Crime News

ವ್ಯಕ್ತಿ ಕಾಣೆ

ದಿನಾಂಕ:20-12-2019 ರಂದು ಸೋಮವಾರಪೇಟೆ ತಾಲ್ಲೂಕು 7ನೇ ಹೊಸಕೋಟೆ ಗ್ರಾಮದ ನಿವಾಸಿ ಟಿ.ಕೆ.ಸುರೇಶ್ ಎಂಬುವವರು ಮನೆಯಿಂದ ತೆರಳಿದವರು ಈ ವರೆಗೂ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಸುರೇಶ್ ರವರ ಪತ್ನಿ ದಿನಾಂಕ: 06-01-2020 ರಂದು ನೀಡಿದ ದೂರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 06-01-2020 ರಂದು ಸೋಮವಾರಪೇಟೆ ತಾಲ್ಲೂಕು ಮುಳ್ಳೂರು ಗ್ರಾಮದ ನಿವಾಸಿ ಕರುಣೇಶ್ ಎಂಬುವವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಶನಿವಾರಸಂತೆಯ ಗಂಗಾ ಲಾಡ್ಜ್ ನ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮನೋಜ್ ಎಂಬುವವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ರೆಡಿಟ್ ಕಾರ್ಡ್ ವಂಚನೆ

            ದಿನಾಂಕ: 06-01-2020 ರಂದು ಮಡಿಕೇರಿ ನಗರದ ಹೊಸಬಡಾವಣೆ ನಿವಾಸಿ ಸಬಾಸ್ಟಿನ್ ಎಂಬುವವರು ಅವರ ಹೆಚ್.ಡಿ.ಎಫ್.ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡನ್ನು ಮನೆಯಲ್ಲಿಯೇ ಇಟ್ಟು ಅವರ ಅಂಗಡಿಗೆ ಹೋಗಿದ್ದು ಅವರ ಕ್ರೆಡಿಟ್ ಕಾರ್ಡ್ ಖಾತೆಯಿಂದ ಯಾರೋ ಅಪರಿಚಿತರು 82267 ರೂ. ಹಣವನ್ನು ತೆಗೆದು ವಂಚನೆ ಮಾಡಿದ್ದು ಈ ಬಗ್ಗೆ ಸಬಾಸ್ಟಿನ್ ರವರುನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 05-01-2020 ರಂದು ವಿರಾಜಪೇಟೆ ತಾಲ್ಲೂಕು ಕಾಯಿಮಾನಿ ಗ್ರಾಮದ ಬಳಿ ರಸ್ತೆಯಲ್ಲಿ ಬೈಕ್ ಸವಾರನು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೆಎ-12-ಎಸ್-998 ರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಜಗನ್ನಾಥ ಮತ್ತು ಅವರ ಪತ್ನಿ ಗಾಯಗೊಂಡಿದ್ದು ಈ ಬಗ್ಗೆ ದಿಲೀಪ್ ಕುಮಾರ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ

            ದಿನಾಂಕ: 05-01-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ನಿವಾಸಿ ಚಂದ್ರಶೇಖರ ಎಂಬುವವರು ಎಂದಿನಂತೆ ವ್ಯಾಪಾರಕ್ಕೆ ಮನೆಯಿಂದ ಹೋದವರು ಈ ವರೆಗೂ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಅಕ್ಕಪಕ್ಕದವರಲ್ಲಿ  ನೆಂಟರಿಷ್ಟರಲ್ಲಿ ವಿಚಾರಿಸಿದ್ದು ಪತ್ತೆಯಾಗದೇ ಕಾಣೆಯಾಗಿರುವುದಾಗಿ ಚಂದ್ರಶೇಖರ ರವರ ಪತ್ನಿ ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಭರಣ ಮಳಿಗೆಯಲ್ಲಿ ಕಳವು

            ದಿನಾಂಕ: 05-01-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪದಲ್ಲಿರುವ ಶ್ಯಾಮ ಜುವೆಲ್ಲರ್ಸ್ ಮಳಿಗೆಗೆ ಚಿನ್ನದ ಉಂಗುರ ಖರೀದಿಸುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ಉಂಗುರ ನೋಡುತ್ತಿರುವಾಗ ಮಾರಾಟ ಸಹಾಯಕರಿಗೆ ಗೊತ್ತಾಗದಂತೆ 22,000 ರೂ ಮೌಲ್ಯದ ಒಂದು ಚಿನ್ನದ ಉಂಗುರವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಳಿಗೆಯ ವ್ಯವಸ್ಥಾಪಕರಾದ ಅಶೋಕ ಬಂಗೇರಾ ಎಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.