Crime News
ಕಾರು ಅಪಘಾತ ನಾಲ್ವರಿಗೆ ಗಾಯ:
ನಿಂತಿದ್ದ ಕಂಟೈನರ್ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಮಡಿಕೇರಿ ಹತ್ತಿರದ ಮಂಗಳೂರು ರಸ್ತೆಯಲ್ಲಿ ನಡೆದಿದೆ. ದಿನಾಂಕ 27-5-2018 ರಂದು 01-15 ಗಂಟೆ ಸಮಯದಲ್ಲಿ ಮೈಸೂರಿನ ವಿಜಯನಗರದಲ್ಲಿ ವಾಸವಾಗಿರುವ ಫಿರ್ಯಾದಿ ಸುಮನ್ ಹಾಗು ಅವರ ಮೂರುಜನ ಸ್ನೇಹಿತರು ಕಾರಿನಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಮಡಿಕೇರಿ –ಮಂಗಳೂರು ರಸ್ತೆಯ ಮೊದಲನೇ ತಿರುವಿನಲ್ಲಿ ರಸ್ತೆಬದಿಯಲ್ಲಿ ನಿಂತಿದ್ದ ಕಂಟೈನರ್ ಲಾರಿಯ ಹಿಂಬದಿಗೆ ಕಾರು ಡಿಕ್ಕಿಯಾಗಿದ್ದು, ಪರಿಣಾಮ ಚಾಲಕ ಸೇರಿ ಮೂವರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಾಡು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ವಾರಿಜ ಎಂಬವರ ಮಗ ತೇಜ ಎಂಬವರು ದಿನಾಂಕ 26-5-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮತಿ ವಾರಿಜರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಸಹಜ ಸಾವು ಪ್ರಕರಣ ದಾಖಲು:
ಸೋಮವಾರಪೇಟೆ ತಾಲೋಕು ತ್ಯಾಗತ್ತೂರು ಗ್ರಾಮ ನಿವಾಸಿ ಹಾಲಿ ಕುಶಾಲನಗರದಲ್ಲಿ ವಾಸವಾಗಿದ್ದ ಅಬ್ದುಲ್ ಸಮ್ಮದ್ ಎಂಬವರು ದಿನಾಂಕ 27-5-2018 ರಂದು ತಾನು ವಾಸವಾಗಿದ್ದ ಕೊಠಡಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದ್ದು ಈ ಸಂಬಂಧ ಮೃತನ ಸಹೋದರ ಟಿ.ಎಸ್. ಮೊಹಮ್ಮದ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿಯ ದುರ್ಮರಣ:
ಶನಿವಾರಸಂತೆ ಠಾಣಾ ಸರಹದ್ದಿನ ಹಾರೆಹೊಸೂರು ಗ್ರಾಮದಲ್ಲಿ ದಿನಾಂಕ 27-5-2018 ರಂದು ಬೆಟ್ದಳ್ಳಿ ಗ್ರಾಮದ ಲಕ್ಷ್ಮಣಶೆಟ್ಟಿ ಎಂಬವರು ತಮ್ಮ ಬಾಪ್ತು ಟ್ರ್ಯಾಕ್ಟರ್ ನಲ್ಲಿ ಮರಿಯ ಎಂಬವರನ್ನು ಕೂರಿಸಿಕೊಂಡು ಶನಿವಾರಸಂತೆ ಕಡೆಗೆ ಹೋಗುತ್ತಿದ್ದಾಗ ಮರಿಯರವರು ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನಪ್ಪಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾಫಿ ಖರೀದಿಸಿದ ಹಣ ನೀಡದೆ ವಂಚನೆ:
ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸೂರು ಗ್ರಾಮದ ನಿವಾಸಿ ಕೊಕ್ಕಲೆಮಾಡ ಮಂದಣ್ಣ ಎಂಬವರು ಹಾಗು ಗ್ರಾಮಸ್ಥರು ತಮ್ಮ ಬಾಪ್ತು ಕಾಫಿಯನ್ನು ಕಾಫಿ ಮಿಲ್ ನಡೆಸುತ್ತಿರುವ ಕೇರಳ ನಿವಾಸಿಗಳಾದ ಬೀಜೇಶ್ ಮತ್ತು ಬಿಜು ಜಾಕೂಬ್ ರವರಿಗೆ ಮಾರಾಟ ಮಾಡಿದ್ದು, ಮಾರಾಟ ಮಾಡಿದ ಕಾಫಿಯ ಹಣವನ್ನು ನೀಡದೆ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು:
ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ನಿವಾಸಿ ಲೋಕೇಶ್ ಎಂಬವರು ದಿನಾಂಕ 27-5-2018 ರಂದು ಬೆಳ್ಳೂರು ಗ್ರಾಮದ ಇಟ್ಟೀರ ಪೂವಯ್ಯ ಎಂಬವರ ತೋಟದಲ್ಲಿ ಮರವೇರಿ ಕಪಾತ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವಿದ್ಯುತ್ ಸ್ಪರ್ಷಗೊಂಡು ಮೃತಪಟ್ಟಿದ್ದು, ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.