Crime News

ಹಲ್ಲೆ ಪ್ರಕರಣ

        ದಿನಾಂಕ:01-01-2020 ರಂದು ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಗ್ರಾಮದ 1ನೇ ಬ್ಲಾಕ್ ನಿವಾಸಿ ಸನು ಎಂಬುವವರಿಗೆ ಹೊಸ ವರ್ಷಾಚರಣೆಯ ಕಾರ್ಯಾಕ್ರಮದಲ್ಲಿ ಮಾಡಿದ ಡ್ಯಾನ್ಸ್ ವಿಚಾರದಲ್ಲಿ ಅದೇ ಗ್ರಾಮದ ನಿವಾಸಿಗಳಾದ ವಿಘ್ನೇಶ್, ಕುಟ್ಟ, ಭರತ್, ಸೂರ್ಯ, ಉಮೇಶ, ಎಂಬುವವರು ಜಗಳ ಮಾಡಿ  ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಸನು ರವರ ತಂದ ಸುಕುಮಾರ ರವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ

        ದಿನಾಂಕ: 01-01-2020 ರಂದು ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಗ್ರಾಮದ ನಿವಾಸಿಗಳಾದ ವಿಘ್ನೇಶ್, ಭರತ್, ಶರವಣ, ಸೂರ್ಯ, ಉಮೇಶ, ಅಜಿತ್, ದೊರೆ, ಸಂತೋಷ, ವಿಪಿನ್, ಸೋನು, ಶಿವು, ಮಣಿ ಹಾಗೂ ಇತರರು ಸುಂಟಿಕೊಪ್ಪ 1 ನೇ ಬ್ಲಾಕ್ ನಲ್ಲಿ ನಡೆಯುತ್ತಿದ್ದ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸಾರ್ವಜನಿಕ ಸ್ಥಳದಲ್ಲಿ ಜಗಳ ಮಾಡಲು ಪ್ರಯತ್ನಿಸುತ್ತಿದ್ದವರನ್ನು ತಡೆಯಲು ಹೋದ ಕರ್ತವ್ಯದಲ್ಲಿದ್ದ ಸುಂಟಿಕೊಪ್ಪ ಠಾಣೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಲ್ಲು ಹೊಡೆದು ಗಾಯಗೊಳಿಸಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

        ದಿನಾಂಕ: 13-12-2019 ರಂದು ಸೋಮವಾರಪೇಟೆ ತಾಲ್ಲೂಕು ಮುಳ್ಳುರು ಗ್ರಾಮದ ನಿವಾಸಿ ದಿನೇಶ್ ಎಂಬುವವರು ತಮ್ಮ ಎಸ್.ಬಿ.ಎಂ ಬ್ಯಾಂಕ್ ಎ.ಟಿ.ಎಂ ನಿಂದ 2500 ರೂ ಹಣ ಡ್ರಾ ಮಾಡಿದ ನಂತರ ಖಾತೆಯಲ್ಲಿ 1,19,094 ರೂ ಹಣ ಬಾಕಿ ಉಳಿದಿರುತ್ತದೆ. ನಂತರ ದಿನಾಂಕ: 31-12-2019 ರಂದು ಪುನಃ ಗೋಣಿಕೊಪ್ಪ ಬ್ಯಾಂಕ್ ಎ.ಡಿ.ಎಂ ನಿಂದ ಹಣ ಡ್ರಾ ಮಾಡುವಾಗ ಖಾತೆಯ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಈ ಬಗ್ಗೆ ಪರಿಶೀಲಿಸಿದಾಗ ಯಾರೋ ದಿನೇಶ್ ರವರಿಗೆ ಗೊತ್ತಾಗದಂತೆ ಅವರ ಬ್ಯಾಂಕ್ ಖಾತೆಯಿಂದ 52,277 ರೂ. ಹಣವನ್ನು ಬ್ಯಾಂಕ್ ಖಾತೆಯಿಂದ ತೆಗೆದು ಮೋಸ ಮಾಡಿದ್ದು ಈ ಬಗ್ಗೆ ದಿನೇಶ್ ರವರು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

        ದಿನಾಂಕ: 31-12-2019 ರಂದು ಮಡಿಕೇರಿ ತಾಲ್ಲೂಕು ಭಾಗಮಂಡಲ ಗ್ರಾಮದ ನಿವಾಸಿ ಪುಷ್ಪರಾಜ್ ಮತ್ತು ಬಿಪಿನ್ ಎಂಬುವವರು ಅವರ ಹಾರ್ಡ್ ವೇರ್ ಮಳಿಗೆಯ ಬಳಿ ಸ್ನೇಹಿತರೊಂದಿಗೆ ಮಾತನಾಡಿಕೊಂಡಿರುವಾಗ ಸಣ್ಣಪುಲಿಕೋಡು ಗ್ರಾಮದ ನಿವಾಸಿಗಳಾದ ಲವ, ರಂಜಿತ್ ಮತ್ತು ಚೇರಂಗಾಲ ಗ್ರಾಮದ ನಿವಾಸಿ ಕುಮಾರ ಎಂಬುವವರು ವೈಯಕ್ತಿಕ ವಿಚಾರಕ್ಕೆ ಜಗಳ ಮಾಡಿ ಹಲ್ಲೆ ಮಾಡಿದ್ದು ಪುಷ್ಪರಾಜ್, ಬಿಪಿನ್ ರವರು ಅಲ್ಲಿದ್ದ ತಪ್ಪಿಸಿಕೊಂಡು ಮನೆಗೆ ಬಂದಿರುತ್ತಾರೆ. ನಂತರ ಮೇಲ್ಕಂಡ ಆರೋಪಿಗಳು ಮನೆಯ ಬಳಿ ಬಂದು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಪುಷ್ಪರಾಜ್ ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

        ದಿನಾಂಕ: 01-01-2020 ರಂದು ಸೋಮವಾರಪೇಟೆ ತಾಲ್ಲೂಕು ಕೊಡಗರಹಳ್ಳಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-04-ಎಂಯು-3230 ರ ಕಾರನ್ನು ಅದರ ಚಾಲಕಿ ಅತಿವೇಗ ಮತ್ತು ಅಜಾಜರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗು ಎದುರುಗಡೆಯಿಂದ ಬರುತ್ತಿದ್ದ ಕೆಎ-19-ಎಫ್-3170 ರ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದು ಈ ಬಗ್ಗೆ ಬಸ್ ಚಾಲಕ ಸಮೀರ್ ಖಾನ್ ಎಂಬುವವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.