Crime News

ಓ.ಎಲ್.ಎಕ್ಸ್ ಮೂಲಕ ಕಾರು ಖರೀದಿಸುವಾಗ ವಂಚನೆ

        ಓ.ಎಲ್.ಎಕ್ಸ್ ಮೂಲಕ ಆನ್ ಲೈನ್ ನಲ್ಲಿ ಕಾರು ಖರೀದಿಸಲು ಹೋಗಿ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ. ವಿರಾಜಪೇಟೆ ತಾಲ್ಲೂಕು ಪೊನ್ನಂಪೇಟೆ ಗ್ರಾಮದ ನಿವಾಸಿ ಪೊನ್ನಪ್ಪ ಎಂಬುವವರು ದಿನಾಂಕ: 21-12-2019 ರಂದು ಓ.ಎಲ್.ಎಕ್ಸ್ ನ ಜಾಹೀರಾತಿನಲ್ಲಿ ಕಾರನ್ನು ನೋಡಿದ್ದು, ಖರೀದಿಸಲು ನೀಡಲಾಗಿದ್ದ ದೂರವಾಣಿ ಸಂಖ್ಯೆಗೆ ಕರೆಮಾಡಿದಾಗ ನಂದೀಶ್ ಎಂಬುವವರು ವಾಹನವನ್ನು ಕಳುಹಿಸುವುದಾಗಿ ಹೇಳಿ 64589 ರೂ ಹಣವನ್ನು ಅವರ ಖಾತೆಗೆ ಹಾಕಿಸಿಕೊಂಡು ವಾಹನವನ್ನು ನೀಡದೇ ಮೋಸ ಮಾಡಿದ್ದು ಈ ಬಗ್ಗೆ ಪೊನ್ನಪ್ಪ ರವರು ದಿನಾಂಕ: 23-12-2019 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.