Crime News

ಹಲ್ಲೆ ಪ್ರಕರಣ

ದಿನಾಂಕ 17/12/2019ರ ಸಂಜೆ ವೇಳೆ ಸಂಪಾಜೆ ಬಳಿಯ ಕುದ್ರೆಪಾಯ ನಿವಾಸಿ ಡಿ.ಟಿ.ಮಾಧವ ಎಂಬವರು ಅವರ ತೋಟದಲ್ಲಿನ ತೆಂಗಿನ ಮರಗಳನ್ನು ನೋಡಲೆಂದು ಹೋಗಿದ್ದಾಗೆ ಅಲ್ಲಿಗೆ ಅವರ ನೆರೆಯ ನಿವಾಸಿ ಡಿ.ಜಿ.ಬೋಜಪ್ಪ ಮತ್ತು ಅವರ ತಂದೆ ಗಣಪತಿರವರು ಬಂದು ರಸ್ತೆಯ ವಿಚಾರದ ವೈಮನಸ್ಸಿನಿಂದ ಜಗಳವಾಡಿ ಬೋಜಪ್ಪರವರ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 18/12/2019ರಂದು ಪೊನ್ನಂಪೇಟೆಯ ಗಣಪತಿ ನಗರದ ನಿವಾಸಿ ಸಿ.ಎಂ.ಹ್ಯಾರಿ ಎಂಬವರು ಅವರ ಕಾರಿನಲ್ಲಿ ಮನೆಗೆ ಹೋಗುತ್ತಿರುವಾಗ ಪೊನ್ನಂಪೇಟೆಯ ಜೂನಿಯರ್ ಕಾಲೇಜು ಬಳಿ ಒಂದು ರಿಕ್ಷಾವನ್ನು ಅದರ ಚಾಲಕ ಮೋಸಸ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹ್ಯಾರಿರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯಾಗಿ ರಿಕ್ಷಾದಲ್ಲಿದ್ದ ಮುತ್ತು ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತೋಟಕ್ಕೆ ಅಕ್ರಮ ಪ್ರವೇಶ, ಕಾಫಿ ಕುಯ್ಲು

ಗೋಣಿಕೊಪ್ಪ ಬಳಿಯ ಅರುವತೊಕ್ಲು ನಿವಾಸಿ ಕಾಡ್ಯಮಾಡ ಲೀನಾ ಎಂಬವರಿಗೆ ಅರುವತೊಕ್ಲು ಗ್ರಾಮದಲ್ಲಿರುವ ಕಾಫಿ ತೋಟಕ್ಕೆ ಸಂಬಂಧಿಸಿದಂತೆ ಲೀನಾರವರಿಗೂ ನೆರೆಯ ಬೋಪಣ್ಣ ಮತ್ತು ಸೋಮಣ್ಣ ಎಂಬವರಿಗೂ ವ್ಯಾಜ್ಯವಿದ್ದು ದಿನಾಂಕ 17/12/2019ರಂದು ಲೀನಾರವರು ತೋಟಕ್ಕೆ ಕೆಲಸ ಮಾಡಿಸುವ ಬಗ್ಗೆ ಹೋದಾಗ ಅಲ್ಲಿ ಬೋಪಣ್ಣ ಮತ್ತು ಸೋಮಣ್ಣರವರು ಸೇರಿಕೊಂಡು ಸುಮಾರು 40 – 50 ಜನರನ್ನು ಸೇರಿಸಿಕೊಂಡು ಕಾಫಿ ಕುಯ್ಯುತ್ತಿದ್ದು ಈ ಬಗ್ಗೆ ವಿಚಾರಿಸಿದ ಲೀನಾರವರ ಪತಿ ನಂಜಪ್ಪರವರಿಗೆ ಬೋಪಣ್ಣ ಮತ್ತು ಸೋಮಣ್ಣರವರು ಕೊಲೆ ಬೆದರಿಕೆ ಹಾಕಿ ಸುಮಾರು ರೂ. 3 ಲಕ್ಷ ಬೆಲೆ ಬಾಳುವ 6000 ಕೆ.ಜಿ. ಕಾಫಿಯನ್ನು ಚೀಲಗಳಲ್ಲಿ ತುಂಬಿಸಿ ತೆಗೆದುಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 18/12/2019ರಂದು ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿ ನಿವಾಸಿ ಪಿ.ವಿ.ಸುದೀಶ್ ಎಂಬವರು ಅವರ ಬೈಕಿನಲ್ಲಿ ಸಂತೋಷ್‌ ಎಂಬವರೊಡನೆ ಕಕ್ಕಬೆಯಿಂದ ಸಿದ್ದಾಪುರಕ್ಕೆ ಹೋಗುತ್ತಿರುವಾಗ ಚೆಯ್ಯಂಡಾಣೆ ಬಳಿ ಒಂದು ಕೆಎ-12-ಜೆಡ್-3217ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುದೀಶ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸುದೀಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ಮೇರೆಗೆ ವಿರಾಜಪೇಟೆ ಪೊಲೀಸರು ಪ್ರಕರಂ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 18/12/2019ರಂದು ಶನಿವಾರಸಂತೆ ಬಳಿಯ ಒಡೆಯನಪುರ ನಿವಾಸಿ ವಿ.ಎನ್.ಲೋಕೇಶ್‌ ಎಂಬವರು ಅವರ ಟ್ರ್ಯಾಕ್ಟರಿನಲ್ಲಿ ಹಿತ್ತಲಕೇರಿ ಗ್ರಾಮಕ್ಕೆ ಕೆಲಸದ ನಿಮಿತ್ತ ಹೋಗಿದ್ದಾಗ ಎದುರಿನಿಂದ ಬಂದ ಟ್ರ್ಯಾಕ್ಟರಿನಲ್ಲಿದ್ದ ದಿನೇಶ, ನಟೇಶ, ಯತೀಶ, ಲತೇಶ, ಪ್ರತಾಪ ಮತ್ತು ಪ್ರದೀಪ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕತ್ತಿ ಮತ್ತು ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಲೋಕೇಶ್‌ರವರು ದಿನೇಶ್‌ರವರ ಮೇಲೆ ಹೊಡೆದು ಹಲ್ಲೆ ಮಾಡಿರುವುದಾಗಿ ದಿನೇಶ್‌ರವರೂ ಸಹ ಪ್ರತಿ ದೂರು ನೀಡಿದ್ದು  ಶನಿವಾರಸಂತೆ ಪೊಲೀಸರು ಎರಡೂ ದೂರುಗಳ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.