ನಿವಾಸಿ  ಮಲ್ಲೇಂಗಡ ದೇವಯ್ಯ ಎಂಬುವವರ ತೋಟಕ್ಕೆ ಅದೇ ಗ್ರಾಮದ ನಿವಾಸಿಗಳಾದ ಮಲ್ಲೇಂಗಡ ವಿನೀಶ್ ಮತ್ತು ಪೊನ್ನಪ್ಪ ಎಂಬುವವರು ಅಕ್ರಮ ಪ್ರವೇಶ ಮಾಡಿ ತೋಟದಲ್ಲಿದ್ದ ಅಡಿಕೆ ಮರಗಳಿಂದ ಸುಮಾರು 2,80,000 ರೂ ಮೌಲ್ಯದ ಹಸಿ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದೇವಯ್ಯರವರ ತಾಯಿ ಹಾಗೂ ತೋಟದ  ರೈಟರ್ ಕೇಳಲು ಹೋದಾಗ ಅವಾಚ್ಯ ಪದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ದೇವಯ್ಯ ರವರು ನೀಡಿದ ಪುಕಾರಿನ ಮೇರ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕ ಸಾವು

 ದಿನಾಂಕಃ 12-12-2019 ರಂದು ಮಡಿಕೇರಿ ತಾಲ್ಲೂಕು ಯು.ಚೆಂಬು ಗ್ರಾಮದಲ್ಲಿ ಸೆಸ್ಕಾಂ ಇಲಾಖೆ ನೌಕರ ಯೋಗೇಶ ಎಂಬುವವರು ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ಥಿ ಸರಿಪಡಿಸುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಗೊಂಡು ಮೃತಪಟ್ಟಿದ್ದು ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆದ.

ಹಲ್ಲೆ ಪ್ರಕರಣ

        ದಿನಾಂಕಃ 15-12-2019 ರಂದು ಮಡಿಕೇರಿ ತಾಲ್ಲೂಕು ಮೂರ್ನಾಡು ಗ್ರಾಮದ ನಿವಾಸಿ  ಮಶೂಕ್ ಎಂಬುವವರು ದೇವಣಗೇರಿ ಗ್ರಾಮದ ಅಸ್ಗರ್ ಎಂಬುವವರಿಗೆ ಫುಟ್ಬಾಲ್ ಆಟವಾಡುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ಅಸ್ಗರ್ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸ್ಕೂಟರ್ ಗೆ ಬಸ್ ಡಿಕ್ಕಿ, ಬಾಲಕ ಧಾರುಣ ಸಾವು

        ಕೆ.ಎಸ್.ಆರ್. ಟಿ.ಸಿ ಬಸ್  ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟು ಬಾಲಕನ ತಂದೆ ತಾಯಿ ಗಾಯಗೊಂಡಿರುವ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.

ದಿನಾಂಕ: 16-12-2019 ರಂದು ಕುಶಾಲನಗರ ಪಟ್ಟಣದ ಬೈಚನಹಳ್ಳಿ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-42-ಎಫ್-1822 ರ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಲಕ್ಷ್ಮಣ ಮೇಠಿ ಎಂಬುವವರು ವಾಹನವೊಂದನ್ನು ಹಿಂದಿಕ್ಕಿ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಗೊಂಡಿಬಸವನಹಳ್ಳಿ ಗ್ರಾಮದ ನಿವಾಸಿಗಳಾದ ಪರಮೇಶ್ ಹಾಗೂ ಗೀತಾ ದಂಪತಿ ಸ್ಕೂಟರ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಅವರ ಮಗ ಕೆಳಗೆ ಬಿದ್ದಾಗ ಬಸ್ ಚಕ್ರ ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಯೋಗೇಶ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

        ದಿನಾಂಕ: 16-12-2019 ರಂದು ಸೋಮವಾರಪೇಟೆ ತಾಲ್ಲೂಕು ಕಡಂದಾಳು ಗ್ರಾಮದ ನಿವಾಸಿ ಮೇದಪ್ಪ ಎಂಬುವವರ ಮನೆಯ ಬಳಿಗೆ ಅದೇ ಗ್ರಾಮದ ನಿವಾಸಿಗಳಾದ  ಕುಶಾಲಪ್ಪ, ಕಿರಣ್ ಮತ್ತು ಶಿವಣ್ಣ ಎಂಬುವವರು ಹಳೆ ವೈಚಮ್ಯದಿಂದ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿದ್ದು ತಡೆಯಲು ಬಂದ ತಾಯಿ ಚಿಮ್ಮಿ ಹಾಗೂ ಅನಿಲ್ ಎಂಬುವವರಿಗೂ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಮೇದಪ್ಪ ರವರು ನೀಡಿದ ಪುಕಾರಿನ ಮೇರ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

        ದಿನಾಂಕ: 16-12-2019 ರಂದು ಸೊಮವಾರಪೇಟೆ ತಾಲ್ಲೂಕು ಹಾನಗಲ್ಲು ಗ್ರಾಮದ ನಿವಾಸಿ ಪ್ರಮೋದ್ ಎಂಬುವವರಿಗೆ ಅವರ ಪಕ್ಕದ ಮನೆಯ ವಾಸಿ ಸಂಪತ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಮನೆಗೆ ಬಂದು ಕತ್ತಿಯಿಂದ ತಲೆಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಪ್ರಮೊದ್ ರವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

        ದಿನಾಂಕ: 16-12-2019 ರಂದು ಕುಶಾಲನಗರ ಪಟ್ಟಣದ ನೆಹರು ಬಡಾವಣೆ ನಿವಾಸಿ ಅನಘ ಎಂಬುವವರು ಪಟ್ಟಣದ ಪ್ರವೀಣ್ ವೈನ್ಸ್ ನಿಂದ ಬರುತ್ತಿರುವಾಗ ನೆಹರು ಬಡಾವಣೆ ನಿವಾಸಿ ಜಗ್ಗ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಮಾರಣಾಂತಿಕ ಹಲ್ಲೆಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಅನಘ ರವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆ ಕೊಲೆ ಪ್ರಕರಣ

        ದಿನಾಂಕ: 16-12-2019 ರಂದು ಮಡಿಕೇರಿ ತಾಲ್ಲೂಕು ಜೋಡುಪಾಲ ಗ್ರಾಮದ ನಿವಾಸಿ ಕೆ.ಕೆ ಆನಂದ ಎಂಬುವವರು ಜೋಡುಪಾಲ ಗ್ರಾಮದ ಅಬ್ಬಿಕೊಲ್ಲಿ ಗ್ರಾಮದ ಹೊನ್ನಮ್ಮ ಎಂಬುವವರು ಮನೆಗೆ ಬಂದು ಮಾತನಾಡಿಕೊಂಡಿರುವಾಗ ಮನೆಯ ಪಕ್ಕದ ಹಳೆ ದಾರಿಯ ಬಗ್ಗೆ ಜಗಳ ಮಾಡಿ ಕತ್ತಿಯಿಂದ ಹೊನ್ನಮ್ಮರವರ ಕುತ್ತಿಗೆಗೆ ಕಡಿದು ಕೊಲೆ ಮಾಡಿದ್ದು ಈ ಬಗ್ಗೆ ಮೃತರ ಮಗಳು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಗನಿಂದ ತಂದೆಯ ಹತ್ಯೆ

        ದಿನಾಂಕ: 16-12-2019 ರಂದು ವಿರಾಜಪೇಟೆ ತಾಲ್ಲೂಕು ಬಿ,ಶೆಟ್ಟಿಗೇರಿ ಗ್ರಾಮದ ಕಾಡೇಮಾಡ ಸುಕುಮಾರ್ ಎಂಬುವವರು ತೋಟದಲ್ಲಿ ಪಶ್ಚಿಮ ಬಂಗಾಳ ಮೂಲದ ಸುಮ್ರಾ ಓರಾಮ್ ಮತ್ತು ಆತನ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲಿ ವಾಸವಿದ್ದು ಸುಮ್ರಾ ಓರಾಮ್ ಮದ್ಯಪಾನ ಮಾಡಿಕೊಂಡು ಬಂದು ಆತನ ಪತ್ನಿಗೆ ಹೊಡೆಯುತ್ತಿದ್ದುದರಿಂದ ತನ ಮಗ ಕುಪಿತಗೊಂಡು ದೊಣ್ಣೆಯಿಂದ ಸುಮ್ರಾ ಓರಾಮ್ ನ ತಲೆಗೆ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವ ವಾಗಿ ಮೃತಪಟ್ಟಿದ್ದು ಈ ಬಗ್ಗೆ ಸುಕುಮಾರ್ ರವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.