Crime News

ಹಲ್ಲೆ ಪ್ರಕರಣ

        ದಿನಾಂಕಃ 25-12-2019 ರಂದು ಸೋಮವಾರಪೇಟೆ ತಾಲ್ಲೂಕು ಬಾಣಾವಾರ ಗ್ರಾಮದ ನಿವಾಸಿಗಳಾದ ರಾಜಣ್ಣ, ಮನು ಹಾಗೂ ಕುಮಾರ, ಪದ್ಮ, ಗಂಗೆ, ಸಿದ್ದಪ್ಪ ಎಂಬುವವರು ಕ್ಷುಲ್ಲಕ ವಿಚಾರಕ್ಕೆ ಪರಸ್ಪರ ಜಗಳ ಮಾಡಿ ಹಲ್ಲೆ ಮಾಡಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

        ದಿನಾಂಕ: 25-12-2019 ರಂದು ವಿರಾಜಪೇಟೆ ತಾಲ್ಲೂಕು ಮಾಕುಟ್ಟ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ3ಲ್-58-ಡಿ-4249 ರ ಸ್ವಿಫ್ಟ್ ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುಗಡೆಯಿಂದ ಬರುತ್ತಿದ್ದ ಕೆಎ02-ಎಮ್ಎನ್-32 18 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂಪತ್ ಕುಮಾರ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಪವನ್ ಕುಮಾರ್ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.