Crime News

ಮಗು ಸಾವು ಪ್ರಕರಣ ದಾಖಲು

ದಿನಾಂಕ 19-12-2019 ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಶೋಕ್ ಕುಮಾರ್‍ ಜಿ.ಟಿ ಎಂಬವರ 3 ತಿಂಗಳ ಮಗುವನ್ನು ತಿಂಗಳ ಚುಚ್ಚು ಮದ್ದು ಕೊಡಿಸಲು ಹೋಗಿ ಚುಚ್ಚು ಮದ್ದನ್ನು ಕೊಡಿಸಿ ತಮ್ಮ ಮನೆಗೆ ಹೋಗಿದ್ದು ಅಲ್ಲಿ ಮಗುವಿನಲ್ಲಿ ಯಾವುದೇ ಚಲನವಲನ ಇಲ್ಲದೇ ಇದ್ದುದರಿಂದ ಪುನ: ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವೈದ್ಯರ ಸಲಹೆಯಂತೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಮಗು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದು, ಆರೋಗ್ಯದಿಂದ ಇದ್ದ ಮಗುವಿನ ಸಾವಿಗೆ ವೈದ್ಯರು ಕಾರಣರಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಳೆ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 19-12-2019 ರಂದು ಕುಶಾಲನಗರದ ಕೂಡ್ಲೂರು ಗ್ರಾಮದ ಮದನ್ ಕುಮಾರ್ ಎಂಬವರಿಗೆ ಪರಿಚಿಯವಿರುವ ಗೊಂದಿಬಸವನಳ್ಳಿ ಗ್ರಾಮದವರಾದ ನವೀನ, ಸುಬ್ಬ, ಸಂದೀಪ, ಕೂಡಿಗೆ ಗ್ರಾಮದ ದೀಕ್ಷಿತ್, ಪ್ರಜ್ವಲ್ ಹಾಗು ಇತರರು ಸೇರಿ ರಾತ್ರಿ 1-00 ಗಂಟೆಯ ಸಮಯದಲ್ಲಿ ಮದನ್ ಕುಮಾರ್‍ ಮಾದಾಪುರದ ಜಂಬೂರು ಗ್ರಾಮದಲ್ಲಿ ತಂಗಿದ್ದ ಕೊಠಡಿಗೆ ಬಂದು ಹಳೆಯ ದ್ವೇಷದಿಂದ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಕೊಲೆ ಮಾಡುವುದಾಗಿ ಬಬೆದರಿಕೆ ಹಾಕಿದ್ದು  ನಂತರ ಎಲ್ಲರೂ ಸೇರಿ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಬೆಳಗಿನ ಜಾವ 4-00 ಗಂಟೆಗೆ ಕೂಡಿಗೆ ಗ್ರಾಮಕ್ಕೆ ಬಿಟ್ಟು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತೋಟದಿಂದ ಕಾಫಿ ಕಳ್ಳತನ:

ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದ ನಿವಾಸಿ ಕೆ.ಕೆ. ನಂಜಪ್ಪನವರು ದಿನಾಂಕ 17/12/2019  ರಂದು  ತಮ್ಮಕಾಫಿ  ತೋಟಕ್ಕೆ ಹೋಗಿದ್ದು, ಅಲ್ಲಿ ಯಾರೋ ಅಪರಿಚಿತರು ಕಾಫಿಯನ್ನು ಕುಯ್ಯುತ್ತಿದ್ದುದನ್ನು ಗಮನಿಸಿ  ಅವರನ್ನು  ಕಾಫಿ ಕುಯ್ಯುವ ಬಗ್ಗೆ ವಿಚಾರಿಸಿದಾಗ  ಅವರು ಕತ್ತಿಯಿಂದ ಕಡಿದು ಕೊಲೆ ಮಾಡುತ್ತೇವೆಂದು ಬೆದರಿಕೆ   ಹಾಕಿದ್ದು ಅಲ್ಲದೆ ತಾವು ಕುಯ್ದ ಸುಮಾರು 3 ಲಕ್ಷ ರೂ ಮೌಲ್ಯದ 6000  ಕೆ.ಜಿಯಷ್ಟು ಹಣ್ಣು  ಕಾಫಿಯನ್ನು ಚೀಲದಲ್ಲಿ ತುಂಬಿಸಿ ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕೆ.ಕೆ. ನಂಜಪ್ಪನವರ ಪತ್ನಿ ಶ್ರೀಮತಿ ಕೆ.ಎಸ್. ಲೀನಾರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡೀಸೆಲ್ ಗೆ ಬಂದ ವ್ಯಕ್ತಿಗಳಿಂದ ಹಣ ಕಳ್ಳತನ:

ದಿನಾಂಕ 19-12-2019 ರಂದು ಬೆಳಗ್ಗೆ 5-30 ಗಂಟೆಗೆ ಕುಟ್ಟ ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್ ಗೆ KA03-AF-3919 ಸಂಖ್ಯೆಯ  ಮಾರುತಿ  ಸ್ವಿಪ್ಟ್ ಕಾರಿನಲ್ಲಿ 3 ಜನ ಅಪರಿಚಿತರು ಕಾರಿಗೆ ಡೀಸೆಲ್ ಹಾಕುವ ಸಲುವಾಗಿ ಬಂದು ಪೆಟ್ರೋಲ್ ಬಂಕಿನ ಆಯಿಲ್ ರೂಮಿನಲ್ಲಿ ಮಲಗಿದ್ದ ಕಾರ್ಮಿಕ ಅಜಯ್ ರವರನ್ನು ಕರೆದು ಕಾರಿಗೆ ಡೀಸೆಲ್ ಹಾಕುವಂತೆ ಹೇಳಿದ್ದು ಅದರಂತೆ ಅಜಯ್ ರವರು ಮೋಟಾರು ಪಂಪ್ ಚಾಲನೆ ಮಾಡಲು ಹೋದಾಗ  ಆಯಿಲ್ ಕೋಣೆಗೆ ಹೋಗಿ ಅಜಯ್ ಮಲಗಿದ್ದ ಹಾಸಿಗೆಯ ದಿಂಬಿನ ಕೆಳಗೆ ಇಟ್ಟಿದ್ದ 24,200/- ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.