Crime News

ಅಕ್ರಮ ಮರಳು ಸಾಗಾಟ ಪ್ರಕರಣ

        ದಿನಾಂಕ: 26-12-2019 ರಂದು ವಿರಾಜಪೇಟೆ ತಾಲ್ಲೂಕು ಚಾಮಿಯಾಲ ಗ್ರಾಮದ ಬಳಿ ಅಕ್ರಮ ವಾಗಿ ಕೆಎ-12-ಎ-4724 ರ ಪಿಕ್ಅಪ್ ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ವಾಹನ ಮತ್ತು ಮರಳನ್ನು ವಶಕ್ಕೆ ಪಡೆದು ಪಿಕ್ಅಪ್ ಚಾಲಕ ಮತ್ತು ಮಾಲೀಕರ ಮೇಲೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

        ದಿನಾಂಕ: 26-12-2019 ರಂದು ಸೋಮವಾರಪೇಟೆ ತಾಲ್ಲೂಕು ಐಗೂರು ಗ್ರಾಮದ ನಿವಾಸಿ ದಿನೇಶ್ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಬೆಳ್ಳಿಯಪ್ಪ, ರಘು. ಲಾಲು ಮತ್ತು ಪಾಕು ಎಂಬುವವರು ಕ್ಷುಲ್ಲಕ ವಿಚಾರಕ್ಕೆ ಅವಾಚ್ಯ ಪದಗಳಿಂದ ಬೈದು, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು  ಬಗ್ಗೆ ದಿನೇಶ್ ರವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

        ದಿನಾಂಕ: 26-12-2019 ರಂದು ವಿರಾಜಪೇಟೆ ತಾಲ್ಲೂಕು ಕೆ. ಬಾಡಗ ನಿವಾಸಿ ಧನಂಜಯ ಎಂಬುವವರು ವರ ಕಾರಿನಲ್ಲಿ ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ಮಣಿ ಮತ್ತು ಇತರ ಮೂರು ಜನ ಯುವಕರು ಕಾರಿಗೆ ದಾರಿ ಬಿಡುವ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ಧನಂಜಯ ರವರು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.