Crime News

ರಸ್ತೆ ಅಪಘಾತ

ದಿನಾಂಕ 21/12/2019ರಂದು ಮದ್ಯಾಹ್ನ ತಿತಿಮತಿ ಗ್ರಾಮದ ವಿನಾಯಕ ನಗರ ನಿವಾಸಿ ಹೆಚ್‌.ಎಸ್.ಶಿವಾನಂದ ಎಂಬವರು ಅವರ ತಂದೆಯ ಮೋಟಾರು ಬೈಕಿನಲ್ಲಿ ಗೋಣಿಕೊಪ್ಪದಿಂದ ತಿತಿಮತಿಗೆ ಹೋಗುತ್ತಿರುವಾಗ ತಿತಿಮತಿಯ ಗಣಪತಿ ದೇವಸ್ಥಾನದ ಬಳಿ ವಿರಾಜಪೇಟೆ ಕಡೆಯಿಂದ ಮೈಸೂರಿಗೆ ಕೆಎ-57-ಎಫ್-1146ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದ ಪರಿಣಾಮ ಬಸ್ಸಿನ ಹಿಂದಿನ ಭಾಗ ಶಿವಾನಂದರವರ ಬೈಕಿಗೆ ತಗುಲಿ ಶಿವಾನಂದರವರು ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ

ದಿನಾಂಕ  21/12/2019ರಂದು ವಿರಾಜಪೇಟೆ ಬಳಿಯ ಕೆದಮುಳ್ಳೂರಿನಿಂದ ವಿರಾಜಪೇಟೆ ನಗರದ ಕಡೆಗೆ ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ವಿರಾಜಪೇಟೆ ನಗರದ ಬಳಿ ಮಾಳೇಟಿರ ಜೀವನ್‌ ಎಂಬವರು ಅವರ ಚಾಲಕ ನವೀನ್‌ ಎಂಬವರ ಮೂಲಕ ಕೆಎಲ್-51-ಎ-8426ರ ಲಾರಿಯಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ  ಮರಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಮರಳನ್ನು ವಶಪಡಿಸಿಕೊಂಡು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಕುಶಾಲನಗರದ ಇಂದಿರಾ ಬಡಾವಣೆಯಲ್ಲಿರುವ ಸಮಸ್ತ ಮೈಕ್ರೋ ಫೈನಾನ್ಸ್ ಸಂಸ್ಥೆಯು ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರಿಗೆ ಸಾಲ ರೂಪದಲ್ಲಿ  ಕಿರು ಹಣಕಾಸಿನ ನೆರವು ನೀಡುತ್ತಿದ್ದು, ಕಂತಿನಲ್ಲಿ ಸಾಲದ ಹಣವನ್ನು ವಸೂಲು ಮಾಡುತ್ತಿರುವುದಾಗಿದೆ. ಈ ರೀತಿಯಲ್ಲಿ ಸಾಲದ ವಸೂಲಿಗೆ ಶಿವಕುಮಾರ್‌ ಎಂಬವರನ್ನು ಸಂಸ್ಥೆಯು ನೇಮಿಸಿಕೊಂಡಿದ್ದು ಶಿವಕುಮಾರ್‌ರವರು ಸುಮಾರು 19 ಸದಸ್ಯರಿಂದ ಸುಮಾರು ರೂ.96,000/- ಹಣವನ್ನು ಸಂಗ್ರಹಿಸಿ ರಸೀದಿಯನ್ನೂ ನೀಡದೆ, ಸಂಸ್ಥೆಗೂ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 20/12/2019ರಂದು ಶನಿವಾರಸಂತೆ ಬಳಿಯ ಅಂಕನಹಳ್ಳಿ ನಿವಾಸಿ ಪುಟ್ಟಸ್ವಾಮಿ ಎಂಬವರಿಗೆ ಅದೇ ಗ್ರಾಮದ ನಿವಾಸಿ ಗಣೇಶ್‌ ಎಂಬವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 20/12/2019 ರಂದು ಮಡಿಕೇರಿ ಬಳಿಯ ಸ್ಟೀಫನ್‌ ಸಂಕೇತ್‌ ಎಂಬವರು ಅವರ ಸ್ನೇಹಿತ ಅಕ್ಷಯ್ ಎಂಬವರ ಜೊತೆಗೆ ಬೈಕಿನಲ್ಲಿ ಮಡಿಕೇರಿ ಕಡೆಗೆ ಬರುತ್ತಿರುವಾಗ ನಗರದ ಕಮಾನು ಗೇಟ್ ಬಳಿ ಮಡಿಕೇರಿ ಕಡೆಯಿಂದ ಬುತ್ತಿದ್ದ ಒಂದು ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಲಾರಿಯನ್ನು ಅಕ್ಷಯ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅಕ್ಷಯ್‌ ಹಾಗೂ ಸ್ಟೀಫನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.