Crime News

ಅಕ್ರಮ ಲಾಟರಿ ಮಾರಾಟ ಪ್ರಕರಣ ದಾಖಲು

ದಿನಾಂಕ 20-12-2019 ರಂದು ಕುಟ್ಟ ಠಾಣಾಧಿಕಾರಿಯವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ಕುಟ್ಟ ಠಾಣಾ ಸರಹದ್ದಿನ ಕೇಂಬುಕೊಲ್ಲಿ ಜಂಕ್ಷನ್‍ ನಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಮಾಡಿ  ದಾಳಿ ನಡೆಸಿದ್ದು,  ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದ 6,000/- ರೂ. ಮೌಲ್ಯದ ಲಾಟರಿ ಟಿಕೇಟುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್‍ ಸೈಕಲನ್ನು ವಶಕ್ಕೆ ಪಡೆದು ಆರೋಪಿ ಎಂ.ರಾಜ @ ಮದ್ರಾಸ್  ಎಂಬಾತನ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆ ದಾಟುತ್ತಿದ್ದ ಬಾಲಕನಿಗೆ ಸ್ಕೂಟರ್‍ ಡಿಕ್ಕಿ:

ದಿನಾಂಕ 18-12-2019 ರಂದು ಸಿದ್ದಾಪುರ ಠಾಣಾ ಸರಹದ್ದಿನ ವಾಲ್ನೂರು ತ್ಯಾಗತ್ತೂರು ಗ್ರಾಮದ ಬಸ್ಸು ನಿಲ್ದಾಣದಲ್ಲಿ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎಂ.ಹೆಚ್. ರಹೀಮ್ ಎಂಬವರ ಅಕ್ಕನ ಮಗ 8 ವರ್ಷದ ಫರ್ರ‍್ ನ್ ಎಂಬವನು ರಸ್ತೆ ದಾಟುತ್ತಿದ್ದ ವೇಳೆ ಕುಶಾಲನಗರದ ಕಡೆಯಿಂದ ಚಂದ್ರ ಎಂಬವರು ತಮ್ಮ ಬಾಪ್ತು ಸ್ಕೂಟರ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಫರ್ರ‍್ ನ್ ಗೆ ಗಾಯಗಳಾಗಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಾನ್-ಬೈಕ್ ಅಪಘಾತ

ದಿನಾಂಕ 20-12-2019 ರಂದು ಬಿಟ್ಟಂಗಾಲ ಗ್ರಾಮದ ಎಂ. ಚೆಂಗಪ್ಪ ಎಂಬವರು ತಮ್ಮ ಬಾಪ್ತು ವ್ಯಾನಿನಲ್ಲಿ  ಹೋಗುತ್ತಿದ್ದು, ಬಿಟ್ಟಂಗಾಲ ಗ್ರಾಮದ ಮುತ್ತಪ್ಪ ದೇವಾಲಯದ ಬಳಿ ಇರುವ ಅಂಗಡಿಯ ಕಡೆಗೆ ಯಾವುದೇ ಮುನ್ಸೂಚನೆ ಇಲ್ಲದೆ ವ್ಯಾನನ್ನು ತಿರುಗಿಸಿದ ಪರಿಣಾಮ ಹಿಂದಿನಿಂದ ಮೋಟಾರ್ ಸೈಕಲಿನಲ್ಲಿ ಬರುತ್ತಿದ್ದ ಅಶೋಕ ಎಂಬವರು ನಿಯಂತ್ರಣ ಕಳೆದುಕೊಂಡು ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.