Crime News

ಕಾರು ಡಿಕ್ಕಿ ಪಾದಚಾರಿಗೆ ಗಾಯ    

        ದಿನಾಂಕ:31-12-2019 ರಂದು ವಿರಾಜಪೇಟೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಕೆಎ12-ಜೆಡ್-6137 ರ ಕಾರನ್ನು ಅದರ ಚಾಲಕ ಉತ್ತಪ್ಪ ಎಂಬುವವರು ಹಿಮ್ಮುಖ ಚಾಲನೆ ಮಾಡುತ್ತಿರುವಾಗ ನಿರ್ಲಕ್ಷತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಚೆಂಬೆ ಬೆಳ್ಳೂರು ಗ್ರಾಮದ ನಿವಾಸಿ ದೇವಮಾಜಿ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು ಈ ಬಗ್ಗೆ ಜಯಕುಮಾರ್ ಎಂಬುವವರು ದಿನಾಂಕ: 02-01-2020 ರಂದು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಂಗ್ರಹಣೆ ಪ್ರಕರಣ

        ದಿನಾಂಕ: 31-12-2019 ರಂದು ಸೋಮವಾರಪೇಟೆ ತಾಲ್ಲೂಕು ಕಿರುಬಿಳಹ ಗ್ರಾಮದ ನಾಗಮ್ಮ ಎಂಬುವವರು ಗದ್ದೆಯ ಬಳಿಯ ಹೊಳೆಯಿಂದ ಹಿಟಾಚಿ ಯಂತ್ರ ಬಳಸಿ ಅಕ್ರಮವಾಗಿ ಮರಳನ್ನು ತೆಗೆದು ಸಂಗ್ರಹಣೆ ಮಾಡಿದ್ದ ಪ್ರಕರಣವನ್ನು ಪತ್ತೆಮಾಡಿ ಆದಿ, ರಘು, ವೆಂಕಟೇಶ, ಪಾಪಣ್ಣ, ಪುನೀತ್ ಎಂಬುವವರ ವಿರುದ್ದ ಮರಳು ಕಳ್ಳತನ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿರುತ್ತಾರೆ.

ಹಲ್ಲೆ ಪ್ರಕರಣ

        ದಿನಾಂಕ: 31-01-2019 ರಂದು ಸೋಮವಾರಪೇಟೆ ತಾಲ್ಲೂಕು ಕೂಡ್ಲೂರು ಗ್ರಾಮದ ಸುಂದರನಗರ ನಿವಾಸಿ ಅಕ್ಷಯ್ ರವರು ಅವರ ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿಗಳಾದ ಪರಮೇಶ್ ಮತ್ತು ಹರೀಶ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಮನೆಯೊಳಗೆ ಹೋಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದು ತಡೆಯಲು ಬಂದ ಅಕ್ಷಯ್ ರವರ ತಾಯಿಯವರಿಗೂ ಹಲ್ಲೆ ಮಾಡಿದ್ದು ಈ ಬಗ್ಗೆ ಅಕ್ಷಯ್ ರವರು ದಿ: 02-01-2020 ರಂದು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.