Crime News

ಕಳವು ಪ್ರಕರಣ

        ದಿನಾಂಕ: 02-01-2020 ರಂದು ವಿರಾಜಪೇಟೆ ತಾಲ್ಲೂಕು ಕಾರ್ಮಾಡು ಗ್ರಾಮದ ನಿವಾಸಿ ಫಿಲೋಮಿನಾ ಎಂಬುವವರ ಅಂಗಡಿಯ ಮೇಲ್ಚಾವಣಿ ಹಂಚನ್ನು ಯಾರೋ ಕಳ್ಳರು ತೆಗೆದು ಅಂಗಡಿ ಒಳಗಿದ್ದ ರೂ.5000 ನಗದು ಮತ್ತು 3000 ರೂ. ಬೆಲೆಯ ದಿನಸಿ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಫಿಲೋಮಿನ ರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್‌ ಡಿಕ್ಕಿ ಪಾದಚಾರಿಗೆ ಗಾಯ

        ದಿನಾಂಕ: 03-01-2020 ರಂದು ವಿರಾಜಪೇಟೆ ತಾಲ್ಲೂಕು ತಿತಿಮತಿ ಗ್ರಾಮದ ಬಳಿ ಬಾಳೆಲೆ ರಸ್ತೆಯಲ್ಲಿ ಮಂಜು ಎಂಬುವವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-12-ಬಿ-2268 ರ ಖಾಸಗಿ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಮಂಜುರವರು ತೀವ್ರ ಗಾಯಗೊಂಡಿದ್ದು ಈ ಬಗ್ಗೆ ಸತೀಶ ಎಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ 

        ದಿನಾಂಕ: 03-01-2019 ರಂದು ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದ ಪೂಜೆಕಲ್ಲು ನಿವಾಸಿ ಯಾಹುದ್ದೀನ್ ಎಂಬುವವರು ಕುಟ್ಟ ಮಸೀದಿಗೆ ಹೋಗಿ ಹೊರಗೆ ನಿಂತಿರುವಾಗ ಮಸೀದಿ ಅಧ್ಯಕ್ಷರಾದ ಮೊಹಿದ್ದೀನ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ತಡೆದು ತಳ್ಳಿ ಅವಾಚ್ಯ ಪದಗಳಿಂದ ಬೈದು ಬೆದರಿಕೆ ಹಾಕಿದ್ದು ಈ ಬಗ್ಗೆ ಯಾಹುದ್ದೀನ್ ರವರು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

        ದಿನಾಂಕ: 02-01-2020 ರಂದು ಸೋಮವಾರಪೇಟೆ ತಾಲ್ಲೂಕು ಸುಂದರನಗರ ಗ್ರಾಮದ ನಿವಾಸಿ ಪೌಲ್ ಸನ್ ಎಂಬುವವರ ಮನೆಗೆ ಜ್ಞಾನಶೇಖರ, ಶಾಂತ, ಜಾನ್ಸನ್, ವಿಕ್ಟರ್ ಎಂಬುವವರು ವೈಯಕ್ತಿಕ ಕಾರಣಕ್ಕೆ ಏಕಾಏಕಿ ಮನೆಯೊಳಗೆ ನುಗ್ಗಿ ಅವಾಚ್ಯಪದಗಳಿಂದ ಬೈದು ಹಲ್ಲೆ ಮಾಡಿದ್ದು ಈ ಬಗ್ಗೆ ಪೌಲ್ ಸನ್ ರವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.