Crime News

ಹಲ್ಲೆ ಪ್ರಕರಣ 

        ದಿನಾಂಕ: 29-12-2019 ರಂದು ಮಡಿಕೇರಿ ನಗರದ ಗೌಳಿಬೀದಿ ನಿವಾಸಿ ಎಂ.ಎಂ ಭರತೇಶ್ ಎಂಬುವವರು ಮನೆಗೆ ಹೋಗುತ್ತಿರುವಾಗ ಪಕ್ಕದ ಮನೆಯ ವಾಸಿ ರಾಜಸುಬ್ಬಯ್ಯ ಎಂಬುವವರು ಆತನ ಸ್ನೇಹಿತರಾದ ಸುಮನ್ ಮುದ್ದಯ್ಯ ಹಾಗೂ ಜಾಕಿ ಬಾಯ್ ಎಂಬುವವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ತಡೆದು ನಿಲ್ಲಿಸಿ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಭರತೇಶ್ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ 

        ದಿನಾಂಕ: 29-12-2019 ರಂದು ಮಡಿಕೇರಿ ನಗರದ ಗೌಳಿಬೀದಿ ನಿವಾಸಿ ರಾಜಸುಬ್ಬಯ್ಯ ಎಂಬುವವರು ಮನೆಗೆ ಹೋಗುತ್ತಿರುವಾಗ ಪಕ್ಕದ ಮನೆಯ ವಾಸಿ ಎಂ.ಎಂ ಭರತೇಶ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ತಡೆದು ನಿಲ್ಲಿಸಿ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ರಾಜಸುಬ್ಬಯ್ಯ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ

        ದಿನಾಂಕ: 29-12-2019 ರಂದು ಮಡಿಕೇರಿ ಕುಶಾಲನಗರ ಮುಖ್ಯ ರಸ್ತೆಯ ಆನೆಕಾಡು ಬಳಿ ಕೊಳ್ಳೇಗಾಲದ ಬಾಲಕಿಯರ ಪ್ರೌಡ ಶಾಲೆ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಟಿಎನ್-49-ಎಎಫ್-6670 ರ ಬಸ್ಸನ್ನು ಅದರ ಚಾಲಕ ಮಹತಾಬ್ ಉಲ್ಲಾ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬಸ್ಸು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲುಗಳಿಗ ಡಿಕ್ಕಿಯಾಗಿ ಚರಂಡಿಗೆ ನುಗ್ಗಿದ್ದರಿಂದ ಬಸ್ ನಲ್ಲಿದ್ದ ಶಾಲಾ ಮಕ್ಕಳು ಮತ್ತು ಶಿಕ್ಷಕರು ಗಾಯಗೊಂಡಿದ್ದು ಈ ಬಗ್ಗೆ ಮಹದೇವ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ

        ದಿನಾಂಕ: 29-12-2019 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ಮಾರುಕಟ್ಟೆ ಬಳಿ ಮುಖ್ಯರಸ್ತೆಯಲ್ಲಿ ಕೆಎ-51-ಎಎ-2876 ರ ಬೈಕ್ ನಲ್ಲಿ ಪ್ರಜ್ವಲ್ ಎಂಬುವವರು ಸ್ನೇಹಿತ ದರ್ಶನ್ ಎಂಬುವವರೊಂದಿಗೆ ಹೋಗುತ್ತಿರುವಾಗ ರಸ್ತೆ ಬದಿಯಿಂದ ಹೊಸ ಟಾಟಾ ಏಸ್ ವಾಹನವನ್ನು ಅದರ ಚಾಲಕ ನಿರ್ಲಕ್ಷತನದಿಂದ ರಸ್ತೆಗೆ ಚಾಲನೆ ಮಾಡಿ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು ಈ ಬಗ್ಗೆ ಪ್ರಜ್ವಲ್ ರವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.