Crime News

ಶ್ರೀಮಂಗಲ ಪೊಲೀಸರಿಂದ ಕಾಣೆಯಾಗಿದ್ದ ಮಗು ಪತ್ತೆ:

            ವಿರಾಜಪೇಟೆ ತಾಲ್ಲೂಕು ವೆಸ್ಟ್‌ ನೆಮ್ಮೆಲೆ ಗ್ರಾಮದ ಪೆಮ್ಮಂಡ ರಾಜು ಎಂಬುವವರ ಲೈನ್‌ ಮನೆಯಲ್ಲಿ ತಮಿಳುನಾಡು ಮೂಲದ ನಾಗರಾಜು ಎಂಬುವವರು ಕಾಫಿ ತೋಟದ ಕೆಲಸಕ್ಕೆ ಬಂದು ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದರು.  ದಿನಾಂಕ: 05-01-2020 ರಂದು ಕಾಫಿ ತೊಟದ ಕೆಲಸ ಮಾಡುತ್ತಿದ್ದಾಗ ನಾಗರಾಜು ರವರು ಮಗಳನ್ನು ಕಾಫಿ ಗಿಡಕ್ಕೆ ಸೀರೆಯಿಂದ ಕಟ್ಟಿದ ಜೋಲಿಯಲ್ಲಿ ಮಲಗಿಸಿ ಆಗಿಂದಾಗ್ಗೆ ನೋಡಿಕೊಂಡು ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿ ನೋಡಿದಾಗ ಮಗಳು ಜೋಲಿಯಲ್ಲಿ ಇಲ್ಲದಿದ್ದುದನ್ನು ಕಂಡು ಸುತ್ತಮುತ್ತ ಹುಡುಕಿದರೂ ಮಗಳು ಪತ್ತೆಯಾಗದೇ ಇದ್ದುದರಿಂದ ನಾಗರಾಜು ರವರು ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪಿಎಸ್ಐ ರವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಕುಟ್ಟ ವೃತ್ತ ನಿರೀಕ್ಷಕರು ಹಾಗೂ ವಿರಾಜಪೇಟೆ ಉಪವಿಭಾಗ ಡಿವೈ.ಎಸ್.ಪಿ ರವರಿಗೆ ಪ್ರಕರಣದ ಮಾಹಿತಿ ನೀಡಿರುತ್ತಾರೆ.  ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರರಾದ ಡಾ. ಸುಮನ್ ಡಿ.ಪಿ, ರವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಉಪವಿಭಾಗ ಡಿವೈ.ಎಸ್.ಪಿ ಸಿ.ಟಿ ಜಯಕುಮಾರ್ ರವರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಕುಟ್ಟ ವೃತ್ತ ನಿರೀಕ್ಷಕರು, ಶ್ರೀಮಂಗಲ ಮತ್ತು ಕುಟ್ಟ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಅರಣ್ಯ ಇಲಾಖೆ ಸಿಬ್ಬಂದಿಯವ ರ ಸಹಕಾರದೊಂದಿಗೆ ಕಾಫಿ ತೋಟದಲ್ಲಿ ಹುಡುಕಾಟ ನಡೆಸಿ ದಿನಾಂಕ: 06-01-2020 ರಂದು ಬೆಳಿಗ್ಗೆ ಕಾಣೆಯಾಗಿದ್ದ ಮಗುವನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

        ದಿನಾಂಕ: 05-01-2020 ರಂದು ಮಡಿಕೇರಿ ನಗರದ ಮಹದೇವಪೇಟೆ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಜೆ-0677 ರ ಬೈಕ್ ಸವಾರ ಬೈಕನ್ನು ಅತವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-12-4121 ರ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ  ಇಬ್ಬರು ಹಾಗೂ ಬೈಕ್ ನಲ್ಲಿದ್ದ ಬ್ಬರು ಸವಾರರು ಗಾಯಗೊಂಡಿದ್ದು ಈ ಬಗ್ಗೆ ರಿಕ್ಷಾ ಚಾಲಕ ಕುಮಾರ್ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

        ದಿನಾಂಕ: 05-01-2020 ರಂದು ವಿರಾಜಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದ ನಿವಾಸಿ ರಾಜು ಎಂಬುವವರು ಅವರ ಪತ್ನಿ  ಮೃತಪಟ್ಟಿರುವ ವಿಚಾರದಲ್ಲಿ ಮನಸ್ಸಿಗೆ ಬೇಸರಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಮಗಳ ನೀಡಿದ ಪುಕಾರಿನ ಮೇರ ಗೊಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.