Crime News

ರಸ್ತೆ ಅಪಘಾತ

              ದಿನಾಂಕ 28/05/2018ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಪಿ.ಜಯಸೂರ್ಯನ್ ಎಂಬವರು ಕಾಸರಗೋಡಿನಿಂದ ಬೆಂಗಳೂರಿಗೆ ಅವರ ಬೈಕಿನಲ್ಲಿ ಹೋಗುತ್ತಿರುವಾಗ ಮಡಿಕೇರಿ ನಗರದ ಅರಣ್ಯ ಭವನದ ಬಳಿ ಎದುರಿನಿಂದ ಒಂದು ಟಿಎನ್‌-34-ಹೆಚ್-0883 ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಯಸೂರ್ಯನ್‌ರವರ ಬೈಕಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ

                ದಿನಾಂಕ 27/05/2018ರಂದು ಮಡಿಕೇರಿ ನಗರದ ಮಂಗಳಾದೇವಿ ನಗರದ ನಿವಾಸಿ ಹೆಚ್‌.ಎಸ್.ಗೋಪಾಲ್ ಎಂಬವರು ಮೈಸೂರು ರಸ್ತೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಗರದ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗೋಪಾಲ್‌ರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ  ವ್ಯಕ್ತಿ ಸಾವು

                 ದಿನಾಂಕ 28/05/2018ರಂದು ಮಡಿಕೇರಿ ನಗರದ ಪತ್ರಿಕಾ ಭವನದ ಬಳಿಯ ಪ್ರಶಾಂತ್‌ ವುಡ್‌ ವರ್ಕ್ಸ್ ಸಂಸ್ಥೆಯ ಎದುರಿನ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವುದಾಗಿ ಸಂಸ್ಥೆಯ ಮಾಲೀಕ ಡಿ.ಪ್ರಶಾಂತ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ರಿಕ್ಷಾ ಡಿಕ್ಕಿ

                ದಿನಾಂಕ 28/05/2018ರಂದು ಸಿದ್ದಾಪುರ ಬಳಿಯ ಗುಹ್ಯ ನಿವಾಸಿ ಪಿ.ಎ.ಜಾನ್‌ ಎಂಬವರು ಅವರ ಇನ್ನೋವಾ ಕಾರಿನಲ್ಲಿ ಕರಡಿಗೋಡು ರಸ್ತೆಯಲ್ಲಿ ಸಿದ್ದಾಪುರ ಕಡೆಗೆ ಬರುತ್ತಿರುವಾಗ ಗ್ರಾಮದ ರಸ್ತೆಯ ತಿರುವಿನಲ್ಲಿ ಸಿದ್ದಾಪುರ ಕಡೆಯಿಂದ ಒಂದು ರಿಕ್ಷಾವನ್ನು ಅದರ ಚಾಲಕ ಇಮ್ರಾನ್‌ ಖಾನ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಕೊಂಡು ಬಂದು ಜಾನ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

                 ದಿನಾಂಕ 25/05/2018ರ ರಾತ್ರಿ ವೇಳೆ ಯಾರೋ ಕಳ್ಳರು ಗೋಣಿಕೊಪ್ಪ ನಗರದ ಕೂರ್ಗ್‌ ಡಯಾಗ್ನಸ್ಟಿಕ್ ಸೆಂಟರ್‌ನ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು ಅಲ್ಲಿನ ಡ್ರಾಯರಿನಲ್ಲಿದ್ದ ಸುಮಾರು ರೂ.2,000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ  ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

                  ದಿನಾಂಕ 28/05/2018ರಂದು ಪೊನ್ನಂಪೇಟೆ ಬಳಿಯ ಬೇಗೂರು ನಿವಾಸಿ ಕಾರಪಂಡ ಪ್ರಕಾಶ ಎಂಬವರು ಮನೆಯ ಬಳಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಅವಘಢ

                  ದಿನಾಂಕ 27/05/2018ರಂದು ಮಾದಾಪುರ ಬಳಿಯ ಶಿರಂಗಳ್ಳಿ ನಿವಾಸಿ ಸುಜನ್‌ ಎಂಬವರ ಕಾರನ್ನು ಅವರ ಸ್ನೇಹಿತ ಬೋಪಣ್ಣರವರ ಚಾಲನೆಯಲ್ಲಿ ಇಬ್ಬರೂ ಮಡಿಕೇರಿಯಿಂದ ಮಾದಾಪುರಕ್ಕೆ ಹೋಗುತ್ತಿರುವಾಗ ಮಾದಾಪುರದ ಬಳಿಯ ಶಂಷುದ್ದೀನ್ ಎಂಬವರ ಮನೆಯ ಬಳಿ ಕಾರನ್ನು ಬೋಪಣ್ಣರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಕಾಂಪೌಂಡ್‌ಗೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

                     ದಿನಾಂಕ 27/05/2018ರಂದು ಸೋಮವಾರಪೇಟೆ ಬಳಿಯ ಐಗೂರು ನಿವಾಸಿ ಭಾಸ್ಕರ್‌ ಎಂಬವರು ಕುಶಾಲನಗರದ ಮಹಾರಾಜ ಹೋಟೆಲಿನ ಬಳಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಒಂದು ಬಸ್ಸನ್ನು ಅದರ ಚಾಲಕ ಮಾರುತಿ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭಾಸ್ಕರ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಭಾಸ್ಕರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಅಪಘಾತ

                    ದಿನಾಂಕ 27/05/2018ರಂದು ಮಂಡ್ಯ ನಿವಾಸಿ ಮಂಡ್ಯದ ನಿವಾಸಿಗಳಾದ ಕೀರ್ತಿ ಕುಮಾರ ಮತ್ತು ಪ್ರಥ್ವಿರಾಜ್ ಎಂಬವರು ನಂಜರಾಯಪಟ್ಟಣಕ್ಕೆ ಬಂದಿದ್ದು ಅಲ್ಲಿ ಕೀರ್ತಿ ಕುಮಾರ್‌ರವರು ರಸ್ತೆ ಬದಿ ಜೀಪು ಚಾಲಕನೊಂದಿಗೆ ಮಾತನಾಡುತ್ತಾ ನಿಂತಿರುವಾಗ ಸಿದ್ದಾಪುರ ಕಡೆಯಿಂದ ಒಂದು ಜೀಪನ್ನು ಅದರ ಚಾಲಕ ಹೇಮರಾಜ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೀರ್ತಿ ಕುಮಾರ್‌ರವರಿಗೆ ಡಿಕ್ಕಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಂಗ್ರಹ

                         ದಿನಾಂಕ 28/05/2018ರಂದು ಪೊನ್ನಂಪೇಟೆ ಬಳಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಪಡೆದ ಮಡಿಕೇರಿಯ ಗಣಿ ಇಲಾಖೆಯ ಭೂ ವಿಜ್ಞಾನಿ ಕೆ.ಎಸ್..ನಾಗೇಂದ್ರಪ್ಪನರವರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಲಕ್ಷ್ಮಣ ತಿರ್ಥ ಹೊಳೆಯಿಂದ ಗ್ರಾಮದ ನಿವಾಸಿಗಳಾದ ಹೆಚ್‌.ಆರ್.ಪ್ರಮೋದ್‌ ಮತ್ತು ಜೋಯಪ್ಪ ಎಂಬವರು ಅಕ್ರಮವಾಗಿ ಮರಳನ್ನು ಸಂಗ್ರಹಿಸಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.