Crime News

ಶಾಲೆ ಕಳ್ಳತನಕ್ಕೆ ಯತ್ನ

ದಿನಾಂಕ 21/12/2019ರಿಂದ 23/12/2019ರ ನಡುವೆ ಸಂಪಾಜೆ ಬಳಿಯ ಚೆಂಬು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕಚೇರಿಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ವಂಚನೆ ಪ್ರಕರಣ

ದಿನಾಂಕ 23/12/2019ರಂದು ಗೋಣಿಕೊಪ್ಪ ನಿವಾಸಿ ಬಿ.ಜಿ.ನಾರಾಯಣ ಎಂಬವರಿಗೆ ರವಿ ಕುಮಾರ್‌ ಎಂಬ ಹೆಸರಿನಿಂದ ಓರ್ವ ವ್ಯಕ್ತಿ ಕರೆ ಮಾಡಿ ನಾರಾಯಣರವರ ಎಟಿಎಂ ಕಾರ್ಡಿನ ಅವಧಿ ಮುಗಿದಿದ್ದು ಅದನ್ನು ನವೀಕರಿಸಲು ನಾರಾಯಣರವರ ಕಾರ್ಡಿನ ಸಂಖ್ಯೆ, ಸಿವಿವಿ ಹಾಗೂ ಒಟಿಪಿ ಸಂಖ್ಯೆಗಳನ್ನು ಬೇಕಿರುವುದಾಗಿ ಅವರನ್ನು ನಂಬಿಸಿ ಅವುಗಳನ್ನು ಪಡೆದು ನಾರಾಯಣರವರ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ರೂ.95,803/- ಹಣವನ್ನು ಲಪಟಾಯಿಸಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿ.ಇ.ಎನ್. ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 24/12/2019ರಂದು ಕೆದಕಲ್ ಗ್ರಾಮದ 7ನೇ ಮೈಲು ನಿವಾಸಿ ಬಿ.ಬಿ.ಲೋಹಿತ್ ಎಂಬವರು ಮನೆಯ ಮಲಗುವ ಕೋಣೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಲೋಹಿತರವರ ಕೌಟುಂಬಿಕ ಕಾರಣಗಳಿಗೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.